ಬಳ್ಳಾರಿ: ಕರಿಮಾರೆಮ್ಮ ದೇವಿ ಪೂಜೆ ಜಾತ್ರಾ ಮಹೊತ್ಸವ

ಲೋಕದರ್ಶನ ವರದಿ

ಬಳ್ಳಾರಿ 12: ನಗರದ ಕೌಲ್ಬಜಾರ್ ಪ್ರದೇಶದ ಮೋರಿಗಲ್ಲಿನಲ್ಲಿರುವ ಮಾತೆ ಕರಿಮಾರೆಮ್ಮ ದೇವಿಯ ಪೂಜೆ ಮತ್ತು ವಾಷರ್ಿಕ ಜಾತ್ರಾ ಮಹೋತ್ಸವವ ಕಾರ್ಯಕ್ರಮ ಜರುಗಿಸಿಲಾಯಿತೆಂದು ದೇವಸ್ಥಾನದ ಧರ್ಮಕರ್ತರಾದ ಎ.ಕುಪ್ಪಸ್ವಾಮಿ ತಿಳಿಸಿದರು. 

ಶ್ರಾವಣ ಮಾಸದ ಎರಡನೇ ಸೋಮವಾರದಂದು ದೇವಿಗೆ ಅಭಿಷೇಕ, ಪುಷ್ಪಲಂಕಾರ, ಗಣಪತಿ ಹೋಮ, ದುಗರ್ಾ ಹೋಮ, ಕುಂಕಮಾರ್ಚನೆ, ಪೂಣರ್ಾಹುತಿ ಪೂಜೆಯನ್ನು ಅರ್ಚಕರಾದ ಎ.ಪದ್ಮನಾಭಶಾಸ್ತ್ರಿಯವರು ನೆರವೇರಿಸಿದರು. ಈ ಧಾಮರ್ಿಕ ಪೂಜಾ ಕಾರ್ಯ ಕ್ರಮದಲ್ಲಿ ದೇವಿಯ ಹಲವಾರು  ಭಕ್ತರು ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಕುಪ್ಪಸ್ವಾಮಿಯವರು ಮಾತನಾಡಿ, ನೂರಾರು ವರ್ಷಗಳ ಹಿಂದೆ ಕರಿ ಮಾರೆಮ್ಮ ಗುಡ್ಡದ ಮೇಲೆ ಉದ್ಭವಿಸಿರುವ ದೇವಿಯನ್ನು ಮೋರಿಗಲ್ಲಿಯಲ್ಲಿ ಪ್ರತಿಷ್ಟಾಪಿಸಿ ಅಂದಿನಿಂದ ಇಂದಿನವರೆಗೂ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಮ್ಮ ವಂಶಸ್ತರು ನಡೆಸುತ್ತಾ ಬಂದಿರುತ್ತಾರೆ. ಅದೇ ರೀತಿಯಲ್ಲಿ ನಾವು ಕೂಡ ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ದೇವಿಯ ಕೃಪೆಯಿಂದ ಭಕ್ತರ ಬೇಡಿಕೆಗಳು ನೆರವೇರುತ್ತಿವೆ. ಅದಕ್ಕಾಗಿ ಭಕ್ತರು ಅಗ್ನಿಕುಂಡ ಪ್ರವೇಶ ಮಾಡುತ್ತಾ ತಮ್ಮ ಹರಕೆಯನ್ನು ತೀರಿಸುತ್ತಾರೆ ಎಂದರು. 

ಅದೇ ರೀತಿ ಮಂಗಳವಾರದಂದು ಮುಂಜಾನೆ 9 ಗಂಟೆಗೆ ನೂರಾರು ಕಳಸಹೊತ್ತ ಮಹಿಳೆಯರೊಂದಿಗೆ ದೇವಿಯ ಉತ್ಸವ ಮೂತರ್ಿಯನ್ನು ವಿವಿಧ ಹೂವುಗಳ ಅಲಂಕಾರ ದೊಂದಿಗೆ ಉತ್ಸವವನ್ನು ನಡೆಸಲಾಗುವುದು. ಮತ್ತು ಮದ್ಯಾಹ್ನ 12 ಗಂಟೆಯಿಂದ 1 ಗಂಟೆಯ ವರೆಗೆ ಅಗ್ನಿಕುಂಡ ಪ್ರವೇಶ, ಮಹಾ ಮಂಗಳಾರತಿ ಹಾಗೂ ವಿವಿಧ ಪೂಜಾ ವಿಧಿ ವಿಧಾನ ಗಳೊಂದಿಗೆ ಧಾಮರ್ಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ದೇವಸ್ಥಾನದ ಧರ್ಮ ಕರ್ತರು ತಿಳಿಸಿದ್ದಾರೆ.