ಎಲ್ಲರೂ ಒಗ್ಗಟ್ಟು ಇದ್ದರೆ ಸಮುದಾಯದ ಅಭಿವೃದ್ಧಿ ಸಾಧ್ಯತೆ : ಅನಿಲ್ ನಾಯ್ಡು

Community development is possible if everyone is united: Anil Naidu

ಎಲ್ಲರೂ ಒಗ್ಗಟ್ಟು ಇದ್ದರೆ ಸಮುದಾಯದ ಅಭಿವೃದ್ಧಿ ಸಾಧ್ಯತೆ : ಅನಿಲ್ ನಾಯ್ಡು 

ಬಳ್ಳಾರಿ 10: ಬಲಿಜ ಸಮುದಾಯದ ಬಾಂಧವರು ಒಗ್ಗಟ್ಟಿನಿಂದ ಮಾತ್ರ ಸಮಾಜದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬಿ.ಜೆ.ಪಿ ಜಿಲ್ಲಾಧ್ಯಕ್ಷರ ಮತ್ತು ಬಲಿಜ ಸಮಾಜದ ಮುಖಂಡರಾದ ಅನಿಲ್ ನಾಯ್ಡು ತಿಳಿಸಿದರು.  

ಅವರು ಸೋಮವಾರದಂದು ಬಳ್ಳಾರಿ ದತ್ತಾಸಾಯಿ ನಗರದ ಎಂ ವೇಣುಗೋಪಾಲ್ ಮನೆಯ ಹತ್ತಿರ ದೇವಿನಗರ ಶ್ರೀನಿವಾಸ್ ರವರು ನೇತೃತ್ವದಲ್ಲಿ ಏರಿ​‍್ಡಸಿದ್ದ ಬಲಿಜ ಸಮಾಜದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  

ಈ ಸಂದರ್ಭದಲ್ಲಿ ಹಿರಿಯರಾದ ಆನಂದ್ ರೆಡ್ಡಿ ಮಾತಾಡಿ ಬಲಿಜ ಬಾಂಧವರು ಒಗ್ಗಟ್ಟಾಗಿ ಬಾಳಬೇಕಂದು ಸಮುದಾಯದ ಜನರಿಗೆ ಕರೆ ನೀಡಿದರು. ಅದರಂತೆ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಈ ಕಾರ್ಯಕ್ರಮದಲ್ಲಿ ಜೆಡ್‌.ಪಿ ಶ್ರೀರಾಮುಲು, ಎ.ಎಲ್‌.ಕುಮಾರಸ್ವಾಮಿ, ಬ್ಯಾಂಕ್ ವಿಜಯಕುಮಾರ್, ಪಟೇಲ್ ನಗರ್ ರಾಜೇಶ್, ಬ್ಯಾಂಕ್ ರಾಮಕೃಷ್ಣ, ಪಟೇಲ್ ನಗರ ರಾಜೇಶೇಖರ್, ಪಟೇಲ್ ನಗರ್ ಏರಿಸ್ವಾಮಿ ಸೇರಿದಂತೆ ಬಲಿಜ ಸಮಾಜದ ಅನೇಕ ಮುಖಂಡರುಗಳು ಯುವ ಮುಖಂಡರು ಭಾಗವಹಿಸಿದ್ದರು.  

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಆನಂದ್ ರೆಡ್ಡಿ, ಕೆಎಂಟಿ ಟ್ರೇಡರ್ಸ್‌, ಬಳ್ಳಾರಿ ಇವರನ್ನು ಸನ್ಮಾನಿಸಲಾಯಿತು ಎಂದು ಬಲಿಜ ಸಮಾಜದ ಪ್ರಧಾನ ಸೇವಕರಾದ ದೇವಿನಗರ ಶ್ರೀನಿವಾಸ್ ತಿಳಿಸಿದ್ದಾರೆ.  

ಈ ಕಾರ್ಯಕ್ರದಲ್ಲಿ ಬಲಿಜ ಸಮುದಾಯದ ಅಶೋಕ್, ಶಶಿ, ಜಾಂಬು ಸೇರಿದಂತೆ ಸಮುದಾಯದ ಹಲವಾರು ಮುಖಂಡರು ಮತ್ತು ಯುವಕರು ಇದ್ದರು.