ವಿಶ್ವಕರ್ಮ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ.ವೌನೇಶ್ ಆಯ್ಕೆ
ಕಂಪ್ಲಿ:25. ಪಟ್ಟಣದ ಕಾಳಿಕಾ ಕಮಟೇಶ್ವರ ದೇವಸ್ಥಾನ ಬಳಿಯವಿಶ್ವಕರ್ಮ ಭವನದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಿ.ವೌನೇಶ್ ಆಯ್ಕೆಗೊಂಡಿದ್ದಾರೆ.ಐದು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನಲೆ ಡಿ.ಮೌನೇಶ ರವರು ವಿಶ್ವಕರ್ಮ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ ಎಂದು ಉಪ ಚುನಾವಣಾಧಿಕಾರಿ ಷಣ್ಮುಖಪ್ಪ ಚಿತ್ರಗಾರ ಘೋಷಿಸಿದರು.ನಂತರ ರಾಜ್ಯ ಸಮಿತಿ ಸದಸ್ಯ ಡಿ.ಮೌನೇಶ ಮಾತನಾಡಿ, ಸಮುದಾಯದ ಪಂಚಕುಲಕಸುಬುಗಳಿಗೆ ಪ್ರತ್ಯೇಕ ವಿಶ್ವಕರ್ಮ ವಿಶ್ವವಿದ್ಯಾಲಯ ಬೇಡಿಕೆ ಈಡೇರಿಸುವಂತೆ ಮತ್ತು ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆೆ ಮಾಡುವಂತೆ ಸರ್ಕಾರವನ್ನು ಒತ್ತಾಯ ಉತ್ತರ ಕರ್ನಾಟಕದಲ್ಲಿ ಸಮಾಜ ಹಿಂದುಳಿದಿದ್ದು, ಅವರನ್ನು ಗುರುತಿಸಿ ಸರ್ಕಾರದ ವಿವಿಧ ಸೌಲಭ್ಯ ಕಲ್ಪಿಸಲು ಪ್ರಮಾಣಿಕ ಯತ್ನ ಮಾಡಲಾಗುವುದು. ವಿಜಯನಗರ ಜಿಲ್ಲೆಗೆ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನ ಕಲ್ಪಿಸುವಂತೆ ರಾಜ್ಯ ಸಮಿತಿಯವರಲ್ಲಿ ಮನವಿ ಮಾಡುಲಾಗುವುದು ಪ್ರತಿಯೊಬ್ಬರ ಸಹಕಾರದಿಂದ ರಾಜ್ಯ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆಗೊಂಡಿದ್ದು, ಈ ಸ್ಥಾನದೊಂದಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು, ಎಲ್ಲರ ಪ್ರೀತಿ, ವಿಶ್ವಾಸದಂತೆ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.ತಕ್ಕಂತೆ ಸೇವೆ ಮಾಡಲಾಗುವುದು.ತದನಂತರ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ವೇಳೆ ಮಾಲಾರೆ್ಣಯೊಂದಿಗೆ ಗೌರವಿಸಲಾಯಿತು.ಈ ಸಂದರ್ಭದಲ್ಲಿ.ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಡಿ. ರುದ್ರ್ಪ ಆಚಾರ್, ಮುಖಂಡರಾದ ಚಂದ್ರಶೇಖರ, ಗುರುಮೂರ್ತಿ ಆಚಾರ್, ರಾಮಚಂದ್ರ ಆಚಾರ್, ಕಾಳಾಚಾರ್, ಷಣ್ಮುಖ ಆಚಾರ್, ನಾಗರಾಜ ಆಚಾರ್, ಎಸ್.ಡಿ. ಬಸವರಾಜ, ಯು.ಎಂ. ವಿದ್ಯಾಶಂಕರ್ ಸೇರಿ ಅನೇಕರಿದ್ದರು. ಮೇ001ಕರ್ನಾಟಕ ರಾಜ್ಯ ವಿಶ್ವ ಕರ್ಮ ಸಮಾಜದ ಕಾರ್ಯಕಾರಿ ಸಮಿತಿಗೆ ಅಖಂಡ ಬಳ್ಳಾರಿ ಜಿಲ್ಲೆಯಿಂದ ನೂತನ ಸದಸ್ಯರಾಗಿ ಡಿ. ಮೌನೇಶ ಅವಿರೋಧವಾಗಿ ಆಯ್ಕೆ