ಸಾರ್ವಜನಿಕ ರಸ್ತೆಯನ್ನೆ ಕಬಳಿಸಿ ನಿಮರ್ಿಸಿರುವ ಜಿಲ್ಲಾ ನೌಕರ ಭವನ

ಹಾವೇರಿ೧೪: ಜಿಲ್ಲಾ ಪ್ರದೇಶವಾಗಿರುವ ಹಾವೇರಿ ನಗರದಲ್ಲಿ ಸಾರ್ವಜನಿಕ ರಸ್ತೆಯನ್ನೇ ಅತಿಕ್ರಮಣ ಮಾಡಿ  ನೌಕರರ ಭವನ ಕಟ್ಟಿಕೊಂಡು ರಾಜಾರೋಷವಾಗಿ ಮೆರೆಯುತ್ತಿರುವ  ನೌಕರರ ಸಂಘಕ್ಕೆ ಕಾನೂನೇ ಇಲ್ಲದಂತಾಗಿದೆ. 

  ಸಾರ್ವಜನಿಕರಿಗೆ ಬುದ್ಧಿ ಹೇಳುವವರೇ ಈ ರೀತಿ ಕಟ್ಟಡಗಳನ್ನು ಕಟ್ಟಿಸಿಕೊಂಡು ಲಾಭವನ್ನು ಪಡೆಯುತ್ತಿದ್ದಾರೆ. ಸಾರ್ವಜನಿಕ ರಸ್ತೆ ಜಾಗದಲ್ಲಿ ವಾಹನಗಳಿಗೆ ಓಡಾಡಲು ತೊಂದರೆ ಇದ್ದರೂ ಇದರ ಬಗ್ಗೆ ಯಾವುದೇ ಕನಿಷ್ಠ ಯೋಚನೆ ಕೂಡಾ ಇದುವರೆಗೂ ಮಾಡಿಲ್ಲ. ಇತ್ತಿತ್ತಲಾಗಿ ಒಳಚರಂಡಿ ಮೇಲೆ ಮೇಲ್ಛಾವಣೆ ಹಾಕಿ ಮಳಿಗೆಗಳನ್ನು ಕಟ್ಟಿಕೊಂಡು ಈ ಸಾರ್ವಜನಿಕ ಆಸ್ತಿ ಕಬಳಿಸಿದ್ದಾರೆ. ಇವರಿಗೆ ಸರಿಯಾದ ರೀತಿಯಲ್ಲಿ ಕಟ್ಟಡ ನಿಮರ್ಿಸಿಕೊಳ್ಳುವಂತೆ ನಗರಸಭೆ ಕೂಡಾ ಯಾವುದೇ ಸೂಚನೆ ನೀಡಿಲ್ಲ ಎನ್ನುವ ಚಚರ್ೆ ಸಾರ್ವಜನಿಕರಿಂದಲೇ ಕೇಳಿ ಬಂದಿವೆ. ಸಾರ್ವಜನಿಕ ಜನಬೀಡು ಪ್ರದೇಶವಾಗಿರುವ ಜೆಪಿ ಸರ್ಕಲ್ ವ್ಯಾಪ್ತಿಯಲ್ಲಿ ಈ ಕಟ್ಟಡ ಬಹಳ ಹಳೆಯ ಕಟ್ಟಡವಾಗಿದ್ದರೂ ಕಾಲ,ಕಾಲಕ್ಕೆ ನವೀಕರಣ ಮಾಡಿಕೊಂಡು ಬರಲಾಗಿದೆ ಅಲ್ಲದೇ ಒಳ್ಳೆಯ ಉದ್ದೇಶಕ್ಕೆ ಈ ಕಟ್ಟಡ ಸದ್ಭಳಕೆಯಾಗುತ್ತಿದ್ದರೂ ಸಹ ಅದು ನಿಯಮದಂತೆ ಸಾರ್ವಜನಿಕ ರಸ್ತೆ ಮೇಲೆ ನಿಮರ್ಾಣವಾಗಿರುವುದಂತೂ ಸತ್ಯ ಹಾಗಾದರೆ ಇದಕ್ಕೆಲ್ಲ ಕಾರಣರಾದವರ ಮೇಲೆ   ಕ್ರಮವಾಗಬೇಕು. ನಿಯಮ ಬಾಹಿರ ಕಟ್ಟಡಗಳು ಈ ನಗರದಲ್ಲಿ ತೆರವು ಮಾಡುವ ಕೆಲಸವನ್ನು ನಗರಸಭೆ ಮಾಡಬೇಕಾಗಿದೆ ಎಂದು ಸ್ಥಳೀಯ ಜನರ ಒತ್ತಾಯವಾಗಿದೆ.