ಲೋಕದರ್ಶನ ವರದಿ
ಕೊಪ್ಪಳ 05: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ಜರುಗಿದ ಇಟಗಿ ಉತ್ಸವದಲ್ಲಿ ಜಿಲ್ಲಾ ಹಡಪದ ಸಮಾಜದ ಅಧ್ಯಕ್ಷ ಮಂಜುನಾಥ ಹಂದ್ರಾಳ ಅವರಿಗೆ ಅವರ ಸಮಾಜಸೇವೆ ಪರಣಿಗಣಸಿ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಈ ಪ್ರಶಸ್ತಿಯಿಂದಾಗಿ ನನಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ. ಸಮಾಜ ಸೇರಿದಂತೆ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಲು ಪ್ರೋತ್ಸಾಹ ದೊರೆತಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಇಟಗಿ ಉತ್ಸವದ ಸವರ್ಾಧ್ಯಕ್ಷರಾದ ಅನ್ನಪೂರ್ಣಮ್ಮ ಮನ್ನಾಪೂರ, ಮಹೇಶ ಬಾಬು ಸುವರ್ೆ, ಅನ್ನದಾನಿಭಾರತಿ ಅಪ್ಪಣ್ಣ ಸ್ವಾಮಿಗಳು, ಜಿ.ಎಸ್. ಗೋನಾಳ, ಪಕ್ಕೀರಪ್ಪ ವಜ್ರಬಂಡಿ, ಸಾದಿಕ ಅಲಿ, ಗವಿ ಕಾಟ್ರಳ್ಳಿ, ದ್ಯಾಮಣ್ಣ ಮ್ಯಾದನೇರಿ ಸೇರಿದಂತೆ ಇನ್ನಿತರರು ಇದ್ದರು.