ಲೋಕದರ್ಶನ ವರದಿ
ಬಳ್ಳಾರಿ 29: ನಾಟ್ಯಕಲಾ ಪ್ರಪೂರ್ಣ ರಾಘವರವರು ರಂಗಭೂಮಿ ಸೇವೆ ಕರ್ನಾಟಕದ ಬಳ್ಳಾರಿ ನಗರದಿಂದಲೇ ಆರಂಭವಾಗಿದೆ. ರಾಘವರ ಅಭಿನಯ ಪ್ರತಿಭೆಯಿಂದ ನಾಟಕ ಕಲೆಯ ಬಗ್ಗೆ ಅವರಿಗಿದ್ದ ಅಪಾರ ಜ್ಞಾನದಿಂದ ಪ್ರಖ್ಯಾತ ನ್ಯಾಯವಾದಿಯಾಗಿ ಅಗ್ರ ನಟರಾಗಿ ನಾಟಕಗ್ರೇಸರ ಚಕ್ರವರ್ತಿಯೆಂದು ಹೆಸರು ಪಡೆದು ಚರಿತ್ರೆ ಸೃಷ್ಟಿಸಿದ್ದಾರೆ.
ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್, ಸಂಸ್ಕೃತಿ ಇನ್ನೂ ಅನೇಕ ಭಾಷೆಗಳಲ್ಲಿ ರಂಗಭೂಮಿಯಲ್ಲಿ ನಟನೆಯನ್ನು ಪ್ರದರ್ಶಿಸಿದ್ದಾರೆ. "ಸರಿಪಡನಿ ಸಂಗತುಲು" ಎಂಬ ನಾಟಕವನ್ನು ರಚಿಸಿದ್ದಾರೆ. ರಂಗಭೂಮಿಗೆ ಸೇವೆ ಸಲ್ಲಿಸಿದ ರಾಘವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಲು ಸಂಸ್ಥೆಯಿಂದ ರಾಘವರ ರಾಜ್ಯ ಪ್ರಶಸ್ತಿಗಳು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಲಾ ಒಬ್ಬೊಬ್ಬರಿಗೆ ಹಾಗೂ ಬಳ್ಳಾರಿ ರಾಘವರ ಜಿಲ್ಲಾ ಪ್ರಶಸ್ತಿಗಳು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಲಾ ಇಬ್ಬರಿಗೆ ನೀಡುತ್ತಾ ಬಂದಿದ್ದೇವೆ. ಒಬ್ಬ ರಂಗಭೂಮಿ ಕಲಾವಿದನಿಗೆ ರಾಜ್ಯ ಪ್ರಶಸ್ತಿಗೆ ರೂ. 15,000/-ಗಳು ನಗದು ಮತ್ತು ರಾಘವರವರ ಬೆಳ್ಳಿ ಪದಕ ನೆನಪಿನ ಕಾಣಿಕೆ, ಜಿಲ್ಲಾ ಪ್ರಶಸ್ತಿಗೆ ರೂ. 5000/-ಗಳ ನಗದು ರಾಘವರವರ ಬೆಳ್ಳಿ ಪದಕ ನೆನಪಿನ ಕಾಣಿಕೆ ನೀಡಲಾಗುತ್ತದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಂಗಭೂಮಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಶಸ್ತಿಗಳನ್ನು 2009 ರಿಂದ ಪ್ರದಾನ ಮಾಡಲಾಗುತ್ತದೆ.
ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರವರ 139ನೇ ಜಯಂತಿಯ ಅಂಗವಾಗಿ ದಿನಾಂಕ 2 ಮತ್ತು 3, ಆಗಸ್ಟ್ 2019ರಂದು ಎರಡು ದಿನಗಳ ಕಾಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತೆಲುಗು ರಂಗಭೂಮಿಗೆ ಸೇವೆ ಸಲ್ಲಿಸಿದ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿಯನ್ನು ಎಂ.ಅರ್ಜುನರಾವ್, ಹಾಗೂ ಜಿಲ್ಲಾ ಪ್ರಶಸ್ತಿಯನ್ನು ನಗರ ನಿವಾಸಿಗಳಾದ ಜಿ.ವೆಂಕಟೇಶುಲು, ಎಂ.ವಿ.ವೆಂಕಟೇಶ್ವರಲು, ಗುಂತಕಲ್ಲು, ಅನಂತಪುರ ಜಿಲ್ಲೆ ಇವರುಗಳಿಗೆ ಪ್ರದಾನ ಮಾಡಲಾಗುವುದು. ನಂತರ ಡಾ.ರಾಮನ್ ಫೌಂಡೇಷನ್ ಸಾಯಿಬಾಬಾ ನಾಟ್ಯ ಮಂಡಳಿ, ವಿಜಯವಾಡ ಇವರಿಂದ "ಪೃಥ್ವಿರಾಜ್ ರಾಸೋ" ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ರಚನೆ ಮತ್ತು ನಿರ್ದೇಶನ ಡಾ. ಪಿ.ವಿ.ಎನ್.ಕೃಷ್ಣ ವಿಜಯವಾಡ.