ಬಾಗಲಕೋಟೆ: ಹಿಂದಿನ ಕಾಲದಲ್ಲಿ ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನವಾಗಿದ್ದು, ಇಂದಿನ ಚುನಾವಣೆ ಸಂದರ್ಭದಲ್ಲಿ ದಾನದಲ್ಲಿಯೇ ಶ್ರೇಷ್ಠವಾದುದು ಮತದಾನವೆಂದು ಮತದಟ್ಟು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು.
ನವನಗರದ ಪೊಲೀಸ್ ಪ್ಯಾಲೇಸ್ ಹತ್ತಿರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಸ್ವೀಲ್ ಸಮಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿಗಾಗಿ ಬೃಹತ್ ಜಾಥಾ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಪ್ರಗತಿ ಕಾರ್ಯಗಳು ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕಾದರೇ ಆಡಳಿತ ಉತ್ತಮವಾಗಿರಬೇಕು. ನಮ್ಮನ್ನಾಳುವ ಜನಪ್ರತಿ ನಿಧಿಗಳು ನಮಗೆ ಬೇಕಾಗುವ ಕುಂದು ಕೊರತೆಗಳನ್ನು ನೀಗಿಸುವಂತವಾಗಿರಬೇಕು. ಅಂತಹ ಉತ್ತಮವಾದ ವ್ಯಕ್ತಿಯನ್ನು ಆಯ್ಕೆ ಮಾಡುವ ಹಕ್ಕು ನಿಮ್ಮದಾಗಿದ್ದು, ನಿಮ್ಮೆಲ್ಲ ಕಾರ್ಯಗಳಿಗೆ ಸ್ಪಂದಿಸುವ ವ್ಯಕ್ತಿ ಇವರಾಗಿದ್ದಾರೆಂದು ಅರಿತು ಯಾವುದೇ ಆಷೆ ಆಕಾಂಕ್ಷೆಗಳಿಗೆ ಮೊರೆ ಹೋಗದೇ ಮತ ಚಲಾಯಿಸಿ ಉತ್ತಮ ಆಡಳಿತಕ್ಕೆ ಕಾರಣಿಭೂತರಾಗಬೇಕೆಂದರು.
ಜಿಲ್ಲಾ ಪಂಚಾಯತ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಚೇರಮನ್ರಾದ ಗಂಗೂಬಾಯಿ ಮಾನಕರ ಮಾತನಾಡಿ ಕಳೆದ ಚುನಾವಣೆಯಲ್ಲಿ ಶೇ.68 ರಷ್ಟು ಮತದಾನವಾಗಿದ್ದು, ಈ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ ಗುರಿಯನ್ನು ಇಟ್ಟುಕೊಳ್ಳಲಾಗಿದ್ದು, ಅದಕ್ಕಾಗಿ ವಿವಿಧ ವಿನೂತನ ರೀತಿಯ ಜಾಗೃತಿ ಕಾರ್ಯಕ್ರಮಗಳಲ್ಲಿ ರಕ್ತದಾನ ಶಿಬಿರವು ಒಂದಾಗಿದೆ ಎಂದರು. ಈ ಚುನಾವಣೆಯಲ್ಲಿ ಮಹಿಳೆಯರಿಗೆ, ಪುರುಷರಿಗೆ ಹಾಗೂ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲುಗಳನ್ನು ಮಾಡಲಾಗಿದೆ ಎಂದರು.
ಏಪ್ರೀಲ್ 23 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಅಲ್ಲದೇ ತಾವು ಮತದಾನ ಮಾಡುವುದರ ಜೊತೆಗೆ ಇತರರನ್ನು ಪ್ರೇರೆಪಿಸಬೇಕು. ಯಾವುದೇ ಅರ್ಹ ಮತದಾರ ಮತದಾನದಿಂದ ವಂಚಿತರಾಗಬಾರದು ಎಂಬ ದೃಷ್ಠಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ವಿಕಲಚೇತನರಿಗೆ ಮನೆಯಿಂದ ಮತಗಟ್ಟೆಗೆ ಹಾಗೂ ಮತಗಟ್ಟೆಯಿಂದ ಮನೆಯವರೆಗೆ ವಾಹನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ತಿಳಿಸಿದರು. ನವನಗರದ ಪೊಲೀಸ್ ಪ್ಯಾಲೇಸ್ನಿಂದ ಹೊರಟ ಬೃಹತ್ ಜಾಗೃತಿ ಜಾಥಾ ಎಲ್.ಐ.ಸಿ ಸರ್ಕಲ್ ಆಗಮಿಸಿ ಬೃಹತ್ ಮಾನವ ಸರಪಳಿ ನಿಮರ್ಿಸಿ ವಿವಿಧ ಘೋಷಣೆ ಫಲಕಗಳನ್ನು ಹಿಡಿದು ನೆರೆದ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ಪಾಲ್ಗೊಂಡ ನೂರಾರು ಪ್ಯಾರಾ ಮೆಡಿಕಲ್ ವಿದ್ಯಾಥರ್ಿಗಳು ಮತದಾನ ಜಾಗೃತಿಯ ಘೋಷಣೆಗಳನ್ನು ಕೂಗಿದರು. ನಂತರ ಜಾಥಾ ಡಾ.ಬಿ.ಆರ್.ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು.
ನಂತರ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಟೆಕ್ನಾಲಜಿ ಸಂಘ, ವೈದ್ಯಾಧಿಕಾರಿಗಳ ಸಂಘ, ಕಿರಿಯ ಮತ್ತು ಹಿರಿಯ ಆರೋಗ್ಯ ಸಹಾಯಕರ ಸಂಘ ಹಾಗೂ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಸಂಘಗಳ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 51 ಶಿಬಿರಾಥರ್ಿಗಳು ರಕ್ತದಾನ ಮಾಡಿದರು. ಅಲ್ಲದೇ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ರಕ್ತದಾನ ಮಾಡುವ ಮೂಲಕ ಮತದಾನ ಜಾಗೃತಿಗೆ ಸಾಥ್ ನೀಡಿದರು. ಅವರು ರಕ್ತದಾನ ಮಾಡಿದರು.
ಬೃಹತ್ ಜಾಥಾ ಹಾಗೂ ರಕ್ತದಾನ ಶಿಬಿರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ಬಳ್ಳಾರಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಸವರಾಜ ಶಿರೂರ ಸೇರಿದಂತೆ ತಾಲೂಕಾ ಅಧಿಕಾರಿಗಳು, ಆರೋಗ್ಯ ಇಲಾಖೆಯ ಎಲ್ಲ ವೃಂದ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.