ಲೋಕದರ್ಶನ ವರದಿ
ಮುಧೋಳ10 : ನಾಡ ರಕ್ಷಣೆಗಾಗಿ ಬ್ರಿಟಿಷರ್ ವಿರುದ್ಧ ಹೋರಾಡಿದ ಮೈಸೂರು ಹುಲಿ ಎಂದೇ ಖ್ಯಾತರಾಗಿರುವ ಹಜರತ್ ಟಿಪ್ಪು ಸುಲ್ತಾನರವರ ಜಯಂತಿಯನ್ನು ಸಕರ್ಾರದ ವತಿಯಿಂದ ಆಚರಿಸುತ್ತಿರುವುದು ಸ್ವಾಗತಾರ್ಹವಾದದ್ದು. ಬಿಜೆಪಿ ಪಕ್ಷದ ಮುಖಂಡರು ಟಿಪ್ಪು ಜಯಂತಿ ಆಚರಣೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ತಾವು ತೀವ್ರವಾಗಿ ಖಂಡಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ ಹೇಳಿದರು.
ತಾಲೂಕಾ ಆಡಳಿತ,ತಾಲೂಕಾ ಪಂಚಾಯತ,ನಗರಸಭೆ,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಶನಿವಾರ ಸ್ಥಳೀಯ ರನ್ನ ಸಾಂಸ್ಕ್ರತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಹಜರತ್ ಟಿಪ್ಪು ಸುಲ್ತಾನರವರ ಜನ್ಮ ದಿನಾಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ದೇಶಭಕ್ತ, ನಾಡಿನ ಹೆಮ್ಮೆಯ ಪುತ್ರ,ಬ್ರಿಟಿಷರ್ ವಿರುದ್ದ ಹೋರಾಡಿ ತನ್ನ ಪ್ರಾಣವನ್ನು ಬಲಿದಾನಮಾಡಿದ ವೀರ ಹಜರತ್ ಟಿಪ್ಪು ಸುಲ್ತಾನರವರ ಜಯಂತಿಯನ್ನು ಸಕರ್ಾರದ ವತಿಯಿಂದ ಆಚರಿಸಲು ಮುಂದಾಗಿರುವದನ್ನು ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಮತ ರಾಜಕೀಯ ಮಾಡುತ್ತಿರುವ ಬಿಜೆಪಿ ಮುಖಂಡರ ಧೋರಣೆಯು ಇಡೀ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದಂತಾಗಿದೆ. ಇದು ನೋವು ತರುವಂತಹ ಸಂಗತಿಯಾಗಿದೆ. ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ಮುಖಂಡರು ಯುವಕರನ್ನು ದಿಕ್ಕು ತಪ್ಪಿಸುವಂತ ಕೆಲಸಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಡಿಗೆ ಕೀತರ್ಿ ತಂದಿರುವ ಹಜರತ್ ಟಿಪ್ಪು ಸುಲ್ತಾನರವರ ಜೀವನ ಚರಿತ್ರೆಯು ಹಾಗೂ ಅವರ ಸಾಧನೆಗಳು ಯುವ ಜನಾಂಗಕ್ಕೆ ಮಾದರಿಯಾಗಿದೆ. ಟಿಪ್ಪುವಿನ ಕೆಲಸ ಕಾರ್ಯಗಳು ಮತ್ತು ಸಾಧನೆಗಳು ಮೆಚ್ಚುವಂತಹದ್ದು. ಇಲ್ಲಿ ಒಬ್ಬ ವ್ಯಕ್ತಿಯನ್ನು ಜಾತಿಯಿಂದ ಅಳಿಯಬಾರದು. ಅವರು ನಾಡಿಗೆ ಮಾಡಿರುವ ಕೊಡುಗೆಗಳು ಏನು ಎಂಬುದನ್ನು ಅರಿತು ಮಾತನಾಡಬೇಕು. ಸಾರ್ವಜನಿಕರನ್ನು ದಿಕ್ಕು ತಪ್ಪಿಸುವಂತ ಕೆಲಸ ಮಾಡಬಾರದೆಂದು ಅವರು ಮನವಿ ಮಾಡಿದರು.
ಲಕ್ಷ್ಮೀಕಾಂತ ಡಿ.ಮಮದಾಪೂರ ಅವರು ಟಿಪ್ಪುವಿನ ಕುರಿತು ಕನ್ನಡದಲ್ಲಿ ಉಪನ್ಯಾಸ ನೀಡಿದರು. ಅಬ್ದುಸ್ಮದ ಝರತಾರಗರ ಅವರು ಉದರ್ು ಭಾಷೆಯಲ್ಲಿ ಉಪನ್ಯಾಸ ಮಾಡಿದರು. ಶಿರೋಳ ಸಿದ್ಧಗಿರಿ ಆಶ್ರಮದ ಮಹಾಂತಯ್ಯ ಸ್ವಾಮಿಜಿ ಸಾನಿಧ್ಯವಹಿಸಿ ಮಾತನಾಡಿದರು. ಜಿಪಂ ಸದಸ್ಯೆ ಕವಿತಾ ತಿಮ್ಮಾಪೂರ,ತಾಪಂ ಸದಸ್ಯ ಸಂಗಪ್ಪ ಇಮ್ಮನವರ,ನೌಕರರ ಸಂಘದ ಅಧ್ಯಕ್ಷ ಆರ್.ಎಚ್.ನಿಡೋಣಿ,ವಕೀಲ ಐ.ಎಚ್.ಅಂಬಿ,ಮಿಜರ್ಾ ನಾಯಕವಾಡಿ, ಬಿ.ಡಿ.ಮುಲ್ಲಾ,ತಹಸೀಲ್ದಾರ ಡಿ.ಜೆ.ಮಹಾತ್, ತಾಪಂ ಇಓ ಬಿ.ವ್ಹಿ.ಅಡವಿಮಠ, ಸಿಪಿಐ ಕರಿಯಪ್ಪ ಬನ್ನೆ, ಪೌರಾಯುಕ್ತ ಆರ್.ಪಿ.ಜಾಧವ,ಬಿಇಓ ಬಿ.ವ್ಹಿ.ದೇವನಗಾಂವ ಸೇರಿದಂತೆ ಹಲವರು ವೇದಿಕೆ ಮೇಲೆ ಉಪಸ್ಥಿತರಿದ್ದರು.