ಸಚಿವ ಖರ್ಗೆ ರಾಜೀನಾಮೆಗೆ ಬಿಜೆಪಿ ಅರಭಾವಿ ಮಂಡಲದ ಕಾರ್ಯಕರ್ತರಂದ ಪ್ರತಿಭಟನೆ

BJP Arabi Mandal workers protest against minister Khar's resignation

ಸಚಿವ ಖರ್ಗೆ ರಾಜೀನಾಮೆಗೆ ಬಿಜೆಪಿ  ಅರಭಾವಿ ಮಂಡಲದ ಕಾರ್ಯಕರ್ತರಂದ ಪ್ರತಿಭಟನೆ 

ಮೂಡಲಗಿ 03 : ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿ ಶುಕ್ರವಾರದಂದು ಪಟ್ಟಣದ ಕಲೇಶ್ವರ ವೃತ್ತದಲ್ಲಿ ಬಿಜೆಪಿ ಅರಭಾವಿ ಮಂಡಲದ ಕಾರ್ಯಕರ್ತರು ಪ್ರತಿಭಟನೆ ನಡೆಸಿ  ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಯಶವಂತ ಉದ್ದಪ್ಪಣ್ಣವರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.  

    ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಸಚಿನ್ ಅವರ ಡೆತ್‌ನೋಟ್‌ನಲ್ಲಿದೆ. ಅವರ ಆಪ್ತನೇ ಈ ಘಟನೆಗೆ ಕಾರಣ. ಎಐಸಿಸಿ ಅಧ್ಯಕ್ಷರ ಮಗ ಎಂಬ ಕಾರಣಕ್ಕೆ ಸಿಂಎ ರಾಜೀನಾಮೆ ಪಡೆಯಲು ಗಡಗಡ ನಡಗುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಮಾತನಾಡಿದರು. 

   ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಿದ ವೇಳೆ  ವಾಹನ ಅವರು ಪರದಾಡುವಂತೆ ಪರಿಸ್ಥಿತಿ ನಿರ್ಮಾಣವಾಯಿತು.  

 ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಕುಡಚಿ, ಅರಬಾವಿ ಮಂಡಲ ಅಧ್ಯಕ್ಷ ಮಹದೇವ ಶೆಕ್ಕಿ, ಪಾಂಡುರಂಗ ಮಹೇಂದ್ರಕರ, ಗುರು ಹಿರೇಮಠ, ರಾಮಣ್ಣ ಹಂದಿಗುಂದ,  ಅನ್ವರ ನಾಧಪ್, ಆನಂದ್ ಟಪಾಲದಾರ, ಗಫಾರ ಡಾಂಗೆ, ರಘು ಪತ್ತಾರ,  ಸಿದ್ದು ಗಡ್ಡೆಕರ, ಪ್ರಮೋದ ನುಗಾನಟ್ಟಿ, ನಾಗರಾಜ ಕುದರಿ, ಶಿವಾನಂದ ದಗೋನಿ, ಶ್ರಿಧರ ಸಲಬನ್ನರ, ಮಲ್ಲು ಯಾದವಾಡ, ಪರ​‍್ಪ ಹಡಪದ, ಮಹಾದೇವ ದಾನನ್ನವರ, ಓಪ್ರಕಾಶ ಕುಳ್ಳೂರ,ಮಲ್ಲಿಕಾರ್ಜುನ ಬೆಳ್ಳಸಿ, ಮಡಿವಾಳ ನೆಮಗೌಡರ, ಆನಂದ ಹಿರೇಮಠ,   ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು