ಮಾರ್ಚ್ 31 ರಿಂದ ರನ್ನ ಬೆಳಗಲಿ ಪಟ್ಟಣದ ಬಂದಲಕ್ಷ್ಮಿದೇವಿ ಜಾತ್ರಾ ಮಹೋತ್ಸವ
ಮಹಾಲಿಂಗಪುರ 01 : ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಪಟ್ಟಣದ ಬಂದಲಕ್ಷ್ಮಿದೇವಿ ಜಾತ್ರಾ ಮಹೋತ್ಸವವು ಮಾರ್ಚ್ 31 ರಿಂದ ಮಾರುತೇಶ್ವರ ಕಾರ್ತಿಕೋತ್ಸವ ಮತ್ತು ನಡು ಓಕುಳಿಯೊಂದಿಗೆ ಆರಂಭಗೊಂಡಿದೆ.
ಮಾರ್ಚ್ 2 ರಂದು ಕೃಷ್ಣಾ ನದಿಯ ನೀರಿನಿಂದ ಬಂದಲಕ್ಷ್ಮಿ ದೇವಿ ಸಹಿತ ಗ್ರಾಮದ ಎಲ್ಲ ದೇವರುಗಳಿಗೆ ಅಭಿಷೇಕ ಮತ್ತು ಮಹಾಪೂಜೆ ನಡೆಯುತ್ತದೆ. ನಂತರ ಮುಗಳಖೋಡ ಗ್ರಾಮದ ಪರಮಾನಂದ ದೇವರು ಮತ್ತು ಹಿಡಕಲ್ ಗ್ರಾಮದ ಲಕ್ಕಮ್ಮದೇವಿ ಪಲ್ಲಕ್ಕಿಗಳ ಆಗಮನಕ್ಕೆ ಪಟ್ಟಣದ ಹಿರಿಯರಿಂದ ಸ್ವಾಗತ.ಮಧ್ಯಾಹ್ನ ಕರಿಕಟ್ಟುವುದು, ಸಾಯಂಕಾಲ ಕಡೆ ಓಕುಳಿ, ಸಂಜೆ 7 ಗಂಟೆಗೆ ರಥೋತ್ಸವ ಮತ್ತು ರಾತ್ರಿ 10 ಗಂಟೆಗೆ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿವೆ.ಮಾರ್ಚ್ 3 ರಂದು ಮುಂಜಾನೆ ಕಾರ್ತಿ ಇಳಿಸುವುದು, ಮಧ್ಯಾಹ್ನ 3 ಗಂಟೆಗೆ ಕುಸ್ತಿಗಳು, ಸಂಜೆ 7 ಗಂಟೆಗೆ ಮರು ರಥೋತ್ಸವ, ಇದೆ ದಿನ ರಾತ್ರಿ 10-30 ಕ್ಕೆ ನಾಟಕ ಮತ್ತು ಗೀಗೀ ಪದಗಳು,4 ರಂದು ಶುಕ್ರವಾರ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಗಳು ನಡೆಯಲಿವೆ ಎಂದು ರನ್ನ ಬೆಳಗಲಿ ಪಟ್ಟಣದ ಜಾತ್ರಾ ಮಹೋತ್ಸವ ಕಮಿಟಿ ಮತ್ತು ಸಕಲ ಸದ್ಭಕ್ತ ಮಂಡಳಿ ತಿಳಿಸಿದೆ.
ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಧರೆಪ್ಪ ಸಾಂಗ್ಲಿಕರ, ಪಂಡಿತ ಪೂಜಾರ, ರಾಮನಗೌಡ ಪಾಟೀಲ್, ಚಿಕ್ಕಪ್ಪ ನಾಯಕ, ಕಾಡಯ್ಯ ಗಣಾಚಾರಿ, ಮಲ್ಲು ಹೊಸಪೇಟೆ, ಈಶ್ವರ ಅಮಾತಿ, ಮೋಹನರಾವ ಕುಲಕರ್ಣಿ, ಲಕ್ಕಪ್ಪ ಮೇಡ್ಯಾಗೋಳ, ಮಹಾಲಿಂಗಪ್ಪ ಕೊಣ್ಣೂರ, ಚೆನ್ನಪ್ಪ ಪುರಾಣಿಕ, ಮುತ್ತಪ್ಪ ಸಿದ್ದಾಪುರ, ಮುತ್ತಪ್ಪ ಹೊಸಪೇಟೆ ಇದ್ದರು.