ದೆಹಲಿಯಲ್ಲಿ ಬಿಜೆಪಿ ಗೆಲುವು: ಕಂಪ್ಲಿಯಲ್ಲಿ ಸಂಭ್ರಮದ ವಿಜಯೋತ್ಸವ

BJP win in Delhi: Celebration of victory in Kampli

ದೆಹಲಿಯಲ್ಲಿ ಬಿಜೆಪಿ ಗೆಲುವು: ಕಂಪ್ಲಿಯಲ್ಲಿ ಸಂಭ್ರಮದ ವಿಜಯೋತ್ಸವ  

ಕಂಪ್ಲಿ 08: ದೆಹಲಿಯಲ್ಲಿ ಬಿಜೆಪಿ ಪಕ್ಷ 48 ಸ್ಥಾನಗಳಲ್ಲಿ ಪ್ರಚಂಡ ಗೆಲುವು ಸಾಧಿಸಿದ ಹಿನ್ನಲೆ ಕಂಪ್ಲಿ ತಾಲೂಕು ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ನೇತೃತ್ವದಲ್ಲಿ ಪುರಸಭೆ ಸದಸ್ಯರು, ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಶನಿವಾರ ಆಚರಿಸಿದರು.  

 ನಂತರ ತಾಲೂಕು ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಮಾಡಿದ ಅಭಿವೃದ್ಧಿ ಯೋಜನೆಗಳನ್ನು ಮನಗಂಡು, ಭ್ರಷ್ಟಾಚಾರದ ಕಳಂಕ ಒತ್ತಿದ್ದ ಆಮ್ ಆದ್ಮಿ ಪಕ್ಷವು ಸಂಪೂರ್ಣವಾಗಿ ನೆಲಕಚ್ಚಿದೆ. ಇತ್ತೀಚಿನ ಕೇಂದ್ರದ ಬಜೆಟ್‌ನಲ್ಲಿ ಸಾಕಷ್ಟು ಯೋಜನೆಗಳನ್ನು ಜನತೆಗೆ ನೀಡಿದ್ದಾರೆ. ನಾವೇ ಮತ್ತೊಮ್ಮೆ ದೆಹಲಿ ಚುಕ್ಕಾಣಿ ಹಿಡಿಯುತ್ತೇವೆ ಎಂಬ ಕನಸನ್ನು ಕಂಡಿದ್ದ ಆಮ್ ಆದ್ಮಿ ಪಕ್ಷಕ್ಕೆ ತಕ್ಕ ಪಾಠವನ್ನು ಮತದಾರರು ಕಲಿಸಿದ್ದಾರೆ. ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ಶೂನ್ಯದಲ್ಲೇ ಮುಳುಗಿದೆ. ದೆಹಲಿ ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿರುವ ಒಟ್ಟು 70 ಸ್ಥಾನಗಳಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ದಿಗ್ವಿಜಯ ಸಾಧಿಸಿದ್ದು, ಆಮ್ ಆದ್ಮಿ ಪಕ್ಷವು 22 ಸ್ಥಾನಗಳೊಂದಿಗೆ ಸೋಲೊಪ್ಪಿಕೊಂಡಿದ್ದಾರೆ. ಈ ಚುನಾವಣೆಯು ಬರುವ ಎಲ್ಲಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಮುಂದಿನ ತಾಪಂ, ಜಿಪಂ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಮರಳು ಮಾಡಿದ್ದರಿಂದ ಅಧಿಕಾರಕ್ಕೆ ಬಂದಿದೆ. ಆದರೆ, ಇಂತಹ ಗ್ಯಾರಂಟಿ ಯೋಜನೆಗಳ ಆಟ ಮುಂದಿನ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಡಾ.ವಿ.ಎಲ್‌.ಬಾಬು, ಆರ್‌.ಆಂಜನೇಯ, ಟಿ.ವಿ.ಸುದರ್ಶನರೆಡ್ಡಿ, ಕಂಪ್ಲಿ ಕ್ಷೇತ್ರ ಮಂಡಲದ ಮಾಜಿ ಅಧ್ಯಕ್ಷ ಅಳ್ಳಳ್ಳಿ ವಿರೇಶ, ಸೊಸೈಟಿ ಅಧ್ಯಕ್ಷರಾದ ಭಾಸ್ಕರ್‌ರೆಡ್ಡಿ, ಕಟ್ಟೆ ಸಣ್ದ ದುರುಗಪ್ಪ, ನಗರ ಘಟಕ ಅಧ್ಯಕ್ಷ ಮುರಳಿ ಮೋಹನ್‌ರೆಡ್ಡಿ, ಮುಖಂಡರಾದ ಪಿ.ಬ್ರಹ್ಮಯ್ಯ, ಅಗಳಿ ಪಂಪಾಪತಿ, ಎನ್‌.ಪುರುಷೋತ್ತಮ, ವಿ.ವಿದ್ಯಾಧರ, ಬಿ.ಚಂದ್ರಶೇಖರಗೌಡ, ಬಿ.ದೇವೇಂದ್ರ, ಬಿ.ರಮೇಶ, ಸಿ.ಎ.ಚನ್ನಪ್ಪ, ಬಿ.ನಾಗೇಂದ್ರ, ವಿರೂಪಾಕ್ಷಿ, ಕಾಟಂರಾಜು, ಗುರು, ಕಿಶೋರ, ಕೆ.ರಂಗಪ್ಪ, ಶಂಭು ಸೇರಿದಂತೆ ಅನೇಕರಿದ್ದರು.  ಫೆ.001: ದೆಹಲಿಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ ಹಿನ್ನಲೆ ಕಂಪ್ಲಿ ತಾಲೂಕು ಮಂಡಲ ನೇತೃತ್ವದಲ್ಲಿ ಪುರಸಭೆ ಸದಸ್ಯರು, ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.