ಲೋಕದರ್ಶನ ವರದಿ
ಮುಧೋಳ 16: ಕಳೆದ 12 ದಿನಗಳಿಂದ ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಬ್ಬು ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಕಬ್ಬಿನ ಬೆಲೆ ನಿಗದಿಪಡಿಸುವಲ್ಲಿ ಕಾಖರ್ಾನೆಗಳು ತೋರುತ್ತಿರುವ ಹಠಮಾರಿ ಧೋರಣೆಯನ್ನು ಖಂಡಿಸಿ ಇಂದು ಮುಧೋಳ ಬಂದ್ನ್ನು ಯಶಸ್ವಿಯಾಗಿ ಆಚರಿಸಲಾಯಿತು.
ಶುಕ್ರವಾರ ಸಂತೆಯ ದಿನ ಜನರಿಂದ ತುಂಬಿ ತುಳುಕುತ್ತಿದ್ದ ನಗರ ಬಂದ್ನಿಂದಾಗಿ ಸಂಪೂರ್ಣವಾಗಿ ಬೀಕೋ ಎನ್ನುತ್ತಿತ್ತು. ನಗರದ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಬಂದ್ ಗೆ ಬೆಂಬಲಿಸಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಹೋರಾಟ ಸ್ಥಳಕ್ಕೆ ತೆರಳಿ ಕಬ್ಬು ಹೋರಾಟಗಾರರಿಗೆ ಬೆಂಬಲ ಸೂಚಿಸಿದರು. ಸ್ಥಳೀಯ ತರಕಾರಿ ಮಾರುಕಟ್ಟೆ, ತೇಲಿ ಗಲ್ಲಿಯಲ್ಲಿನ ಮಾರುಕಟ್ಟೆ ಪ್ರದೇಶ ಹಾಗೂ ಎ.ಪಿ.ಎಂ.ಸಿ ಆವರಣ ಅಲ್ಲದೆ ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ತಾಲೂಕಿನ ಜೀರಗಾಳ, ಚಿಂಚಖಂಡಿ, ಶಿರೋಳ, ಮೆಳ್ಳಿಗೇರಿ, ಸೋರಗಾಂವಿ, ಬೆಳಗಲಿ, ಮಂಟೂರ, ಮುಗಳಖೋಡ ಮುಂತಾದ ಗ್ರಾಮಗಳಲ್ಲಿ ಸಹಿತ ಬಂದ್ ಯಶಸ್ವಿಯಾಗಿ ಆಚರಿಸಲಾಯಿತು.
ಜಿಲ್ಲೆಯ ಕೆಲವು ಸಕ್ಕರೆ ಕಾಖರ್ಾನೆಗಳು 2016-17 ನೇ ಸಾಲಿನ ಎರಡನೆ ಕಂತಾದ ಪ್ರತಿ ಟನ್ನಿಗೆ ರೂ. 310 ಕೊಡಲು ಜಿಲ್ಲಾಧಿಕಾರಿಗಳ ಮುಂದೆ ಒಪ್ಪಿಗೆ ಸೂಚಿಸಿವೆ. ಆದರೆ 2017-18ನೇ ಸಾಲಿಗೆ ನೀಡಬೇಕಾಗಿದ್ದ ದರದಲ್ಲಿ ರೈತರಿಗೆ ತಾರತಮ್ಯ ದರ ನೀಡಿದ್ದು ಹಾಗೂ ಪ್ರಸಕ್ತ ಸಾಲಿನ ಹಂಗಾಮಿನ ದರ ಘೋಷಣೆ ಮಾಡದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೇಡಿಕೆಗಳಿಗಾಗಿ ಕಳೆದ 2-3 ತಿಂಗಳುಗಳಿಂದ ಕಾಖರ್ಾನೆಗಳಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಸಕರ್ಾರಕ್ಕೆ ನಿಧರ್ಾರ ಕೈಗೊಳ್ಳುವಂತೆ ಸೂಚಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವದನ್ನು ಖಂಡಿಸಿ ಇಂದು ಕಬ್ಬು ಬೆಳೆಗಾರರು ಹಾಗೂ ರೈತರು ಮುಧೋಳ ಬಂದ್ ಆಚರಿಸಿದರು.
ಕಬ್ಬು ಬೆಳೆಗಾರ ಮುಖಂಡರಾದ ಕೆ.ಟಿ. ಪಾಟೀಲ, ರಾಮನಗೌಡ ಪಾಟೀಲ, ರಂಗನಗೌಡ ಪಾಟೀಲ, ಉದಯ ಸಾರವಾಡ, ವಿಶ್ವನಾಥ ಉದಗಟ್ಟಿ, ಜಿ.ಪಂ. ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಬಸವಂತ ಕಾಂಬಳೆ, ಗಂಗಾಧರ ಮೇಟಿ, ದುಂಡಪ್ಪ ಯರಗಟ್ಟಿ, ಗೋವಿಂದಪ್ಪ ಗುಜ್ಜನವರ, ಸುಭಾಸ ಶಿರಬೂರ, ಈರಪ್ಪ ಹಂಚಿನಾಳ, ಪಾಂಡಪ್ಪ ಚೌರಡ್ಡಿ ಮುಂತಾದವರ ನೇತೃತ್ವದಲ್ಲಿ ಮುಧೋಳ ಸಂಪೂರ್ಣ ಬಂದ್ ಆಚರಿಸಲಾಯಿತು.
ಇಂದು ಕೆಲ ಪರೀಕ್ಷೆಗಳಿದ್ದ ಕಾರಣದಿಂದಾಗಿ ವಿದ್ಯಾಥರ್ಿಗಳಿಗೆ ತೊಂದರೆಯಾಯಿತು. ಕೆಲ ಶಾಲಾ-ಕಾಲೇಜುಗಳಿಗೆ ಬಂದ್ ನಿಮಿತ್ತ ರಜೆ ಘೋಷಿಸಲಾಯಿತು.
ಡಿವೈಎಸ್ಪಿ ಆರ್.ಕೆ.ಪಾಟೀಲ, ಸಿಪಿಐಗಳಾದ ಕರಿಯಪ್ಪ ಬನ್ನೆ, ಸಂಜೀವ ಕಾಂಬಳೆ,ಎಸೈ ಶ್ರೀಶೈಲ್ ಬ್ಯಾಕೋಡ್ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ ವ್ಯವಸ್ಥೆ ಏರ್ಪಡಿಸಲಾಗಿದೆ.