ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ್ ಅವರು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಗೆ ಫೆ. 18ರಂದು ಭೇಟಿ

District In-charge Minister Santosh S Lad visited the Gadag District Congress Committee office on F

ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ್ ಅವರು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಗೆ ಫೆ. 18ರಂದು ಭೇಟಿ  

ಗದಗ  17: ನಗರದ ದಿ. ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಇರುವ ಗದಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕಾರ್ಮಿಕ ಇಲಾಖೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ್ ಅವರು ಫೆಬ್ರವರಿ 18ರಂದು ಮಧ್ಯಾಹ್ನ 2ಕ್ಕೆ ಭೇಟಿ ನೀಡುವರು. 

ಕಾಂಗ್ರೆಸ್ ಪಕ್ಷದ ಮಾಜಿ ಹಾಗೂ ಹಾಲಿ ಶಾಸಕರು, ಪಕ್ಷದ ಜಿಲ್ಲಾ ಪದಾಧಿಕಾರಿಗಳು, ಬ್ಲಾಕ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ, ಗ್ರಾಮ ಪಂಚಾಯತ, ಎಪಿಎಂಸಿ ಪಕ್ಷದ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ನಗರಸಭೆ ಪಟ್ಟಣ ಪಂಚಾಯ್ತಿ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎಸ್‌ಸಿ/ಎಸ್‌ಟಿ, ಅಲ್ಪಸಂಖ್ಯಾತರ, ವಿದ್ಯಾರ್ಥಿ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ, ಹಿಂದುಳಿದ ವರ್ಗ, ಸಾಮಾಜಿಕ ಜಾಲತಾಣ, ರಾಜೀವಗಾಂಧಿ ಪಂಚಾಯತ ಸಂಘಟನೆ, ಮಾಜಿ ಸೈನಿಕರ ವಿಭಾಗ, ಮೀನುಗಾರ ವಿಭಾಗ, ಕಾರ್ಮಿಕರ ವಿಭಾಗ, ಐಎನ್‌ಟಿಯುಸಿ ಕಾನೂನು ಮತ್ತು ಮಾನವ ಹಕ್ಕು ವಿಭಾಗ, ಕಿಸಾನ್ ಮತ್ತು ಖೆತ್ ಮಜದೂರ ವಿಭಾಗ, ಮಾಜಿ ಸೈನಿಕರ ವಿಭಾಗ, ವೈದ್ಯರ ವಿಭಾಗ, ವೃತ್ತಿಪರ ವಿಭಾಗ, ಪದವಿಧರ ಹಾಗೂ ಶಿಕ್ಷಕರ ವಿಭಾಗ, ನೀತಿ ಮತ್ತು ಸಂಶೋಧನೆ ತರಬೇತಿ ವಿಭಾಗ, ವಿಕಲಚೇತನರ ವಿಭಾಗ, ಲಿಗಲ್ ರೀಪಾರ್ಮ್ಸ್‌ ವಿಭಾಗ, ಐ,ಟಿ, ಮತ್ತು ಡಾಟಾ ವಿಭಾಗ, ಮಾಧ್ಯಮ ಮತ್ತು ಸಂಪರ್ಕ ಇಲಾಖೆ ವಿಭಾಗ, ಅಧ್ಯಕ್ಷರು ಹಾಗೂ ಸದಸ್ಯರು, ಪಕ್ಷದ ಅಭಿಮಾನಿಗಳು ಪಾಲ್ಗೊಳ್ಳಬೇಕು. 

 ಎಂದು ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ.ಬಿ. ಅಸೂಟಿ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಹಾಗೂ ಗದಗ ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಹಾಗೂ ಗದಗ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಅಶೋಕ ಮಂದಾಲಿ ಅವರು ವಿನಂತಿಸಿದ್ದಾರೆ.