ಉತ್ತಮ ಕಾರ್ಯನಿರ್ವಹಿಸಿದ ಕಾರ್ಖಾನೆಗಳಿಗೆ ಪ್ರಶಸ್ತಿ ಪ್ರಧಾನ ಗೌರವ

Awards for best performing factories

ಉತ್ತಮ ಕಾರ್ಯನಿರ್ವಹಿಸಿದ ಕಾರ್ಖಾನೆಗಳಿಗೆ ಪ್ರಶಸ್ತಿ ಪ್ರಧಾನ ಗೌರವ 

ಮಾಂಜರಿ, 19 : ಸಕ್ಕರೆ ಉದ್ಯಮದಲ್ಲಿನ ಸಹ-ವಿದ್ಯುತ್ ಉಪ ಉತ್ಪಾದನಾ ಘಟಕಗಳ ಕುರಿತು ವಿಶೇಷ ಅಧ್ಯಯನ, ತಾಂತ್ರಿಕತೆ ಅಭಿವೃದ್ಧಿ ಹಾಗೂ ವಿವಿಧ ವಿಷಯಗಳ ಮಾಹಿತಿ ಶಿಬಿರಗಳನ್ನು ಏರಿ​‍್ಡಸುವ ಮೂಲಕ ಸಕ್ಕರೆ ಉದ್ಯಮಕ್ಕೆ ಅಮೂಲ್ಯವಾದ ಕೊಡುಗೆ ಮತ್ತು ಪ್ರೋತ್ಸಾಹ ನೀಡುತ್ತಿರುವ “ಕೋಜನರೇಶನ್ ಅಸೋಸಿಯೇಶನ್ ಆಫ್ ಇಂಡಿಯಾ, ಪುಣೆ” ಇವರು ಭಾರತದಲ್ಲಿನ ಎಲ್ಲ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳ ಪ್ರತಿ ವರ್ಷದ ಕಾರ್ಯನಿರ್ವಹಣೆಯ ಮಾನದಂಡಗಳ ಮೌಲ್ಯಮಾಪನ ಮಾಡಿ ಉತ್ತಮ ಕಾರ್ಯನಿರ್ವಹಿಸಿದ ಕಾರ್ಖಾನೆಗಳಿಗೆ ಪ್ರಶಸ್ತಿ ನೀಡಿ ಗೌರವಿಸುತ್ತದೆ.  

ಕಳೆದ ವರ್ಷದ ಕಾರ್ಖಾನೆಯ ಸಹ-ವಿದ್ಯುತ್ ಘಟಕದ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಪರಿಗಣಿಸಿದ ಕೋಜನರೇಶನ್ ಅಸೋಸಿಯೇಶನ್ ಆಫ್ ಇಂಡಿಯಾ, ಪುಣೆ ಇವರಿಂದ ಕಾರ್ಖಾನೆಯ ಸಹವಿದ್ಯುತ್ ಘಟಕಕ್ಕೆ ‘ಸಹಕಾರ ವಿಭಾಗದ  80ರ ಒಳಗಿನ ಬಾರ್ ಪ್ರೆಶರ್‌’ ವಿಭಾಗದಲ್ಲಿನ  “ಸುಸ್ಥಿರ ಕಾರ್ಯನಿರ್ವಹಣೆಯ ವಿಶೇಷ ವರ್ಗ” ಪ್ರಶಸ್ತಿಯನ್ನು ಪುಣೆಯಲ್ಲಿ ಜರುಗಿದ ಸಂಸ್ಥೆಯ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರು ಹಾಗೂ ಮಾಜಿ ಕೇಂದ್ರ ಕೃಷಿ ಸಚಿವರಾದ ಸನ್ಮಾನ್ಯಶ್ರೀ ಶರದ ಪವಾರ ಹಾಗೂ ಬಾಬಾಸಾಹೇಬ ಪಾಟೀಲ, ಸಹಕಾರ ಸಚಿವರು ಮಹಾರಾಷ್ಟ್ರ ಸರ್ಕಾರ, ಹರ್ಷವರ್ಧನ ಪಾಟೀಲ ಅಧ್ಯಕ್ಷರು ರಾ.ಸ.ಸ.ಕಾ.ನಿ., ಹೊಸದೆಹಲಿ ಹಾಗೂ “ಕೋಜನರೇಶನ್ ಅಸೋಸಿಯೇಶನ್ ಆಫ್ ಇಂಡಿಯಾ, ಪುಣೆ” ಇದರ ಉಪಾಧ್ಯಕ್ಷರಾದ ಜಯಪ್ರಕಾಶ ಸಾಳುಂಕೆ ದಾಂಡೆಗಾಂವಕರ ಇವರುಗಳಿಂದ ಪ್ರದಾನ ಮಾಡಿರುತ್ತಾರೆ.  

ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆ ಇವರು ಮಾತನಾಡಿ ಕಾರ್ಖಾನೆಯ ರೂವಾರಿಗಳಾದ     ಡಾಽಽ ಪ್ರಭಾಕರ ಕೋರೆ ಇವರ ಮಾರ್ಗದರ್ಶನ ಹಾಗೂ ಕಾರ್ಖಾನೆಯ ಸಂಚಾಲಕರಾದ ಅಮಿತ ಪ್ರಭಾಕರ ಕೋರೆ ಇವರ ನೇತೃತ್ವ, ಆಡಳಿತ ಮಂಡಳಿಯ ಸೂಕ್ತ ನಿರ್ಣಯ, ರೈತರ ಸಹಕಾರ ಮತ್ತು ಅಧಿಕಾರಿ ಹಾಗೂ ಕಾರ್ಮಿಕರ ಸತತ ಪ್ರಯತ್ನದ ಫಲವಾಗಿ ಸನ್ 2024-25ರ ಹಂಗಾಮಿನಲ್ಲಿ ಕಾರ್ಖಾನೆಯು 102 ದಿನಗಳಲ್ಲಿ 9,98,408.066 ಮೆ.ಟನ್ ಕಬ್ಬು ನುರಿಸಿ ಕಡಿಮೆ ದಿನಗಳಲ್ಲಿ ಹೆಚ್ಚು ಕಬ್ಬು ನುರಿಸಿ ಯಶಸ್ವಿಯಾಗಿ ಹಂಗಾಮು ಪೂರ್ಣಗೊಳಿಸಿದೆ.   

ಅಲ್ಲದೇ ಕಾರ್ಖಾನೆಯ ಉಪ ಉತ್ಪನ್ನ ಘಟಕಗಳಾದ ಸಹವಿದ್ಯುತ್ ಮತ್ತು ಡಿಸ್ಟಿಲರಿ ಘಟಕಗಳು ಸಹ ಕಳೆದ ಹಂಗಾಮಿನಲ್ಲಿ ಉತ್ತಮ ರೀತಿಯಲ್ಲಿ ಪೂರ್ಣ ಕ್ಷಮತೆಯೊಂದಿಗೆ ಕಾರ್ಯನಿರ್ವಹಿಸಿವೆ.  

ಅದೇ ರೀತಿ ಕಾರ್ಖಾನೆಯ ಡಿ.ಎಮ್‌.ಪ್ಲಾಂಟ ವ್ಯವಸ್ಥಾಪಕರಾದ ಸಾಗರ ತುಕಾರಾಮ ವಂಜಿರೆ ಇವರಿಗೆ “ಅತ್ಯುತ್ತಮ ಡಿ.ಎಮ್‌.ಪ್ಲಾಂಟ ವ್ಯವಸ್ಥಾಪಕ” ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.    

ಈ ಪ್ರಶಸ್ತಿಗಳಿಂದ ಎಲ್ಲ ಕಾರ್ಮಿಕರು ಹಾಗೂ ರೈತರು ಅತೀವ ಸಂತೋಷ ಹೊಂದಿದ್ದಾರೆ ಎಂದು ತಿಳಿಸಿದರು. 

 ಕಾರ್ಖಾನೆಯ ಉಪಾಧ್ಯಕ್ಷರಾದ ತಾತ್ಯಾಸಾಹೇಬ ಕಾಟೆ, ನಿರ್ದೇಶಕರುಗಳಾದ ಅಜೀತ ದೇಸಾಯಿ, ಪರಸಗೌಡಾ ಪಾಟೀಲ, ಸಂದೀಪ ಪಾಟೀಲ, ಮಲ್ಲಪ್ಪಾ ಮೈಶಾಳೆ, ಚೇತನ ಪಾಟೀಲ, ಮಹಾವೀರ ಕಾತ್ರಾಳೆ, ಭೀಮಗೌಡಾ ಪಾಟೀಲ, ಅಣ್ಣಾಸಾಬ ಇಂಗಳೆ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆರ್‌.ಬಿ.ಖಾಂಡಗಾವೆ, ಮುಖ್ಯಲೆಕ್ಕಾಧಿಕಾರಿಗಳಾದ ಆಯ್‌.ಎನ್‌.ಗೊಲಭಾವಿ ಮತ್ತು ಸಹ-ವಿದ್ಯುತ್ ಘಟಕದ ಪ್ರಧಾನ ವ್ಯವಸ್ಥಾಪಕರಾದ ಎನ್‌.ಎಮ್‌.ಮಾಗಿ ಪ್ರಶಸ್ತಿ ಸ್ವೀಕರಿಸಿದರು.