ಕೊಪ್ಪಳ 16: ಬಾಲ್ಯ ವಿವಾಹ ಹಾಗೂ ಬಾಲಕಾಮರ್ಿಕತೆ ಎಂಬುವುದು ಸಮಾಜದಲ್ಲಿ ಒಂದು ಅನಿಧರ್ಿಷ್ಟ ಪದ್ಧತಿಯಾಗಿದ್ದು, ಇದರ ನಿಮರ್ೂಲನೆಗೆ ಶಿಕ್ಷಣವೇ ಮೂಲ ಅಸ್ತ್ರವಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಮರ್ಿಕ ಇಲಾಖೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಿಲರ್ೋಸ್ಕರ್ ಫೆರಸ್ ಇಂಡಸ್ಟ್ರೀಲ್ ಲಿ. ಬೇವಿನಹಳ್ಳಿ, ಜೆ.ಎನ್.ವೈ. ಪ್ರೋಡಕ್ಷನ್ಸ್ ಬೆಂಗಳೂರು ಇವರ ಸಹಯೋಗದಲ್ಲಿ ಬಾಲ್ಯ ವಿವಾಹ, ಬಾಲ ಕಾಮರ್ಿಕ ಪದ್ಧತಿ ನಿಮರ್ೂಲನೆ, ಸಕರ್ಾರಿ ಶಾಲೆಗಳ ಉನ್ನತೀಕರಣ ಮತ್ತು ಹಳೇ ವಿದ್ಯಾಥರ್ಿ ಸಂಘಗಳ ಬಲವರ್ಧನೆ ಹಾಗೂ ಸ್ವಚ್ಛ ಭಾರತ್ ಆಂದೋಲನ್ ಕುರಿತು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಬುಧವಾರಂದು ಆಯೋಜಿಸಲಾದ ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಹಳ್ಳಿಗಳ ಮಟ್ಟದಲ್ಲಿ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ ಹಾಗೂ ಬಾಲಕಾಮರ್ಿಕತೆ ಇಂದಿಗೂ ಜೀವಂತವಾಗಿವೆ. ಈ ಪದ್ಧತಿಗಳನ್ನು ಹೊಗಲಾಡಿಸಲು ಸಮಾಜದ ಸ್ವಾಮಿಜಿಗಳು ಹಿರಿಯರು, ಜನಪ್ರತಿನಿದಿಗಳು ಮತ್ತು ಮುಖ್ಯವಾಗಿ ಮಕ್ಕಳಿಗೆ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವತಿಯಿಂದ ಆಯೋಜಿಸಿರುವ ಜಾಗೃತಿ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ನಡೆಯಬೇಕು. ಅಲ್ಲದೇ ಇಂತಹ ಅನಿಧರ್ಿಷ್ಟ ಪದ್ಧತಿಗಳ ನಿಮರ್ೂಲನೆಗೆ ಶಿಕ್ಷಣವೇ ಮೂಲ ಅಸ್ತ್ರವಾಗಿದ್ದು, ಎಲ್ಲಾ ಮಕ್ಕಳು ಶಿಕ್ಷಣದ ಕಡೆ ದಾವಿಸಬೇಕು. ಪೋಷಕರು ಮಕ್ಕಳಿಗೆ ವಿದ್ಯೆಯನ್ನು ನೀಡುವ ಮೂಲಕ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವಲ್ಲಿ ಮುಂದಾಗಬೇಕು. ಅಂದಾಗ ಮಾತ್ರ ಸಮಾಜವು ಬಾಲ್ಯ ವಿವಾಹ ಹಾಗೂ ಬಾಲಕಾಮರ್ಿಕ ಮುಕ್ತವಾಗಲು ಸಾಧ್ಯ. ಅಧಿಕಾರಿಗಳ ಕಾರ್ಯವು ಬರೀ ಭಾಷಣಕ್ಕೆ ಸಿಮಿತ ವಾಗದೆ ಜಾಗೃತಿ ಕಾರ್ಯಕ್ರಮಗಳ ಆಯೋಜನೆಗೆ ಮುಂದಾಗಬೇಕು ಎಂದು ಜಿ.ಪಂ. ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ಅವರು ಹೇಳಿದರು.
