ಪೂರ್ಣ ಕುಂಭದೊಂದಿಗೆ ಶ್ರೀಗಳ ಭಾವಚಿತ್ರಗಳ ಭವ್ಯ ಮೆರವಣಿಗೆ

A grand procession of Sri's portraits with Purna Kumbha

ಪೂರ್ಣ ಕುಂಭದೊಂದಿಗೆ ಶ್ರೀಗಳ ಭಾವಚಿತ್ರಗಳ ಭವ್ಯ ಮೆರವಣಿಗೆ  

ಕಾಗವಾಡ 11: ತಾಲೂಕಿನ ಶೇಡಬಾಳದಲ್ಲಿ ಪ್ರಥಮಾಚಾರ್ಯ ಶಾಂತಿಸಾಗರ ಮುನಿಮಹಾರಾಜರ ಆಚಾರ್ಯ ಪದಾರೋಹಣ ಶತಾಬ್ದಿ ವರ್ಷ, ಶೇಡಬಾಳದ ಸುಪುತ್ರ ರಾಷ್ಟ್ರಸಂತ ವಿದ್ಯಾನಂದ ಮುನಿ ಮಹರಾಜರ ಜನ್ಮ ಶತಾಬ್ದಿ ವರ್ಷ ಮತ್ತು ಸಿದ್ದೇಶ್ವರ ಶ್ರೀಗಳ ಗುರು ಸ್ಮರಣೋತ್ಸವ ನಿಮಿತ್ಯವಾಗಿ ಶನಿವಾರ ದಿ. 11 ರಂದು ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭದೊಂದಿಗೆ ಭಾವಚಿತ್ರಗಳ ಮೆರವಣಿಗೆ ಜರುಗಿತು. 


ಬೆಳಿಗ್ಗೆ ವಿದ್ಯಾನಂದ ಕನ್ನಡ ಶಾಲಾ ಆವರಣದಲ್ಲಿ ಗಣ್ಯರ ಹಸ್ತದಿಂದ ಕಳಶಗಳ ಪೂಜೆ ನೆರವೇರಿಸಿ, ಆನೆ ಮತ್ತು 3 ರಥಗಳಲ್ಲಿ ಶ್ರೀಗಳ ಭಾವಚಿತ್ರಗಳನ್ನಿಟ್ಟು, 108 ಸುಮಂಗಲೆಯರ ಕಳಸದೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. 


ಮೆರವಣಿಗೆಯ ಮಾರ್ಗದಲ್ಲಿ ಸಾಂಗಲಿಯಿಂದ ಆಗಮಿಸಿದ್ದ ರಂಗೋಲಿ ತಂಡದಿಂದ ಸುಂದರವಾದ ರಂಗೋಲಿ ಬಿಡಸಲಾಗಿತ್ತು. ಜೊತೆಗೆ ದಾರಿಯುದ್ದಕ್ಕೂ ಪುಷ್ಪವೃಷಿ ಮಾಡಲಾಯಿತು. ಶ್ರಾವಕ-ಶ್ರಾವಕಿಯರು ಮೆರವಣಿಗೆ ಸ್ವಾಗತ ಕೋರಿ, ನೀರು ಹಾಕಿ ಬರ ಮಾಡಿಕೊಂಡರು.  


ವಿದ್ಯಾನಂದ ಮುನಿ ಮಹರಾಜರ ಪುತ್ಥಳಿ ಎದುರಿಗೆ ಪ್ರತಿಷ್ಠಾಚಾರ್ಯ ಕುಮಾರ ಅಲಗೌಡರ ನೇತೃತ್ವದಲ್ಲಿ ಸನ್ಮತಿ ಉಪಾಧೆ್ಯ, ಭರತ ಉಪಾಧ್ಯೆ, ಬಾಹುಬಲಿ ಉಪಾಧ್ಯೆ ಇವರ ಮಂತ್ರೋದ್ಘಾರದೊಂದಿಗೆ ಸುಮಂಗಲೆಯರ ಕುಂಭದ ಜಲಕಲಶದ ಕಾರ್ಯಕ್ರಮ ಜರುಗಿತು.  


ಪ್ರಕಾಶ ನಾಂದ್ರೆ, ಖ್ಯಾತ ವೈದ್ಯರಾದ ಡಾ. ಅಶೋಕ ಪಾಟೀಲ, ಮಾಜಿ ಮಂಡಲ ಪಂಚಾಯತಿ ಅಧ್ಯಕ್ಷ ನೇಮಿನಾಥ ನರಸಗೌಡರ, ಭರತೇಶ ಪಾಟೀಲ, ವೃಷಭ ಚೌಗಲೆ, ನಿರಂಜನ ನರಸಗೌಡರ, ಪ್ರಕಾಶ ಯಂದಗೌಡರ, ಪ.ಪಂ. ಅಧ್ಯಕ್ಷ ಉತ್ಕರ್ಷ ಪಾಟೀಲ, ಸನ್ಮತಿ ಶಿಕ್ಷಣ ಸಮಿತಿ ಅಧ್ಯಕ್ಷ ವಿನೋದ ಬರಗಾಲೆ, ಶಾಂತಿಸಾಗರ ಆಶ್ರಮದ ವ್ಯವಸ್ಥಾಪಕ ರಾಜು ನಾಂದ್ರೆ, ಪ್ರಕಾಶ ಮಾಳಿ, ಮಹಿಳಾ ಮಂಡಳ ಅಧ್ಯೆಕ್ಷೆ ಸುಜಾತಾ ಯಂದಗೌಡರ, ಮಹಾವೀರ ನಾಂದ್ರೆ, ಮಹಾವೀರ ಸಾಬನ್ನವರ ಉಪಸ್ಥಿತರಿದ್ದರು 


*** ನಾಳೆಯ ಕಾರ್ಯಕ್ರಮ: 

ರವಿವಾರದಂದು ಬೆಳಿಗ್ಗೆ 11 ಗಂಟೆಗೆ ಭಟ್ಟಾರಕ ಸ್ವಾಮಿಜಿಗಳು, ಯಡೂರ ಶ್ರೀಶೈಲ ಜಗದ್ಗರು ಇವರ ಸಾನಿಧ್ಯದಲ್ಲಿ ಕೀರ್ತಿಸ್ತಂಭದ ಲೋಕಾರೆ​‍್ಣ ಹಾಗೂ ಸ್ಮರಣ ಗ್ರಂಥ ಬಿಡುಗಡೆ ಕಾರ್ಯಕ್ರಮ ಜರುಗಲಿದೆಂದು ಕಾರ್ಯಕ್ರಮದ ಸಂಯೋಜಕರಾದ ಪ್ರಕಾಶ ನಾಂದ್ರೆ ತಿಳಿಸಿದ್ದಾರೆ.