ಲೋಕದರ್ಶನ ವರದಿ
ಬೈಲಹೊಂಗಲ 30: ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ, ಶಿವಯೋಗೀಶ್ವರ ಗ್ರಾಮೀಣ ಆಯುವರ್ೇದಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಇಂಚಲ, ತಾಲೂಕಾ ಆರೋಗ್ಯಾಧಿಕಾರಿ, ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿಯವರ 80 ನೇ ವರ್ಷದ ಹುಟ್ಟುಹಬ್ಬ, 50ನೇ ವರ್ಷದ ಪೀಠಾರೋಹಣ, ಸ್ವರ್ಣ ರಥೋತ್ಸವದ ಅಂಗವಾಗಿ ಬುಧವಾರ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ 80ಕ್ಕೂ ಹೆಚ್ಚು ಜನರು ಸ್ವಪ್ರೇರಣೆಯಿಂದ ರಕ್ತದಾನವನ್ನು ಮಾಡಿದರು. ಸಂಸ್ಥೆಯ ಚೇರಮನ್ ಡಿ.ಬಿ. ಮಲ್ಲೂರ, ಕಾರ್ಯದಶರ್ಿ ಎಸ್.ಎನ್.ಕೊಳ್ಳಿ, ಪ್ರಾಚಾರ್ಯ ಡಾ. ಜಿ. ವಿನಯ ಮೋಹನ್, ಉಪಪ್ರಾಚಾರ್ಯ ಡಾ. ಜಿ.ಎಸ್. ಹಾದಿಮನಿ, ಡಾ. ಶಿವಕುಮಾರ ಬೂದಿಹಾಳ, ಮಂಜುನಾಥ ಭಟ್, ಡಾ. ಅಕ್ಷಯ ಗಣಾಚಾರಿ ಹಾಗೂ ಬಿಎಎಂಎಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.