ಜನಪದರಿಂದ ಜನಜನಿತನಾದ ಬಸವಣ್ಣ - ಡಾ.ಎ.ಎನ್.ಸಿದ್ದೇಶ್ವರಿ.
ಬಳ್ಳಾರಿ 3 : ವಚನ ಸಂಪತ್ತು ಬೆಳಕಿಗೆ ಬಾರದ ಮುನ್ನವೇ, ಬಸವಣ್ಣನವರ ಕೀರ್ತಿ ಲೋಕ ಪ್ರಸಿದ್ಧವಾಗಿದ್ದಿತು. ಬೆಳಕಾಗಿಸಿದವರು ಅಕ್ಷರ ಜ್ಞಾನವಿಲ್ಲದ ಜನಪದರು. ಬಸವಣ್ಣನ ಬದುಕು ಮತ್ತು ಸಾಧನೆ ಸಿದ್ದಿಗಳನ್ನು ತಮ್ಮ ದೈನಂದಿನ ಬದುಕಿನ ಕುಟ್ಟುವ, ಬೀಸುವ, ಹರಗುವ, ಕಣ ಮಾಡುವ ಪ್ರತಿಕ್ಷಣಗಳಲ್ಲಿ ಸ್ಮರಣೆ ಮಾಡಿಕೊಳ್ಳುವ ಮೂಲಕ ಚಿರಸ್ಥಾಯಿ ಗೊಳಿಸಿದ್ದಾರೆ ಎಂದು ಸರ್ಕಾರಿ (ಮುನ್ಸಿ)ಪ್ರೌಢ ಶಾಲೆಯ ಕನ್ನಡ ಶಿಕ್ಷಕಿಯರಾದ ಡಾ. ಎ.ಎನ್.ಸಿದ್ದೇಶ್ವರಿಯವರು ನುಡಿದರು.ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಗರದ ಡಾ. ವೈ.ನಾಗೇಶ ಶಾಸ್ತ್ರಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 312 ನೇಮಹಾಮನೆ ಲಿಂಽಽ ಫಕೀರ್ಪ ತೋಟಪ್ಪ ಗಡ್ಡಿ ದತ್ತಿ ಕಾರ್ಯಕ್ರಮದಲ್ಲಿ "ಜನಪದರು ಕಂಡ ಬಸವಣ್ಣ" ವಿಷಯ ಕುರಿತು ಮಾತನಾಡುತ್ತಾ, ಬಸವಣ್ಣನನ್ನು ಉತ್ತುವ ಬಿತ್ತುವ ಮಂತ್ರ ಬಸವ ಮಂತ್ರ ವೆಂದು ಮಂತ್ರ ಪುರುಷನನ್ನಾಗಿ, ಕಲ್ಲಿಗೆ ಮುಕ್ಕಬೇಡ ಬಸವಗೆ ಮುಕ್ಕೆಂದು ದೇವಪುರುಷನನ್ನಾಗಿ ಮಾಡಿ ಕೈಲಾಸಕ್ಕೆ ಒಯ್ಯದೇ ಶ್ರೀ ಸಾಮಾನ್ಯರಲ್ಲಿ ಸಾಮಾನ್ಯನನ್ನಾಗಿಸಿ, ಭುವನದ ಭಾಗ್ಯವೆಂದೆನಿಸುವಂತೆ ಮಾಡಿದವರು ಜನಪದರು ಎಂದರು.
ದತ್ತಿ ದಾಸೋಹಿಗಳಾಡ ಡಾಽಽ ಸೋಮೇಶ್ವರ ಎಫ್. ಗಡ್ಡಿಯವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭದರು. ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಟಿ. ನರೇಂದ್ರಬಾಬುರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬಸವಣ್ಣನವರ ಸಾಮಾಜಿಕ ಕಾಳಜಿ ಇಂದಿನ ನಾಯಕರಿಗೆ ಆದರ್ಶವಾಗಬೇಕು. ವಿದ್ಯಾರ್ಥಿಗಳ ಮಾದರಿ ವ್ಯಕ್ತಿಯಾಗಬೇಕು, ಸಿನಿಮಾ ನಟರಲ್ಲ ಎಂದರು. ವೇದಿಕೆಯಲ್ಲಿ ಕಾರ್ಯಕಾರಿ ಮಂಡಳಿ ಸದಸ್ಯರಾದ ಜೆ.ಪಿ.ಬಸವರಾಜ, ವಿ.ಜಿ.ವಿಕ್ರಮ್, ಎಸ್,ಚಂದ್ರಶೇಖರ ಹಾಗೂ ಮೂರು ಶಾಲೆಗಳ ಮುಖ್ಯಗುರುಗಳಾದ ಎಂ.ಗಿರಿಜ, ಎಸ್.ತಿಪ್ಪೇರುದ್ರ. ಎಂ.ನಾಗಭೂಷಣರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿನೆ ಮಾಡಿ ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ಪರಿಚಯ ಮಾಡಿ ಶರಣು ಸಮರೆ್ಣ ಮಾಡಿದರು. ಅತಿಥಿಗಳಿಗೆ ಸನ್ಮಾನ, ಸ್ಮರಣಿಕೆ ನೀಡುವಿಕೆಯೊಂದಿಗೆ ಕಾರ್ಯಕ್ರಮ ಮಂಗಲವಾಯಿತು.