ಮಾಂಜರಿ 19: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಗ್ರಾಮಸ್ಥರ ವಂತಿಗೆ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಬಸ್ ನಿಲ್ದಾಣದ ಆವರಣದಲ್ಲಿ ನಿಮರ್ಿಸಲಾದ ವೀರರಾಣಿ ಕಿತ್ತೂರ ಚನ್ನಮ್ಮಾ ವೃತ್ತದಲ್ಲಿ ವೀರರಾಣಿ ಚನ್ನಮ್ಮಾಳ ಅಶ್ವಾರೂಢ ಪ್ರತಿಮೆಯನ್ನು ಗ್ರಾಮಸ್ಥರು ಹಾಗೂ ಇನ್ನಿತರ ನಾಗರಿಕರ ಉಪಸ್ಥಿತಿಯಲ್ಲಿ ಇಂದು ಸಾಯಂಕಾಲ ಪ್ರತಿಷ್ಠಾಪನೆ ಮಾಡಲಾಯಿತು.
ಔರಂಗಾಬಾದ ಕಲಾವಿದರು ನಿಮರ್ಿಸಿದ ವೀರ ರಾಣಿ ಕಿತ್ತೂರ ಚನ್ನಮ್ಮಾಳ ಅಶ್ವಾರೂಢ ಪ್ರತಿಮೆಯನ್ನು ಗ್ರಾಮದ ಗ್ರಾಮದೇವತೆಯನ್ನು ಸಿದ್ದೇಶ್ವರ ದೇವಾಲಯದ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಪ್ರತಿಮೆಯನ್ನು ಬಸ್ ನಿಲ್ದಾಣದ ವೃತ್ತದವರೆಗೆ ತರಲಾಯಿತು.
ಮೆರವಣಿಗೆಯನ್ನು ಗೌರಿ ಶಂಕರ ಕಲ್ಯಾಣ ಮಠ ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಧೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೆಶಕ ಮಲ್ಲಿಕಾಜರ್ುನ ಕೋರೆ ಅಂಕಲಿಯ ಶ್ರೀಮಂತ ಸರಕಾರ ಮಹಾದದಾಜಿ ಶಿತೋಳೆ ಸರಕಾರ ರಂಜಿತ ಶೀರಶೇಟ, ಸುರೇಶ ಪಾಟೀಲ, ತುಕಾರಾಮ ಪಾಟೀಲ, ಪಾಂಡುರಂಗ ವಡ್ಡರ, ಸತೀಶ ಕೋರೆ, ಸುರೇಶ ಕೋರೆ, ಸಚೀನ ಕುಠೋಳೆ, ಶಿವಪುತ್ರ ತಾವದಾರೆ, ಭರಮಗೌಡಾ ಪಾಟೀಲ, ಸುರೇಶ ಹಿರೆಕುರಬರ, ದತ್ತಾತ್ರಯ ಕುಂಬಾರ ಇವರ ನೇತೃತ್ವದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.