17 ರಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಆರಂಭ

ಬಾಗಲಕೋಟೆ 14: ಶಿಕ್ಷಣದಿಂದ ವಂಚಿತರಾಗಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗ್ರಾಮವಾರು ಗುರುತಿಸಲು ಇದೇ ನವೆಂಬರ 17 ರಿಂದ 28 ರವರೆಗೆ ಸಮೀಕ್ಷೆ ಆರಂಭವಾಗಲಿದ್ದು, ಶಿಕ್ಷಣಾಧಿಕಾರಿಗಳು ನಿರ್ಲಕ್ಷ ವಹಿಸದೇ ಆಸಕ್ತಿಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಕರೆ ನೀಡಿದರು.

ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿಂದು ಈ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 1315 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಅಂಥ ಮಕ್ಕಳ ಪತ್ತೆ ಹಚ್ಚಲು ಶಿಕ್ಷಣ ಇಲಾಖೆಯ ಎಲ್ಲ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕೆಂದರು. ಶಿಕ್ಷಣ ಇಲಾಖೆಯ ಎಲ್ಲ ಶಿಕ್ಷಕರು ಪಿಡಿಓಗಳು, ಆಶಾ-ಅಂಗನವಾಡಿ ಕಾರ್ಯಕತರ್ೆಯರು ತಂಡ ರಚಿಸಿಕೊಂಡು ಮನೆ ಮನೆ ಭೇಟಿ ನೀಡಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ನಿಗತ ತುಂಬತಕ್ಕಂರು.

ತಲಾ 50 ಮೆನಗೊಂದು ಒಬ್ಬ ಶಿಕ್ಷಕರಂತೆ ನಿಗಿಗೊಳಿಸಿ ಪ್ರತಿ ಮನೆಗೆ ಭೇಟಿ ನೀಡಿ ವಿವರ ಪಡೆಯತಕ್ಕದ್ದು. ಸಮೀಕ್ಷೆ ಮುಗಿದ ತಕ್ಷಣ ಆಯಾ ಮನೆಗೆ ಸ್ಟಿಕರ್ಸ ಅಂಟಿಸತಕ್ಕದ್ದು. ಮನೆಗಳ ಪಟ್ಟಿಯನ್ನು ಪಿಡಿಓಗಳಿಂದ ಪಡೆದು ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಒಂದು ಗ್ರಾಮ ಪಂಚಾಯತಿಗೆ ಹೈಸ್ಕೂಲ ಶಿಕ್ಷಕರನ್ನು ಸುಪರವೈಜರ್ ಆಗಿ, ಹೋಬಳಿವಾರು ಬಿಆರ್ಸಿಗಳು ಕೋಆಡರ್ಿನೇಟರ್ ಹಾಗೂ ಬಿಇಓಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ವಾಟ್ಸ್ಅಪ್ ಗ್ರುಪ್ ಮಾಡತಕ್ಕದೆಂದರು. ಗ್ರಾಮ ಪಂಚಾಯತಿ ಸುಪರ್ ವೈಜರಗಳು ಒಟ್ಟು ಮನೆಗಳ ಶೇ.10 ರಷ್ಟು ಮನೆಗಳಿಗೆ ಕಡ್ಡಾಯವಾಗಿ ಹಾಗೂ ಹೋಬಳಿ ನೋಡಲ್ ಅಧಿಕಾರಿಗಳು ಶೇ.2 ರಷ್ಟು ಮನೆಗಳಿಗೆ ತಪ್ಪದೇ ಭೇಟಿ ನೀಡಿ ಸಮೀಕ್ಷೆಯಾಗಿರುವ ಬಗ್ಗೆ ಖಚಿತಪಡಿಸತಕ್ಕದೆಂದರು.

ಜಿ.ಪಂ ಉಪ ಕಾರ್ಯದಶರ್ಿ ಅಮರೇಶ ನಾಯಕ ಅವರು ಮಾತನಾಡಿ ಗ್ರಾಮಸಭೆಗಳಲ್ಲಿ ಈ ಅಂಶವನ್ನು ಪ್ರಮುಖ ಆದ್ಯತೆಯಾಗಿ ಚಚರ್ಿಸುವಂತೆ ಸೂಚಿಸಿದರು. ಶಾಲೆಯಿಂದ ಹೊರಗುಳಿದ ಪ್ರತಿ ಮಗುವಿನ ವಿವರ, ತಂದೆ-ತಾಯಿ ವಿವರ ಹಾಗೂ ಭಾವಚಿತ್ರವನ್ನು ನಮೂನೆಯಲ್ಲಿ ಭರಿಸತಕ್ಕದೆಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕಿ ಎಂ.ಆರ್.ಕಾಮಾಕ್ಷಿ ಮಾತನಾಡಿ ಬಾದಾಮಿಯಲ್ಲಿ 219, ಬಾಗಲಕೋಟೆಯಲ್ಲಿ 80, ಬೀಳಗಿಯಲ್ಲಿ 71, ಹುನಗುಂದದಲ್ಲಿ 261, ಜಮಖಂಡಿಯಲ್ಲಿ 261, ಮುಧೋಳದಲ್ಲಿ 268 ಮಕ್ಕಳು ಶಾಲೆಯಿಂದ ಹೊರಗುಳಿದ್ದಾರೆಂದು ಸಭೆಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರಚಾರದ ಪೋಸ್ಟರಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.