ಲೋಕದರ್ಶನ ವರದಿ
ಕಾಗವಾಡ, ಜುಲೈ 09: ಜೀವನದಲ್ಲಿ ಬರುವ ಕಷ್ಟಗಳೇ ಯಶಸ್ಸಿನ ಭದ್ರ ಬುನಾದಿಯಾಗಿರುತ್ತವೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರದೊಂದಿಗೆ ಸಮಸ್ಯೆಯೂ ಅರ್ಥವಾಗುವದರ ಜೊತೆಗೆ ಮಾರ್ಗವೂ ಸೂಚಿಸುತ್ತದೆ. ಅದಕ್ಕಾಗಿ ಸಮಸ್ಯೆಗಳು ಬಂದಾಗ ಎದುರಿಸಿ ಗೆಲ್ಲುವ ಛಲ ಹೊಂದಿರಬೇಕು ವಿನಹಃ ಹೆದರಿ ಬಿಡುವದಲ್ಲ. ಸುಮಾರು ನಾಲ್ಕು ದಶಕಗಳ ಹಿಂದೆ ಶಿಕ್ಷಣದ ವ್ಯವಸ್ಥೆ, ಅನುಕೂಲತೆ, ಆಥರ್ಿಕ ಪರಿಸ್ಥಿತಿ, ಕೌಟುಂಬಿಕ ಸಕ್ಷಮತೆ ಹಾಗು ವ್ಯಕ್ತಿತ್ವ ವಿಕಸನಕ್ಕೆ ಇರುವ ಅವಕಾಶಗಳು ಗಗನೆತ್ತರಕ್ಕೆ ಬಹಳ ದೂರವಾಗಿದ್ದವು. ಈ ಎಲ್ಲ ವಿಷಯಗಳ ಆಳವನ್ನು ತಿಳಿದಾಗ ಭಾರತ ಸಾಕಷ್ಟು ಪ್ರಗತಿ ಹೊಂದಬೇಕಾದಲ್ಲಿ ಎದುರಿಸಬೇಕಾಗದ ಹೆಜ್ಜೆಗಳನ್ನು ಸುಸುತ್ರವಾಗಿ ಎದುರಿಸಿ ವಿಜಯಶಾಲಿಯಾದಲ್ಲಿ ಜೀವನ ಸಂಪದ್ಭರಿತವಾಗಿರುತ್ತದೆಂದು ಪ್ರೊ. ಎಸ್.ಎಸ್.ಬಾಗನೆ ಅವರ ನಿವೃತ್ತಿಯ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಿಲೀಪ ಪಾಟೀಲ ಮಾತನಾಡುವಾಗ, ಬಾಗನೆಯವರು ಬಡತನ ಕುಟುಂಬದಿಂದ ಬಂದರು. ಪರಿಶ್ರಮಪಟ್ಟು ತಮ್ಮ ಸಿರಿವಂತ ಜೀವನ ರೂಪಿಸಿಕೊಂಡಿರುವದು ಸಮಾಜಕ್ಕೆ ಮಾದರಿ. ಇದೇ ರೀತಿ ಯುವಕರಲ್ಲಿ ತಮ್ಮ ವಯಕ್ತಿಕ ಕುಂದು ಕೊರತೆಗಳನ್ನು ಮೀರಿ ನಿಲ್ಲುವ ಛಲವನ್ನು ಹೊಂದುವ ಆಧುನಿಕ ಸ್ಪಧರ್ಾತ್ಮಕ ಯುಗದಲ್ಲಿ ಯಶಸ್ಸನ್ನು ಗಳಿಸುವ ಸಫಲತೆ ಹೊಂದಬಹುದು ಎಂದು ಹೇಳಿದರು.
ಪಿ.ಎಲ್.ಡಿ. ಬ್ಯಾಂಕಿನ ನಿದರ್ೇಶಕರಾದ ರಾಜಗೌಡಾ ಪಾಟೀಲ ಮಾತನಾಡುತ್ತಾ, ಬಾಗನೆ ಸರ್ ಅವರು ಸುವ್ಯವಸ್ಥಿತ ಯೋಜನೆಗಳನ್ನು ಹೊಂದಿದ ಉತ್ತಮ ಸಮಾಜ ಜೀವಿ ಎಂದು ಹೇಳಿದರು.
ಊರಿನ ಗಣ್ಯರಾದ ಕಲಗೌಡಾ ಪಾಟೀಲ, ಪಿ.ಕೆ.ಪಿ.ಎಸ್. ಬ್ಯಾಂಕನ ನಿದರ್ೇಶಕರಾದ ಶಂಕರಗೌಡಾ ಪಾಟೀಲ, ಅಪ್ಪಾಸಾಬ ತೊಬರೆ ಬಾಗನೆ, ಸಿದ್ಧೇಶ್ವರ ಮಹಾವಿದ್ಯಾಲಯ, ಶಿರಗುಪ್ಪಿಯ ನಿವೃತ್ತ ಮುಖ್ಯಾಧ್ಯಾಪಕರು ಹಾಗೂ ಪಿ.ಕೆ.ಪಿ.ಎಸ್. ಬ್ಯಾಂಕನ ನಿದರ್ೇಶಕರಾದ ಎಂ.ಬಿ.ಕೊರಬು ಅವರು ಮಾತನಾಡಿದರು.
ಈ ವೇಳೆ ಲಕ್ಷ್ಮಣ ಗುಂಜಾಳೆ, ದತ್ತಾ ಸುಂಠೆ, ರಾವಸಾಹೇಬ ಖಾತೆದಾರ ಪಾಟೀಲ, ಚಂದ್ರಕಾಂತ ಕೋಳಿ, ಶಿವಗೌಡಾ ಪಾಟೀಲ, ಬಾಳಪ್ಪಾ ಕಮತೆ, ರಾಜೇಶ ಕೊರಬು, ಅಣ್ಣಾಗೌಡಾ ಪಾಟೀಲ, ಪ್ರೊ. ಜೆ.ಕೆ.ಪಾಟೀಲ ಉಪಸ್ಥಿತರಿದ್ದರು.