ಬಳ್ಳಾರಿ 25: ನಗರದ 24ನೇ ವಾರ್ಡನ ಕಾರ್ಪೊರೇಟರ್ ಎಂ.ಗೋವಿಂದರಾಜುಲು ಏರ್ಪಡಿಸಿದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯನ್ನು ಕೌಲ್ಬಜಾರ್ನ ಟೈಲರ್ ಬೀದಿಯಲ್ಲಿರುವ ಬಿಜೆಪಿ ಕಛೇರಿಯಲ್ಲಿ ಮಾಜಿ ಸಚಿವ ಜಿ.ಜನಾರ್ಧನರೆಡ್ಡಿ ಹಾಗೂ ಸೋಮಶೇಖರರೆಡ್ಡಿ, ಕಲ್ಯಾಣಸ್ವಾಮಿ, ಬಿಷಫ್, ಮೃತ್ಯುಂಜಯ ಖಾನ್ ಸಾಬ್ ಅವರು ಉದ್ಘಾಟಿಸಿದರು.
600 ಜನರಿಗೆ ತಪಾಸಣೆ ಮಾಡಿ ಅವರಲ್ಲಿ 110 ಜನರಿಗೆ ಉಚಿತವಾಗಿ ಕನ್ನಡಕವನ್ನು ನೀಡಿದ್ದರು. 127 ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ಡಾ.ನಾಗರಾಜ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ನೆರವೇರಿಸಿದರು. ಅವರಿಗೆ ಕಲರ್ ಕನ್ನಡಕವನ್ನು ನೀಡಿ ಬರುವ ಜುಲೈ 21ರಂದು ಕಣ್ಣಿನ ತಪಾಸಣೆ ಮಾಡಿ ಕನ್ನಡಕವನ್ನು ನೀಡುವುದಾಗಿ ಗೋವಿಂದರಾಜುಲು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ರಾಜಶೇಖರರೆಡ್ಡಿ, ಡಾ.ವಿಜಯ್, ಮಾರೆಣ್ಣ ಹಾಗೂ ಇತರರು ಉಪಸ್ಥಿತರಿದ್ದರು. ಗೋವಿಂದರಾಜುಲು ಎಲ್ಲರಿಗೆ ಸನ್ಮಾನಿಸಿದರು. ಗೋವಿಂದರಾಜುಲು ಇಲ್ಲಿಯವರೆಗೆ 12 ರಕ್ತದಾನ ಶಿಬಿರಗಳನ್ನು, ಒಂದು ಹೃದಯ ಚಿಕಿತ್ಸೆ ಶಿಬಿರವನ್ನು ಏರ್ಪಡಿಸಿದ್ದಾರೆ.