ವಕೀಲರ ಸಂಘದ ಚುನಾವಣೆಗೆ ಬೀರಳ್ಳಿ ನಾಮಪತ್ರ ಸಲ್ಲಿಕೆ

Beeralli files nomination for Bar Association elections

ವಕೀಲರ ಸಂಘದ ಚುನಾವಣೆಗೆ ಬೀರಳ್ಳಿ ನಾಮಪತ್ರ ಸಲ್ಲಿಕೆ 

ಗದಗ 09: ಇದೇ ದಿನಾಂಕ 26 ರಂದು ಜರುಗುವ ಗದಗ ಜಿಲ್ಲಾ ವಕೀಲರ ಸಂಘದ  2025-27 ನೇ ಸಾಲಿನ ಚುನಾವಣೆಯಲ್ಲಿ ಸಹ ಕಾರ್ಯದರ್ಶಿ ಸ್ಥಾನಕ್ಕೆ ಯುವ ವಕೀಲರಾದ ಬಸವರಾಜ ಬೀರಳ್ಳಿ ಯವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಸಹಾಯಕ ಚುನಾವಣಾ ಅಧಿಕಾರಿಗಳಾದ ಎಮ್ ಎಸ್ ಹಾಳಕೇರಿ ಯವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ನ್ಯಾಯವಾದಿಗಳಾದ ಶ್ರೀಕಾಂತ್ ದೊಡ್ಡಮನಿ, ಬಿ ಎಸ್ ಮಾಡಲಗೇರಿ, ಎನ್ ಎಸ್ ಬಿಚ್ಚಗಟ್ಟಿ, ಎಸ್ ಎಸ್ ಕಾಟ್ರಳ್ಳಿ, ಎಂ ಎಸ್ ಬಡಿಗೇರ್, ವಿ ಜಿ ಮುದಿಯಪ್ಪನವರ್, ಡಿ ಜಿ ಮೆಹರವಾಡೆ, ಅನಿಲ್ ಶಿಂಗತಲಕೇರಿ ಟಿ ಆರ್ ಕೊಂಗಟಿ, ಆರ್ ಸಿ ಶಿಷ್ಟಗಾರ,  ಮಜ್ಜಿಗುಡ್ಡ್‌, ವೈ ಎಚ್ ಅಸುಂಡಿ, ಆರ್ ಬಿ ಎಸ್ ರಾಠೋಡ.ಆರ್ ಬಿ ತಳವಾರ್  ವೈ ಎಫ್ ಕನ್ಯಾಳ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.