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು ಮಾತನಾಡಿ, ಮಕ್ಕಳಿಗಿರುವ ಹಕ್ಕುಗಳ ಕುರಿತು ಅವರಿಗೆ ತಿಳಿಸುವುದು ಮುಖ್ಯವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಬಾಲ ಕಾಮರ್ಿಕ ಪದ್ಧತಿಯಡಿ ಹಲವಾರು ಪ್ರಕರಣಗಳು ಕಂಡುಬಂದಿವೆ. ಆದರೆ ಮಕ್ಕಳನ್ನು ಕೆಲಸಕ್ಕೆ ಇರಿಸಿಕೊಂಡಂತಹ ಮಾಲಿಕರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಇಂತಹವರ ವಿರುದ್ಧ ಎಫ್.ಐ.ಆರ್. ದಾಖಲಿಸಿದಾಗ ಮಾತ್ರ ಬಾಲ ಕಾಮರ್ಿಕರತೆ ನಡೆಯುವುದಿಲ್ಲ. ಬಾಲ್ಯ ವಿವಾಹ, ಬಾಲಕಾಮರ್ಿಕತೆ ನಿಮರ್ೂಲನೆಗಾಗಿ ನಿಮರ್ಿಸಲಾದ ಸಂದಿಗ್ಧ ಚಲನಚಿತ್ರವನ್ನು ಪ್ರತಿಯೊಬ್ಬರು ವೀಕ್ಷಿಸಬೇಕು ಎಂಬುವುದೇ ಜಿಲ್ಲಾಡಳಿತದ ಗುರಿಯಾಗಿದೆ. ಇಂದು ಜಿಲ್ಲೆಯ ಸುಮಾರು 10 ಸಾವಿರ ವಿದ್ಯಾಥರ್ಿಗಳು ಈ ಚಿತ್ರ ವೀಕ್ಷಿಸಿದ್ದಾರೆ. ಅಲ್ಲದೇ ಈ ಕಾರ್ಯಕ್ರಮವು ಜ. 30 ರವರೆಗೆ ಆಯೋಜಿಸಲಾಗಿದ್ದು, ಸುಮಾರು 40 ರಿಂದ 45 ಸಾವಿರ ಮಕ್ಕಳು ಸಂದಿಗ್ಧ ಚಲನಚಿತ್ರದ ವೀಕ್ಷಣೆ ಮಾಡಲಿದ್ದಾರೆ ಎಂದರು.
ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ವನಿತಾ ತೊರಾವಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ಇಡೀ ದೇಶಕ್ಕೆ ಹೆಸರು ವಾಸಿಯಾಗಿದ್ದು, ಸ್ವಚ್ಛಭಾರತ್ ಅಡಿಯಲ್ಲಿ ಬಹರ್ಿದೆಸೆಗೆ ಹೊರಗಡೆ ಹೊಗುವದಿಲ್ಲಾ ಮನೆಯಲ್ಲಿಯೆ ಒಂದು ಶೌಚಾಲಯ ಕಟ್ಟಿಸಬೇಕು ಎಂದು ವಿದ್ಯಾಥರ್ಿ ಮಲ್ಲಮ್ಮಳ ಧ್ವನಿ ದೇಶಾದ್ಯಂತ ಹರಡಿದಂತಹ ಜಿಲ್ಲೆಯಾಗಿದೆ. ಬಾಲ್ಯ ವಿವಾಹ ಪ್ರಕರಣದಲ್ಲಿ ಎಫ್.ಐ.ಆರ್. ದಾಖಲಾಗಿರುವುದು ರಾಜ್ಯದಲ್ಲಿಯೇ ಪ್ರಪ್ರಥಮ. ಜಿಲ್ಲೆಯಲ್ಲಿ ಸಕರ್ಾರಿ ಶಾಲೆಗಳ ಉನ್ನತೀಕರಣವಾಗಬೇಕು. ಹಳೆ ವಿದ್ಯಾಥರ್ಿಗಳ ಸಂಘಗಳನ್ನು ಬಲಿಷ್ಟಗೊಳಿಸಬೇಕು. ಅಂದಾಗ ಮಾತ್ರ ಸಕರ್ಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ರತ್ನವ್ವ ಭರಮಪ್ಪ ನಗರ, ಸ್ಥಾಯಿ ಸಮಿತಿ ಅಧ್ಯಕ್ಷ ಚಂಡೂರು ಹನುಮಂತಗೌಡ ಪಾಟೀಲ್, ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕ ಈರಣ್ಣ ಪಂಚಾಳ್, ಸಂದಿಗ್ಧ ಚಲನಚಿತ್ರ ನಿದರ್ೇಶಕ ಸುಚೇಂದ್ರ ಪ್ರಸಾದ, ಜಿಲ್ಲಾ ಪಂಚಾಯತ್ ಯೋಜನಾ ನಿದರ್ೇಶಕ ರವಿ ಬಿಸರಳ್ಳಿ, ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣ ಯೋಜನೆಯ ಹರೀಶ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿರೇಂದ್ರ ನಾವದಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.