ಲೋಕದರ್ಶನ ವರದಿ
ಬಳ್ಳಾರಿ 17: ನಗರದಲ್ಲಿ ಕುಡಿಯುವ ನೀರು ಬಹಳಷ್ಟು ಕಪ್ಪು ಬಣ್ಣದಲ್ಲಿ ಸರಬರಾಜು ಆಗುತ್ತಿದೆ.
ಇಂತಹ ನೀರನ್ನು ದಿನನಿತ್ಯ ಬಳಸುವಂತಹ ಸಾರ್ವಜನಿಕರಿಗೆ ಅನೇಕ ಚರ್ಮ ರೋಗಗಳು ಹಾಗೂ ಇನ್ನಿತರ ರೋಗಗಳು ಹರಡುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಸಾರ್ವಜನಿಕರಿಗೆ ಆರ್ಥಿಕವಾಗಿ ನಷ್ಟ ಉಂಟಾಗುತ್ತಿದೆ. ಕಾರಣ ನೀರನ್ನು ಶುದ್ದಿಕರಣ ಮಾಡಿ, ಬ್ಲೀಚಿಂಗ್ ಪೌಡರ್ ಹಾಕುವುದರಲ್ಲಿ ಹಾಗೂ ಸ್ವಚ್ಛ ನೀರು ಸರಬರಾಜು ಮಾಡುವುದರಲ್ಲಿ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳೆಲ್ಲಾ ವಿಫಲರಾಗಿದ್ದಾರೆ. ಸಾರ್ವಜನಿಕರ ಆರೋಗ್ಯ ವಿಷಯದಲ್ಲಿ ಆಟವಾಡುವ ಹಕ್ಕು ಯಾರು ನೀಡಿದ್ದಾರೆ?
ನಗರದಲ್ಲಿರುವಂತಹ ಪ್ರತಿಯೊಬ್ಬ ವ್ಯಕ್ತಿ ದಿನನಿತ್ಯ ರೂ.30/-ಖಚರ್ು ಮಾಡಿ ಶುದ್ಧೀಕರಿಸಿದ ನೀರು ಕುಡಿಯುವುದರಿಂದ ಆರ್ಥಿಕ ನಷ್ಟವನ್ನು ತುಂಬಿಸುವಂತ ವ್ಯಕ್ತಿಗಳ್ಯಾರು? ಅಷ್ಟೇ ಅಲ್ಲದೆ ನಗರ ವಾಸಿಗಳು ನಿಷ್ಠಾವಂತರಾಗಿ ಕುಡಿಯುವ ನೀರಿಗೆ ತೆರಿಗೆ ನೀಡುವ ಅವಶ್ಯಕತೆ ಏನಿದೆ.
ದಯಮಾಡಿ ಎಲ್ಲಾ ವಿಷಯಗಳನ್ನು ಪರಿಗಣಿಸಿ ಪೂರ್ತಿ ಶುದ್ಧಿಯಾಗಿಸಿ ನೀರು ಸರಬರಾಜು ಮಾಡುವಂತೆ ಕಾರ್ಯಕ್ರಮವನ್ನು ಮಾಡುವಂತೆ ಕೋರಿಕೊಳ್ಳುತ್ತೇವೆ. ಇಲ್ಲದ ಪಕ್ಷದಲ್ಲಿ ತಮ್ಮ ಕಛೇರಿ ಮುಂದೆ ಸಾರ್ವಜನಿಕರೊಂದಿಗೆ ಕೂಡಿ ಮುಷ್ಕರ ಮಾಡಲು ಸಿದ್ದರಾಗಿದ್ದೇವೆ ಎಂದರು