ಲೋಕದರ್ಶನ ವರದಿ
ಬಳ್ಳಾರಿ 16: ವಿವಿಧ ಬಗೆಯ ತೋಟಗಾರಿಕೆ ಸಸಿಗಳು ಎಲ್ಲರಿಗೂ ದೊರೆಯಲಿ ಎಂಬ ಸದುದ್ದೇಶದಿಂದ ಇದೇ ಮೊದಲ ಬಾರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಿದ್ದ ಸಸ್ಯಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು ತಮಗಿಷ್ಟವಾದ ಸಸ್ಯಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿತು. ಸಸ್ಯಸಂತೆಗೆ ಚಾಲನೆ ನೀಡಿದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಪಿ.ಜಿ.ಚಿದಾನಂದ ಅವರು ಮಾತನಾಡಿ, ಖಾಸಗಿ ನರ್ಸರಿಗಳಲ್ಲಿ ಅಧಿಕ ಬೆಲೆಗೆ ಸಸ್ಯಗಳು, ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ವಿಚಾರ ನಮ್ಮ ಗಮನಕ್ಕೆ ಬಂದಿದ್ದು ರೈತರಿಗೆ, ಕೈತೋಟ ಬೆಳೆಸುವ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಡಿಮೆ ದರ ನಿಗದಿ ಮಾಡಿ ಮಾರಾಟ ಮಾಡಲಾಗುತ್ತದೆ ಎಂದರು.
ಸಿರುಗುಪ್ಪ, ಸಂಡೂರು, ಹಗರಿಬೊಮ್ಮನಹಳ್ಳಿ, ಹೊಸಪೇಟೆ ಹೂವಿನ ಹಡಗಲಿ, ಹರಪನಹಳ್ಳಿ ತಾಲೂಕಿನಲ್ಲಿರುವ ಇಲಾಖೆಯ ಸಸ್ಯ ಕ್ಷೇತ್ರಗಳಿಂದ ಬಂದ ವೈವಿಧ್ಯಮಯ ಸಸಿಗಳನ್ನು ಜಿಲ್ಲಾ ತೋಟಗಾರಿಕೆ ಇಲಾಖೆ ಕೇಂದ್ರದಿಂದ ಮಾರಾಟ ಮಾಡಲಾಗುತ್ತದೆ. ಜಿಲ್ಲಾ ಕೇಂದ್ರದಿಂದ ಇದು ಮೊದಲ ಸಸ್ಯ ಸಂತೆ ಆಗಿರುವುದರಿಂದ ಪ್ರಚಾರದ ಮೂಲಕ ಸಸಿಗಳನ್ನು ಕಡಿಮೆ ಬೆಲೆಗೆ ಖರೀದಿಸುವಂತೆ ಮಾರಾಟ ಮಾಡಲು ಪ್ರರೇಪಿಸಲಾಗುತ್ತದೆ ಎಂದರು.
ವೈವಿಧ್ಯಮಯ ಸಸಿಗಳ ಕಲರವ:
ತೋಟಗಾರಿಕೆ ಇಲಾಖೆಯ ಕೇಂದ್ರದಲ್ಲಿ ಅರೇಲಿಯಾ, ಎರಾಂಥಿಮಮ್, ಅರೇಫಾಮ್ಸ್, ಅಲಂಕಾರಿಕಾ ಗಿಡಗಳು (ಪಾಲಿಥೀನ್ ಚೀಲ) ಹಾಗೂ ಅಲಂಕಾರಿಕ (ಕುಂಡಗಳಲ್ಲಿ), ಪೆರಲ, ಪ್ರೂಟ್ ಪ್ಲಾಂಟ್, ನೆರಳೆ, ಅಂಜೂರ, ತೆಂಗು (ಹೈಬ್ರಿಡ್), ತೆಂಗು (ಎತ್ತರದ ತಳಿ), ನುಗ್ಗೆ, ಕರಿಬೇವು, ಮ್ಯಾಂಗೋ, ಸೀತಾಫಲ, ಅಶೋಕ, ಮಲ್ಲಿಗೆ ಗಿಡ, ನಿಂಬೆ ಸೇರಿದಂತೆ 10 ಸಾವಿರಕ್ಕೂ ಅಧಿಕ ವಿವಿಧ ವೈವಿಧ್ಯಮಯ ಗಿಡಗಳನ್ನು ಪ್ರದರ್ಶನಕ್ಕಿಡಲಾಗಿದ್ದು ನೋಡುಗರಿಗೆ ಕಣ್ಮನ ಸೆಳೆಯುತ್ತಿವೆ.
ದರಗಳು ಹೀಗಿವೆ:
ಖಾಸಗಿ ನರ್ಸರಿಯಲ್ಲಿ ಸಾಮಾನ್ಯವಾಗಿ ಗಿಡಗಳು ಬೆಲೆ ದುಪ್ಪಾಟ್ಟಾಗಿವೆ. ಇದರಿಂದ ನಮ್ಮ ತೋಟಗಾರಿಕೆ ಇಲಾಖೆಯು ಎಚ್ಚೆತ್ತುಕೊಂಡು ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಾದ ತೋರಣಗಲ್ಲು, ದೇಶನೂರು, ಧಮರ್ಾಪುರ, ರಾಗಪುರ, ಮಾಲ್ವಿ, ಆನಂದದೇವನಹಳ್ಳಿ, ಬುಕ್ಕಸಾಗರದಿಂದ ವೈವಿಧ್ಯಮಯ ಪ್ರಭೇದಗಳ ಸಸಿಗಳನ್ನು ತರಿಸಲಾಗಿದ್ದು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅರೇಲಿಯಾ 15 ರೂ, ಎರಾಂಥಿಮಮ್ 15 ರೂ, ಅರೇಫಾಮ್ಸ್ 25 ರೂ, ಅಲಂಕಾರಿಕಾ ಗಿಡಗಳು (ಪಾಲಿಥೀನ್ ಚೀಲ) ಹಾಗೂ ಅಲಂಕಾರಿಕ (ಕುಂಡಗಳಲ್ಲಿ) 110 ರೂ, ಅಶೋಕ 8 ರೂ, ಮಲ್ಲಿಗೆ ಗಿಡ 12 ರೂ, ಮಾವು 25 ರೂ, ಪೇರಲ 35 ರೂ, ತೆಂಗು 60 ರೂ, ನಿಂಬೆ 12 ರೂ, ಕರಿಬೇವು 10 ರೂ, ನುಗ್ಗೆಕಾಯಿ ಗಿಡ 8 ರೂ, ಗಳು ಅಂತ ಗಿಡ ಒಂದಕ್ಕೆ ಧರ ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕರಾದ ರತ್ನಪ್ರೀಯಾ ಸೇರಿದಂತೆ ರೈತರು, ಸಾರ್ವಜನಿಕರು ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು.