ಅನುದಾನಿತ ನೌಕರರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗೆಹರಿಸಬೇಕೆಂದು ಮನವಿ
ಹಾವೇರಿ 12 : ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘ(ರಿ) ಬೆಂಗಳೂರು ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘ ತುಮಕೂರು ಸಂಯೋಗದಲ್ಲಿ ಅನುದಾನಿತ ನೌಕರರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಬಸವರಾಜ ಹೊರಟ್ಟಿ ಸಭಾಪತಿಗಳು ಇವರ ಅಧ್ಯಕ್ಷತೆಯಲ್ಲಿ ಶಿಕ್ಷಣ ಮಂತ್ರಿಗಳಾದ ಮಧು ಬಂಗಾರ್ಪ ಇವರಿಗೆ ನಮ್ಮ ಸಂಘದಿಂದ ಮನವಿ ಪತ್ರವನ್ನು ಕೊಟ್ಟು ಅನುದಾನಿತ ನೌಕರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕೆಂದು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ವಿ.ಪ.ಸದಸ್ಯರಾದ ಆಯನೂರು ಮಂಜುನಾಥ ಹಾಗೂ ಸುಶೀಲ ನವೊಸಿ, ಡಿ.ಟಿ. ಶ್ರೀನಿವಾಸ್ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ಮಹೇಶ್ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಹರೀಶ್ ಎನ್., ರಾಜ್ಯ ಪರಿಷತ್ ಸದಸ್ಯರಾದ ಸೋಮಸಾಗರ, ತುಮಕೂರು ಜಿಲ್ಲಾ ಅಧ್ಯಕ್ಷರು ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು.ಇವರಿಗೆ ಹಾವೇರಿ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರ ಸಂಘದ ಅಧ್ಯಕ್ಷ ಡಾ. ಪರಶುರಾಮ. ಗಚ್ಚಿನಮನಿ, ಗೌರವಾಧ್ಯಕ್ಷರಾದ ರಮಾಕಂತ. ಭಟ ಹಾಗೂ ಕಾರ್ಯಧ್ಯಕ್ಷರಾದ ಗುಡ್ಡಪ್ಪ ಎಂ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ರೆಡ್ಡಿ, ಕೋಶಾಧ್ಯಕ್ಷ ಎಚ್.ಹನುಮಂತಪ್ಪ. ಹಾಗೂ ಸಂಘದ ಎಲ್ಲಾ ಉಪಾಧ್ಯಕ್ಷರು. ಹಾಗೂ ಕಾರ್ಯದರ್ಶಿಗಳು ಹಾಗೂ ಸಹಕಾರ್ಯದರ್ಶಿಗಳು ಹಾಗೂ ಸಂಘಟನಾ ಕಾರ್ಯದರ್ಶಿಗಳು ಸಲಹಾ ಸಮಿತಿಯ ಸದಸ್ಯರು, ಜಿಲ್ಲಾ ಎಲ್ಲ ಪದಾಧಿಕಾರಿಗಳು ತಾಲೂಕಿನ ಎಲ್ಲಾ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.