ಲೋಕದರ್ಶನ ವರದಿ
ಮುಧೋಳ 23: ಆಸರೆ ಬಯಸಿ ಬಂದ ಅನಾಥ ಮಕ್ಕಳಿಗೆ ನಿರುಪಾಶ್ವರ ಅನಾಥಶ್ರಮ ಬದುಕಿಗೆ ಬುನಾದಿಯಾಗಲಿ ಎಂದು ಮರೆಗುದ್ದಿಯ ನಿರುಪಾಶ್ವರ ಶ್ರೀಗಳು ಅಭಿಪ್ರಾಯಪಟ್ಟರು.
ತಾಲೂಕಿನ ಹಿರೇಆಲಗುಂಡಿಯ ಮಾರುತೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಥರ್ಿಗಳ ಬಿಳ್ಕೂಡುವ ಸಮಾರಂಭ ಹಾಗೂ ನಿರುಪಾಶ್ವರ ಕರುಣಿಯ ಕಂದಮಗಳ ಅನಾಥಶ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾಥರ್ಿ ಜೀವನದಲ್ಲಿ ಗುರಿ ಇಟ್ಟುಕೊಂಡು ಭವಿಷ್ಯದಲ್ಲಿ ಬರುವ ಸುಖ ದುಖಗಳನ್ನು ಎದುರಿಸುವ ಸಾಮಥ್ರ್ಯವೇ ಶಿಕ್ಷಣ ಪರಿದಿಯಲ್ಲಿ ಬರುತ್ತದೆ ಎಂದರು.
ಚಿಕ್ಕಾಲಗುಂಡಿ ಸರಕಾರಿ ಪಿಯೂ ಕಾಲೇಜ್ ಉಪನ್ಯಾಸಕ ಎಸ್.ಎಂ.ಶೇಖ ಮಾತನಾಡಿ,ಶಿಕ್ಷಣ ಹಾಗೂ ಧಾಮರ್ಿಕ ಮನೋಭಾವನೆಯಲ್ಲಿ ಸಂಸ್ಕಾರ ಕೊಟ್ಟರೇ ಉತ್ತಮ ಜೀವನ ನಡೆಸಲು ಸಹಾಯಕವಾಗುತ್ತದೆ. ಪ್ರತಿಯೊಬ್ಬರಿಗೂ ಬೇಕಾಗಿರುವುದು ಮೊದಲು ಸೌಜನ್ಯತೆ, ಸಂಸ್ಕಾರವೇ ಮುಖ್ಯವಾಗಿದೆ ಎಂದರು.
ಮಾರುತಿ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಣಮಂತಗೌಡ ಬಿರಾದಾರ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಆರಂಭಿಸಿದರಿಂದ ಅದೆಷ್ಟೋ ಮಕ್ಕಳ ಜೀವನಕ್ಕೆ ಸಂಸ್ಥೆ ಜೀವನಾಡಿಯಾಗಿದೆ. ಹಳೇ ವಿದ್ಯಾಥರ್ಿಗಳಿಗೆ ಸ್ವಾವಲಂಬನೆ ಬದುಕಿಗೆ ಆಧಾರವಾಗಿದೆ. ಅನಾಥಶ್ರಮ ಆರಂಭಿಸಲಾಗಿದೆ. 6 ರಿಂದ 10 ವರ್ಷದೊಳಗಿನ ಮಕ್ಕಳಿಗೆ ಮುಕ್ತ ಉಚಿತ ಪ್ರವೇಶಕ್ಕೆ ಅವಕಾಶವಿದೆ ಎಂದರು. ದೈಹಿಕ ಶಿಕ್ಷಕ ಪಿ.ಆರ್.ಕುಂದರಗಿ ಮಾತನಾಡಿದರು.ಗ್ರಾಮದ ಪ್ರಮುಖ ತಿಮ್ಮಣ್ಣ ಗಲಭೀ, ಡಾ.ಹರೀಶ ಕಂಕನವಾಡಿ, ಜಿಪಂ ಮಾಜಿ ಅಧ್ಯಕ್ಷ ಎಂ.ಎಲ್.ಕೆಂಪಲಿಂಗಣ್ಣವರ ಹಾಗೂ ಶಿಕ್ಷಣ ಪ್ರೇಮಿಗಳು ಭಾಗವಹಿಸಿದರು. ಮುಖ್ಯಾಧ್ಯಾಪಕ ಎಸ್.ವ್ಹಿ.ಹಿರೇಮಠ, ಬಿ.ವ್ಹಿ.ಮೆಳ್ಳಿಗೇರಿ ಇತರರು ಇದ್ದರು