ಬಳ್ಳಾರಿ: ತಂಬಾಕು ನಿಯಂತ್ರಣ: ತರಬೇತಿ ಕಾರ್ಯಾಗಾರ

ಲೋಕದರ್ಶನ ವರದಿ

ಬಳ್ಳಾರಿ 25: ನಗರದಲ್ಲಿ ತಂಬಾಕು ಬಳಕೆ ಹೆಚ್ಚಾಗಿದ್ದು, ಕೋಟ್ಪಾ ಕಾಯ್ದೆ-2003 ಕುರಿತು ಹೆಚ್ಚಿನ ಅರಿವು ಮೂಡಿಸುವುದರ ಮೂಲಕ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದಶರ್ಿ ಅರ್ಜುನ್.ಎಸ್.ಮಲ್ಲೂರು ಅವರು ಹೇಳಿದರು.

     ನಗರದ ಪೋಲಾ ರೆಸಿಡೆನ್ಸಿಯ ಪ್ಯಾರಡೇಸ್ ಹೋಟಲ್ನ  ಸಭಾಂಗಣದಲ್ಲಿ ಗುರುವಾರದಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಂಬಾಕು ನಿಯಂತ್ರಣ ಕಾಯಿದೆ 2003ರ  ಪರಿಣಾಮಕಾರಿ ಅನುಷ್ಠಾನ, ಸಾಮಾಥ್ರ್ಯಭಿವೃದ್ಧಿ ಮತ್ತು ಮೇಲ್ವಿಚಾರಣೆಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

        ಈ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ಹನುಮಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಮರಿಯಂಬಿ ಮಾತನಾಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪ ಅವರು ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ತೊಂದರೆಗಳ ಕುರಿತು ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ದುರುಗಪ್ಪ ಎಸ್. ಮಾಚನೂರು ಕೋಟ್ಪಾ 2003 ಕಾಯಿದೆಯ ಕುರಿತು   ವಿವರವಾದ ಉಪನ್ಯಾಸ ನೀಡಿದರು.

        ಈ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ ಮತ್ತು ಕಂದಾಯ ನಿರೀಕ್ಷಕರು, ಪರಿಸರ ಅಭಿಯಂತರರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪದಾಧಿಕಾರಿಗಳು, ಬೆಂಗಳೂರಿನ ಮಾಯಾ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.