ಶ್ರೇಷ್ಠ ಉದ್ಯಮಿಯಾಗಲು ಜವಳಿ ಇಲಾಖೆ ಸಹಕಾರ ಪಡೆದುಕೊಳ್ಳಿ: ಶಾಸಕ ಲಮಾಣಿ

ಲೋಕದರ್ಶನ ವರದಿ

ಶಿರಹಟ್ಟಿ 27: ದೇಶದಲ್ಲಿ ಒಬ್ಬ ಶ್ರೇಷ್ಠ ಉದ್ಯಮಿಯಾಗಿ ಬೆಳೆಯಬೇಕಾದರೆ, ಶ್ರದ್ಧೆ, ತಾಳ್ಮೆ ಹಾಗೂ ಕಠಿಣ ಪರಿಶ್ರಮದ ಜೊತೆಗೆ ನೈತಿಕ ಜವಾಬ್ದಾರಿಗಳು ಅತ್ಯಂತ ಮಹತ್ವದಾಗಿವೆ. ಜೊತೆಗೆ ಜವಳಿ ಇಲಾಖೆಯಲ್ಲಿನ ಯೋಜನೆಗಳನ್ನು ತಿಳಿದುಕೊಂಡು ಅವರ ಸಹಕಾರಿದಿಂದ ಉದ್ಯಮಿಗಳಾಗಿ  ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ ಭವನದಲ್ಲಿ ಮಂಗಳವಾರ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಆಸರೆ ಅಂಗವಿಕರ ಕ್ಷೇಮಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ನೂತನ ಜವಳಿ ನೀತಿ ಯೋಜನೆಯಡಿ ಎರಡು ದಿನದ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಉದ್ಯಮದಲ್ಲಿ ಲಾಭ ಹಾಗೂ ನಷ್ಟಗಳು ಸಾಮಾನ್ಯ. ಲಾಭವಾದಾಗಾ ಹಿಗ್ಗದೆ, ನಷ್ಟವಾದಾಗ ಕುಗ್ಗದೆ ಸಮತೋಲನದಿಂದ ಹೋದರೆ ಒಬ್ಬ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉದ್ಯಮಗಳನ್ನು ಬೆಳೆಸಲು ಸಾಕಷ್ಟು ಶ್ರಮಿಸುತ್ತಿವೆ. ಸ್ವ ಉದ್ಯಮಿದಾರರಿಗೆ ಸಬ್ಸಿಡಿ ದರದಲ್ಲಿ ಸಾಲಗಳನ್ನು ನೀಡುತ್ತಿವೆ. ಆದ್ದರಿಂದ ಯುವ ಜನತೆ ಸ್ವ ಉದ್ಯಮಗಳನ್ನು ಪ್ರಾರಂಭಿಸಲು ತರಬೇತಿಗಳನ್ನು ಪಡೆದು ಸಿದ್ಧರಾಗಬೇಕು ಎಂದು ಹೇಳಿದರು.

ಆಸರೆ ಸಂಸ್ಥೆಯ ಸಂಸ್ಥಾಪಕ ಮಂಜುನಾಥ ಬಮ್ಮನಕಟ್ಟಿ ಮಾತನಾಡಿ. ಪ್ರಾಚೀನ ಕಾಲದಿಂದ ಬಂದ ನೇಕಾರಿಕೆ ವೃತ್ತಿ ಇಂದು ಮರೆಯಾಗುತ್ತಿವೆ. ಇಂದಿನ ಯುವಕರು ದಿಢೀರ ಶ್ರೀಮಂತರಾಗಲು ಬಯಸಿ ನಮ್ಮ ಮೂಲ ವೃತ್ತಿ ಹಾಗೂ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಮತ್ತು ಸಣ್ಣ ಪುಟ್ಟ ಕೈಗಾರಿಕೆ ಉದ್ಯಮಿದಾರರು ಇಂದಿನ ತಂತ್ರಜ್ಞಾನದ ಸುಳಿಗೆ ಸಿಕ್ಕು ನಲಗುತ್ತಿದ್ದಾರೆ. ಆದ್ದರಿಂದ ಉನ್ನತ ಮಟ್ಟದ ಅಧಿಕಾರಿಗಳು ಉದ್ಯಮಿದಾರರು ತಯಾರಿಸುವ ವಸ್ತುಗಳಿಗೆ ಸೂಕ್ತ ಮಾರುಕಟೆ ವ್ಯವಸ್ಥೆ ಕಲ್ಪಿಸಬೇಕು. ಅಂದಾಗ ಮಾತ್ರ ಸಣ್ಣ ಪುಟ್ಟ ಉದ್ಯಮದಾರರು ಬದುಕಿ ನೆಮ್ಮದಿ ಜೀವನ ಮಾಡಲು ಸಾಧ್ಯ ಎಂದು ಹೇಳಿದರು.

