ಲೋಕದರ್ಶನ ವರದಿ
ಬಳ್ಳಾರಿ 26: ಜಿಲ್ಲೆಯ ತೋರಣಗಲ್ಲು ಜೆ.ಎಸ್.ಡಬ್ಲ್ಯೂ.ನ ಜಿಂದಾಲ್ ಉಕ್ಕು ಕಾರ್ಖಾನೆಗೆ ಅತಿ ಕಡಿಮೆ ಬೆಲೆಗೆ ಮಾರಾಟ ಕ್ರಯಪತ್ರದ ಮೂಲಕ ಸುಮಾರು 3667 ಎಕರೆ ಭೂಮಿಯನ್ನು ರಾಜ್ಯ ಸರಕಾರ ನೀಡಿರುವುದು ಖಂಡನೀಯ ಅದರಲ್ಲೂ ದೇಶದ ಅತಿ ದೊಡ್ಡ ಉಕ್ಕು ಕಾಖರ್ಾನೆ ವಾರ್ಷಿಕ ವಹಿವಾಟು ಬಹುಕೋಟಿ ಆಗಿರುವಂತಹ ಜಿಂದಾಲ್ ಕಂಪನಿ ಇಷ್ಟು ಕಡಿಮೆ ಬೆಲೆಯಲ್ಲಿ ಜಮೀನು ನೀಡಿರುವುದು ಸಕರ್ಾರದ ಬೊಕ್ಕಸಕ್ಕೆ ವಂಚನೆ ಆದಕಾರಣ ಈ ಕೂಡಲೇ ರಾಜ್ಯ ಸರ್ಕಾರ ಜಮೀನನ್ನು ಹಿಂಪಡೆಯಬೇಕು ಮತ್ತು ಜಿಲ್ಲಾ, ರಾಜ್ಯ ಸ್ಥಳೀಯರಿಗೆ ಉದ್ಯೋಗವಕಾಶವನ್ನು ಕೊಡಬೇಕು ಇಲ್ಲವಾದರೆ ರಾಜ್ಯ ಪ್ರತಿ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿ.ರಾಮಾಂಜಿನೇಯ, ನಗರಾಧ್ಯಕ್ಷರಾದ ಬಿ.ಚಂದ್ರಶೇಖರ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ವಿ.ಕೆ.ರಾಜ, ಜಿಲ್ಲಾ ಪ್ರದಾನಕಾರ್ಯದರ್ಶಿಗಳು , ಬಿ.ಪಾರ್ವತಿ, ಜಿಲ್ಲಾ ಉಪಾದ್ಯಕ್ಷರಾದ ಬಿ.ಆರ್.ಎಲ್.ಸಿನಾ, ಬಳ್ಳಾರಿ ತಾಲೂಕು ಅಧ್ಯಕ್ಷರಾದ ಕರುಣಾಕರರೆಡ್ಡಿ, ಬಳ್ಳಾರಿ ಜಿಲ್ಲಾ ರೈತ ಸಂಘ ಅಧ್ಯಕ್ಷರಾದ ಹುಲಿಗೇಶ್, ನಗರ ಉಪಾದ್ಯಕ್ಷರಾದ ಅಸುಂಡಿ ಸೂರಿ ಹಾಗೂ ಕ.ರವೇ ಸದಸ್ಯರುಗಳು ಭಾಗವಹಿಸಿದ್ದರು.