ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡಿರಿಂದ ಪ್ರತಿಭಟನೆ
ರಾಯಬಾಗ, 05: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಯಬಾಗ ಮಂಡಲ ವತಿಯಿಂದ ಪಟ್ಟಣದ ಝೇಂಡಾ ಕಟ್ಟೆ ಹತ್ತಿರ ಮುಖ್ಯ ರಸ್ತೆ ಬಂದ ಮಾಡಿ ಬಿಜೆಪಿ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.
ಶಾಸಕ ಡಿ.ಎಮ್.ಐಹೊಳೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಈಗ ದಿನಬಳಕೆ ವಸ್ತು ಮತ್ತು ಸೇವೆಗಳ ದರಗಳನ್ನು ಹೆಚ್ಚಿಸಿ ರೈತರಿಗೆ, ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಹನಿಟ್ರ್ಯಾಪ್ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದಾಗ 18 ಬಿಜೆಪಿ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಿರುವುದು ಖಂಡನೀಯವಾಗಿದ್ದು, ಕೂಡಲೇ ಅಮಾನತು ಆದೇಶ ಹಿಂಪಡೆಬೇಕೆಂದು ಒತ್ತಾಯಿಸಿದರು.
ರೈತ, ದಲಿತ ಮತ್ತು ಜನವಿರೋಧಿ ಸರ್ಕಾರವನ್ನು ಕಿತ್ತು ಒಗೆಯುವವರಿಗೆ ನಮ್ಮ ಪ್ರತಿಭಟನೆ ನಿರಂತವಾಗಿರಲಿದೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ರಾಯಬಾಗ ಬಿಜೆಪಿ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಮುಖಂಡರಾದ ಮಲ್ಲಪ್ಪ ಮೈಶಾಳೆ, ರಾಜಶೇಖರ ಖನದಾಳೆ, ಸದಾಶಿವ ಘೋರೆ್ಡ, ಅಣ್ಣಾಸಾಹೇಬ ಖೆಮಲಾಪೂರೆ, ಸದಾನಂದ ಹಳಿಂಗಳಿ, ಮಹಾದೇವ ಬೊರಗಾಂವೆ, ಬಸವರಾಜ ಡೊಣವಾಡೆ, ಅಪ್ಪಾಸಾಬ ಬ್ಯಾಕೂಡೆ, ಗಂಗಾಧರ ಮೈಶಾಳೆ, ನಿಂಗಪ್ಪ ಪಕಾಂಡಿ, ಸುಭಾಷ ಕೋರೆ, ಅನೀಲ ಹಂಜೆ, ರಾಜು ಹರಗನ್ನವರ, ಕಲ್ಲಪ್ಪ ನಿಂಗನೂರೆ, ರಾಜು ಹಳಬರ ಸೇರಿ ಅನೇಕರು ಪಾಲ್ಗೊಂಡಿದ್ದರು.