ನಂತರ ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ,ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ನಾಡಗೌಡ್ರ ಹಾಗೂ ಜಂಟಿ ನಿದರ್ೇಶಕ ವಿಜಯಕುಮಾರ ನಿರಾಳೆ ಮಾತನಾಡಿ,  ದೇಶದಲ್ಲಿ ಜವಳಿ ಮತ್ತು ಕೃಷಿ ಉದ್ಯಮಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ. ಜವಳಿ ಉದ್ಯಮವನ್ನು ಪ್ರಾರಂಭಿಸಲು ಎಸ್ಟಿಪಿ/ಟಿಎಸ್ಪಿ ಯೋಜನೆಯಡಿ ಸಾಲ ಪಡೆದರೆ ಶೇ. 70ರಿಂದ 80ರಷ್ಟು ಸಬ್ಸಿಡಿ ಸಿಗುತ್ತದೆ. ಮತ್ತು ಉಚಿತ ತರಬೇತಿಗಳನ್ನು ನೀಡಲಾಗುತ್ತದೆ. ಆದ್ದರಿಂದ ಯುವಕ/ಯವತಿಯರು ಸ್ವ ಉದ್ಯಮಗಳನ್ನು ಪ್ರಾರಂಭಿಸಲು ಮುಂದಾಗಬೇಕು. ಸಕರ್ಾರದಿಂದ ಸಿಗುವ ಸಬ್ಸಿಡಿ ಹಣಕ್ಕಾಗಿ ಉದ್ಯಮವನ್ನು ಪ್ರಾರಂಭಿಸದೆ, ಸ್ವಾವಲಂಬಿ ಜೀವನ ನಡೆಸಲು ಸಹಾಯಧನವನ್ನು ಪಡೆದುಕೊಳ್ಳಬೇಕು. ಅಂದಾಗ ಮಾತ್ರ ನಿಮ್ಮ ಜ್ಞಾನದ ಜೊತೆಗೆ ಇನ್ನೊಬ್ಬರಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ಇಲಾಖೆಯ ಯೋಜನೆಗಳನ್ನು ಯುವಕರು ತಿಳಿದುಕೊಳ್ಳಲು ಮುಂದಾಗಬೇಕು. ನೀವು ಉದ್ದಿಮೆಗಳಾಗಬೇಕಾದರೆ ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಹಕಾರವನ್ನು ನೀಡುತ್ತೇವೆ. ಇತ್ತೀಚಿನ ದಿನಮಾನದಲ್ಲಿ ಸಾಕಷ್ಟು ಆಧುನಿಕ ಯಂತ್ರೋಪಕರಣಗಳ ಸೌಕರ್ಯವನ್ನು ಒದಗಿಸುವ ಮೂಲಕ ನಿಮಗೆ ಪ್ರೇರಣೆ  ನೀಡಲಾಗುವುದು. ಬ್ಯಾಂಕನ ಸಾಲ ಸೌಲಭ್ಯವನ್ನು ಕೂಡಾ ಒದಗಿಸಲಾಗುವುದು.ಇಲಾಖೆ ಯೋಜನೆಗಳ ಸದುಪಯೋಗಪಡಿಸಿಕೊಂಡು ಬೆಳೆಯಬೇಕು ಎಂದು ಹೇಳಿದರು.

ತಾಪಂ ಅಧ್ಯಕ್ಷ ಸುಶೀಲವ್ವ ಲಮಾಣಿ, ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ, ಆಸರೆ ಸಂಸ್ಥೆಯ ಅಧ್ಯಕ್ಷ ಫಕ್ಕೀರೇಶ ಮ್ಯಾಟನ್ಣವರ, ವಿಜಯಕುಮಾರ ನಿರಾಳೆ, ಸಿದ್ಧರಾಮೇಶ್ವರ ಬಾರಕೇರ, ಆಸರೆ ಸಂಸ್ಥೆಯ ಕಾರ್ಯದಶರ್ಿ ಶಶಿಧರ ಶಿರಸಂಗಿ, ಶಿವರಾಜ ಕುಲಕಣರ್ಿ, ಅನುಪಮ ಹಿರೇಮಠ, ಮಂಜುನಾಥ ಚನ್ನಪ್ಪಗೌಡ್ರ, ಥಾವೆರೆಪ್ಪ ಲಮಾಣಿ, ಉಮೇಶ ಲಮಾಣಿ ಸೇರಿದಂತೆ ನೂರಾರು ಶಿಬಿರಾಥರ್ಿಗಳು ಉಪಸ್ಥಿತರಿದ್ದರು.