ನಿರಾಶಾದಾಯಕ ಬಜೆಟ್: ಡಾ.ಪ್ರಭಾಕರ ಕೋರೆ
ಬೆಳಗಾವಿ 07: ಕಳೆದ ಎರಡು ವರ್ಷಗಳಿಂದ ರಾಜ್ಯದ ಜನತೆಯನ್ನು ದಾರಿತಪ್ಪಿಸುತ್ತಿರುವ ಸರ್ಕಾರವು ಆರ್ಥಿಕ ಹೊರೆಯನ್ನು ಹೆಚ್ಚಿಸಿದೆ ವಿನಃ ಯಾವುದೇ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಿಲ್ಲ. ಇದೊಂದು ಕಾಟಾಚಾರದ ಬಜೆಟ್. ಜನತೆಯ ಕಣ್ಣಿಗೆ ಮಣ್ಣೆರೆಚುವ ಬಜೆಟ್. ನೀರಾವರಿ, ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಗಳನ್ನು ಗೌಣಗೊಳಿಸಿದೆ. ಕೃಷ್ಣಾ ಮೆಲ್ದಂಡೆ ಯೋಜನೆಗಳನ್ನು ನಿರ್ಲಕ್ಷಿಸಲಾಗಿದೆ.
ಜನತೆಯ ಹಣವನ್ನು ದೋಚಿ ತನ್ನ ಯೋಜನೆಗಳನ್ನು ಪೂರೈಸುವ ಭರಾಟೆಯಲ್ಲಿರುವ ಕಾಂಗ್ರೇಸ್ ಸರಕಾರ ಕೇವಲ ತೋರಿಕೆ ಬಜೆಟ್ ನೀಡಿದೆ. ಇದರಲ್ಲಿ ಯಾವುದು ವಾಸ್ತವವಿಲ್ಲ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.