ಕಟ್ಟಡ,ಇತರೆ ನಿರ್ಮಾಣ ಕಾರ್ಮಿಕರಿಂದ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಕೊಪ್ಪಳ 11: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ.11 ರಂದು ಶುಕ್ರವಾರ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರಿಗೆ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದರು. ಇಂದು ನೈಜವಾಗಿ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳು ಸಿಗುತ್ತಿಲ್ಲ, ಶೇಕಡ 90 ರಷ್ಟು ಗ್ರಾಮೀಣ ಪ್ರದೇಶದ ಕಾರ್ಮಿಕರು ಇದ್ದು ಅವರಿಗೆ ಸೌಲಭ್ಯಗಳು ಸಿಗುತ್ತಿಲ್ಲ, ಕಾರ್ಮಿಕರಿಗೆ ನೀಡುವ ಕಿಟ್ಟಿನಲ್ಲಿ 350 ಕೋಟಿ ರೂಪಾಯಿ ಭ್ರಷ್ಟಾಚಾರವಾಗಿದ್ದು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೊಸದಾಗಿ ಜಾರಿಗೊಳಿಸಿರುವ ಕುಟುಂಬ ಐ ಡಿ ಅಪ್ಲಿಕೇಷನನ್ನು ಈ ಕೂಡಲೇ ರದ್ದುಗೊಳಿಸಬೇಕು,ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೀಡಲಾಗುವ ಎಲ್ಲಾ ರೀತಿಯ ಟೂಲ್ ಕಿಟ್ಟಗಳನ್ನು ನೀಡುತ್ತಿರುವುದನ್ನು ಈ ಕೂಡಲೇ ಸ್ಥಗಿತ ಗೊಳಿಸಬೇಕು ಎಂದರು. ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಹಾಗೂ ಇತರೆ ಕಾರ್ಮಿಕರ ಸೇವಾ ಸಂಘ ದ ಸಂಸ್ಥಾಪಕ ಅಧ್ಯಕ್ಷ ಹಾಗೂ ಜೈ ಜವಾನ್ ಜೈ ಕಿಸಾನ್ ಜೈ ಭಾರತ್ ಮಾತೆ ರೈತ ಸಂಘದ ಜಿಲ್ಲಾಧ್ಯಕ್ಷ ಮುಸ್ತಫಾ ಪಠಾಣ್ ಮಾತನಾಡಿ ಕಾರ್ಮಿಕರ ಸಮಸ್ಯೆಗಳಿಗೆ ಸರಕಾರ ತಕ್ಷಣ ಸ್ಪಂದಿಸುತ್ತಿಲ್ಲ, ರಾಜ್ಯದ ಕಾರ್ಮಿಕ ಇಲಾಖೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಕಾರ್ಮಿಕರ ಮಂಡಳಿ ರಚನೆ ಮಾಡಿ ಎರಡು ಸ್ಪಂದಿ ಸಾವಿರ ಕೋಟಿ ರೂಪಾಯಿ ಅನುದಾನ ನೀಡಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದು ಇಂದು ನಾವು ನೆನೆಯಬೇಕಾಗಿದೆ, ರಾಜ್ಯ ಸರ್ಕಾರ ಕೂಡಲೇ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಯು ಹೋರಾಟಕ್ಕೆ ಸಂಪೂರ್ಣ ಬೆಂಬಲಿಸುವುದಾಗಿ ಹೇಳಿದರು.ಮುಖಂಡ ರಮೇಶ್ ಘೋರೆ್ಡ ಮಾತನಾಡಿ 56 ಲಕ್ಷ ಕಟ್ಟಡ ಕಾರ್ಮಿಕರಿದ್ದು, 26 ಲಕ್ಷ ಕಾರ್ಮಿಕರ ಕಾರ್ಡು ಅನರ್ಹಗೊಳಿಸಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕಾರ್ಮಿಕರ ಮೇಲೆ ನಂಬಿಕೆ ಇಲ್ಲ ಅವರು ಶೈಕ್ಷಣಿಕ, ಮದುವೆ ಸಹಾಯ ಧನ ಸೇರಿದಂತೆ ಇತರೆ ನೀಡುತ್ತಿಲ್ಲ ಎಂದರು.ಮುಖಂಡ ಸುಲ್ತಾನ್ ಮಹೆಬೂಬ್ ಅಲಿ ಪಠಾಣ್ ಮಾತನಾಡಿ ಈಗಾಗಲೇ ಹಲವಾರು ತಿಂಗಳಿಂದ ಮಂಜುರಾತಿ ಪಡೆದ ಫಲಾನುಭವಿಗಳಿಗೆ ಧನಸಹಾಯ ಕೂಡಲೇ ಬಿಡುಗಡೆ ಮಾಡಬೇಕು ಎಂದರು. ಮತ್ತೋರ್ವ ಮುಖಂಡ ಹನುಮಂತಪ್ಪ ಐಹೊಳೆ ಮಾತನಾಡಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹೊಸ ಹೊಸ ಐಡಿ ಆಪ್ ಗಳನ್ನು ಜಾರಿಗೆ ತಂದು ಕಾರ್ಮಿಕರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು. ಕಾರ್ಮಿಕರ ಮುಖಂಡರಾದ ಶಿವಕುಮಾರ್ ಗೌಡ ಸೇರಿದಂತೆ ಇತರರು ಇದೇ ಸಂದರ್ಭದಲ್ಲಿ ಮಾತನಾಡಿ ಪಿಂಚಣಿದಾರರಿಗೆ ಶೀಘ್ರವೇ ಅವರ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ಪ್ರತಿ ತಿಂಗಳು 10ನೇ ತಾರೀಖಿನ ಒಳಗಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ಪಿಂಚಣಿಯನ್ನು 60 ವರ್ಷಕ್ಕೆ ಇರುವ ನಿಯಮವನ್ನು ಕಡಿತ ಗೊಳಿಸಿ ಕಾರ್ಮಿಕರಿಗೆ 50 ವರ್ಷಕ್ಕೆ ಪಿಂಚಣಿ ನೀಡಬೇಕು ಎಂದರು. ಕೊಪ್ಪಳ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹೋರಾಟದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹೋರಾಟ ಸಮಿತಿಯ ಮುಖಂಡರಾದ ಎ.ಎಲ್. ತಿಮ್ಮಣ್ಣ, ಬಾಬು ಮೇಸ್ತ್ರಿ, ಅಬ್ದುಲ್ ಜವಳಗೇರಾ, ಮಹೆಬೂಬ್ ಮಣ್ಣೂರ್, ಎ. ಎಸ್ ಅಂಜನಪ್ಪ, ರುದ್ರ್ಪ ಹಣವಾಳ, ದಾದಾ ಮುದಗಲ್, ಮಹೇಶ್ ಗೋಡೆಕರ್ ಉಪಸ್ಥಿತರಿದ್ದರು.