ಮಾಜಿ ಶಾಸಕರಾದ ಚಂದ್ರಕಾಂತ ಗುರ​‍್ಪ ಅವರ ಜನ್ಮದಿನ

Birthday of former MLA Chandrakant Gurpa

ಮಾಜಿ ಶಾಸಕರಾದ ಚಂದ್ರಕಾಂತ  ಗುರ​‍್ಪ ಅವರ ಜನ್ಮದಿನ 

  ಹುಬ್ಬಳ್ಳಿ 24: ಮಾಜಿ ಶಾಸಕರಾದ ಚಂದ್ರಕಾಂತ  ಗುರ​‍್ಪ ಬೆಲ್ಲದ ಅವರ 87ನೇ ಜನ್ಮದಿನೋತ್ಸವ ಶುಭ ಸಂದರ್ಭದಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಸರಳ ಸಜ್ಜನ, ಪರಿಶುದ್ಧ ರಾಜಕಾರಣ ಮಾಡಿ, ರಾಜಕೀಯದಿಂದ ದೂರ ಉಳಿದು ಆದ್ಯಾತ್ಮೀಕ, ಸಾಹಿತ್ಯಿಕ, ಧಾರ್ಮಿಕ, ಸಮಾಜ ಸಂಘಟನೆ ತಮ್ಮನ್ನು ತಾವು ತೊಡಗಿಸಿಕೊಂಡು ಜನಪರ ಕಾಳಜಿಯಿಂದ ಅತ್ಯಂತ ಕ್ರೀಯಾಶೀಲ ಕಾರ್ಯಮಾಡುತ್ತಿರುವ, ಹಿರಿಯರು, ಮಾರ್ಗದರ್ಶಕರು, ಪರಮ ಪೂಜ್ಯರಾದ ಚಂದ್ರಕಾಂತ ಗುರ​‍್ಪ ಬೆಲ್ಲದ ಅವರಿಗೆ ಮಾಲಾರೆ​‍್ಣ ಮಾಡಿ ಶ್ರದ್ಧಾ, ಭಕ್ತಿಯಿಂದ  ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು. ಶುಭಕೋರಿದರು. ನಾಡಿನ ಖ್ಯಾತ ಗ್ರಂಥಪಾಲಕರು, ಕವಿಯ ಗ್ರಂಥಾಲಯ ವಿಭಾಗದ ಪ್ರಾಧ್ಯಾಪಕರಾಗಿದ್ದ ಪೊ ಎಂ.ಆರ್‌.ಕುಂಬಾರ ಅವರ ಭಾವಚಿತ್ರಕ್ಕೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಪುಷ್ಪ ಸಮರೆ​‍್ಣ ಮಾಡಿ ನಮನಗಳನ್ನು ಸಲ್ಲಿಸಿದ.   ನಿವೃತ್ ಪ್ರಾಧ್ಯಾಪಕ ಡಾ.ಎಸ್‌.ಎಲ್‌.ಸಂಗಮ, ಪ್ರಾಚಾರ್ಯಡಾ. ಮಹೇಶ ಡಿ. ಹೊರಕೇರಿ, ಸಿದ್ಧಯ್ಯ ಹಿರೇಮಠ, ಚಂದ್ರಶೇಖರ ಚನ್ನಂಗಿ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ  ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ,ಡಾ. ಗುಂಡಣ್ಣ ಕಲಬುರ್ಗಿ, ಮದನ ಕಳಸಕರ, ಡಾ.ವಿನಾಯಕ ಬಂಕಾಪುರ, ಮುಂತಾದವರು ಇದ್ದರು.