ಡಿ.2ರಂದು ಜಗದ್ಗುರು ರೇಣುಕಾಚಾರ್ಯರ ಕಾತರ್ಿಕೋತ್ಸವ

ಲೋಕದರ್ಶನ ವರದಿ:-

ಮುಧೋಳ 30: ವೀರಶೈವ ಧರ್ಮ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯರ ಡಿ.2ರಂದು ಸೋಮವಾರದಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಂಜೆ 6.00ಗಂಟೆಗೆ ಜರುಗಲಿದೆ ಎಂದು ಕಾತರ್ಿಕೋತ್ಸವ ಸಂಘಟಕರು ತಿಳಿಸಿದ್ದಾರೆ.

    ಈ ಕಾತರ್ಿಕೋತ್ಸವದ ಸಮಾರಂಭದ ಸಾನಿಧ್ಯವನ್ನು ಕಸಬಾ-ಜಂಬಗಿ ಹಿರೇಮಠದ ರುದ್ರಮುನಿ ಶಿವಾಚಾರ್ಯರು ಮಹಾಸ್ವಾಮಿಗಳು ವಹಿಸಲಿದ್ದು ಸ್ಥಳೀಯ ಗವಿಮಠ ವಿರಕ್ತಮಠದ ಶ್ರೀ ನಿಜಗುಣ ದೇವರು ಸಾನಿಧ್ಯವನ್ನು ವಹಿಸಲಿದ್ದಾರೆ.

ವೀರಶೈವ ಸಮಾಜದ ಅಧ್ಯಕ್ಷ ರಾಚಪ್ಪ ಕರೆಹೊನ್ನ ಜಂಗಮ ಸಮಾಜದ ಅಧ್ಯಕ್ಷ ಅಲ್ಲಯ್ಯ ದೇವರಮನಿ ಹಾಗೂ ಮಹಿಳಾ ಸಮಾಜದ ಅಧ್ಯಕ್ಷೆ ವೀಣಾ ಮಠದ ಉಪ ಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದ್ದು. ಮುಂಜಾನೆ 8.00 ಗಂಟೆಗೆ ಜಗದ್ಗುರು ರೇಣುಕಾಚಾರ್ಯರರ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಮಂಗಳಾರತಿ ಜರುಗುವುದು.ತಾಲೂಕಿನ ಸಮಸ್ತ ಸಮಾಜ ಬಾಂಧವರು ಹಾಗೂ ಸದ್ಭಕ್ತರು ಈ ಕಾತರ್ಿಕೋತ್ಸವದಲ್ಲಿಪಾಲ್ಗೊಂಡು ಜಗದ್ಗುರು ರೇಣುಕಾಚಾರ್ಯರ ಕೃಪೆಗೆ ಪಾತ್ರರಾಗಲು ವಿನಂತಿಸಿದ್ದಾರೆ.