ಬಳ್ಳಾರಿ: ಜಿಂದಾಲ್ ಜಮೀನು ಬಳಕೆ ಶ್ವೇತಪತ್ರಕ್ಕೆ ಹಿರೆಮಠ ಆಗ್ರಹ

ಬಳ್ಳಾರಿ 24: ಜಿಂದಾಲ್ ಉಕ್ಕು ಕಾರ್ಖಾನೆ ಸ್ಥಾಪಿಸಲು ತೊರಣಗಲ್ಲಿನ ಬಳಿ ಸರಕಾರ ಮತು ಖಾಸಗಿಯವರಿಂದ ಪಡೆದಿರುವ ಜಮೀನು ಎಷ್ಟು? ಅದರಲ್ಲಿ ಬಳಕೆ ಮಾಡಿರುವುದು ಎಷ್ಟು ? ಇದರ ಸಂಪೂರ್ಣ ಮಾಹಿತಿಯ ಶ್ವೇತಪತ್ರ ಹೊರಡಿಸುವಂತೆ ರಾಜ್ಯ ಸರಕಾರಕ್ಕೆ ಸಮಾಜ ಪರಿವರ್ತನಾ ಸಮೂದಾಯದ ಮುಖಂಡರಾದ ಎಸ್.ಆರ್.ಹಿರೆಮಠ ಆಗ್ರಹಿಸಿದ್ದಾರೆ. 

ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಇಂಗ್ಲಾಂಡ್ನಲ್ಲಿ ಲಕ್ಷ್ಮಿ ಮಿತ್ತಲ್ ಅವರು 10 ಮಿಲಿಯನ್ ಟನ್ ಉಕ್ಕು ಉತ್ಪಾದನೆಗೆ 2 ಸಾವಿರಕ್ಕಿಂತಲೂ ಕಡಿಮೆ ಉಪಯೋಗಿಸುತ್ತಿದ್ದಾರೆ. ಪೋಸ್ಟ್ ಕಂಪನಿ ದಕ್ಷಿಣ ಕೊರಿಯಾದಲ್ಲಿ 10ಬಿಲಿಯನ್ ಟನ್ ಉಕ್ಕು ಉತ್ಪಾದನೆಗೆ 2 ಸಾವಿರ ಎಕರೆಯನ್ನು ಪಡೆದಿದ್ದಾರೆ. ಆದರೆ 11.5 ಮಿಲಿಯನ್ ಟನ್ ಉಕ್ಕು ಕಾರ್ಖಾನೆಗೆ  11 ಸಾವಿರ ಎಕರೆ ಬೇಕಾ ಎಂದು ಪ್ರಶ್ನಿಸಿದರು. 

ಎಂ.ಎಂ.ಎಲ್. ಗಣಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದ ಜಿಂದಾಲ್ ಎಂ.ಎಂ.ಎಲ್. ಅವರೇ ನಮಗೆ 270 ಕೋಟಿ ರೂ ಬಾಕಿ ಕೊಡಬೇಕೆಂದು ನ್ಯಾಯಾಲಯದ ಮೊರೆ ಹೋಗಿದೆ. ಇಂತವರ ವಿರುದ್ದ 4 ವರ್ಷಗಳ ನಂತರ ಎಂ.ಎಂ.ಎಲ್.ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದರು. ವನ್ಯಜೀವ ಅಬಯಾರಣ್ಯ ತಾಣ ಎಂದು ರಾಜ್ಯದ ಹೈಕೊಟರ್್ ಆದೇಶ ಹೊರಡಿಸಿರುವುದು ಸ್ವಾಗತಿಸುತ್ತೇವೆ. 

ಕಪ್ಪತ್ಗುಡ್ಡ ಸಂರಕ್ಷಣೆಗೋಷ್ಕರ ಜು.13 ಮತ್ತು 14 ರಂದು ಗದಗಿನ ತೊಂಟದಾರ್ಯ ಮಠದಲ್ಲಿ ಉಳಿಸಿ, ಬೆಳಸಿ, ಬಳಸಿ ಚಿಂತನಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಆಸಕ್ತರು ಭಾಗವಹಿಸಿ ಸಲೆಹೆ ಸೂಚನೆ ನೀಡಲು ಹಿರೆಮಠ ಅವರು ಮನವಿ ಮಾಡಿದರು. ನಂತರ ಮಾತನಾಡಿದ ಚಾಗನೂರು, ಸಿರುವಾರ ವಿಮಾನ ನಿಲ್ದಾಣ ಹೋರಾಟ ಸಮಿತಿಯ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನರೆಡ್ಡಿ  ಮಾತನಾಡಿ ಜಿಂದಾಲ್ಗೆ ಜಮೀನು ಪರಭಾರೆ ವಿರೋದಿಸಿ ಅ.09ರಂದು ಭಾರತ ಬಿಟ್ಟು ತೊಲಗಿ ಚಳುವಳಿಯ ಸ್ಮರಣೆ ಅಂಗವಾಗಿ ಬಳ್ಳಾರಿಯಲ್ಲಿ ಬೃಹತ್ ಹೋರಾಟ ಮಾಡಲಿದ್ದೇವೆ ಇದಕ್ಕೆ ಇತರ ಸಂಘಟನೆಗಳ ಜೊತೆ ಹೋರಾಟ ರೂಪರೇಷಗಳು ಕುರಿತು ಚರ್ಚಿಸಿ  ನಿರ್ಣಯವಾಗಿರುವ ದಿನದಂದು ಬಳ್ಳಾರಿಯಲ್ಲಿ ಹೋರಾಟ ಮಾಡಲಿದ್ದೇವೆ ಎಂದು ವಿವರಿಸಿದರು. 

ಈ ಸಂದರ್ಭದಲ್ಲಿ ರೈತಸಂಘದ ಮಾದವರೆಡ್ಡಿ, ಜನಸಂಗ್ರಾಮ ಪರಿಷತ್ನ ಮುಖಂಡ ಶ್ರೀಶೈಲಪ್ಪ ಆಲ್ದಳ್ಳಿ, ಟಿ.ಎಂ.ಶಿವಕುಮಾರ, ಮುಲಿಮನಿ ಈರಣ್ಣ, ರುದ್ರಗೌಡ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.