ಲೋಕದರ್ಶನ ವರದಿ
ಮುಧೋಳ 23: ಮುನಿಶ್ರೀ ಸಿದ್ಧಸೇನಾಚಾರ್ಯರು ಹಾಗೂ ಧರ್ಮಸ್ಥಳದ ಧಮರ್ಾಧಿಕಾರಿ ರಾಜಷರ್ಿ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ನಾಡೋಜ ಹಿರಿಯ ಸಾಹಿತಿ ಹಂಪನಾರವರು ರನ್ನ ಮುಧೋಳದ ಹಿರಿಯ ಸಾಹಿತಿ ಎಸ್,ಎಸ್, ಉಕ್ಕಲಿಯವರು ಹಳೆಗನ್ನಡದ ಮಹಾಕಾವ್ಯ ಆದಿಪುರಾಣ ಗ್ರಂಥವನ್ನು ಹೊಸಗನ್ನಡಕ್ಕೆ ಕಾವ್ಯಾನುವಾದ ಮಾಡಿದ ಗ್ರಂಥವನ್ನು ಧರ್ಮಸ್ಥಳದ ಭಗವಾನ ಬಾಹುಬಲಿಯ ಮಹಾಮಸ್ತಾಭಿಷೇಕ ಸಮಾರಂಭದಲ್ಲಿ ಬಿಡುಗಡೆಗೊಳಿಸಿಲಾಯಿತು.
ಸಾಹಿತಿ ಎಸ್.ಎಸ್. ಉಕ್ಕಲಿಯವರು ಬರೆದ ರನ್ನನ ಗದಾಯುದ್ದ ಕಾವ್ಯವನ್ನು ಹೊಸಗನ್ನಡಕ್ಕೆ ಕಾವ್ಯಾನುವಾದ ಮಾಡಿ ರನ್ನಮಯ ಕೃತಿಯನ್ನು ರಚಿಸಿದ್ದಾರೆ. ಈ ಕೃತಿ ಬಾಗಲಕೋಟೆ ಜಿಲ್ಲೆಯ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಿದ್ದು, ಪಂಪಭಾರತ ಕೃತಿಯು ಜೈನ ಕಾಶಿ ಎಂದೆ ಹೆಸರಾದ ಶ್ರವಣ ಬೆಳಗೊಳದ ಕನರ್ಾಟಕ ಜೈನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ.
ಅಲ್ಲದೆ ಈ ಸಾಹಿತಿಗಳು ಸೂರ್ಯಪುತ್ರ ಖಂಡಕಾವ್ಯವನ್ನು ರಚಿಸಿದ್ದಾರೆ, ಈಗ ಇವರು ಕರ್ಣಪಾರ್ಯರವರು ಬರೆದ ಹಳೆಗನ್ನಡದ ಕಾವ್ಯವಾದ ನೇಮಿನಾಥ ಪುರಾಣವನ್ನು ಹೊಸಗನ್ನಡಕ್ಕೆ ಕಾವ್ಯಾನುವಾದ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.