ಮಾಂಜರಿ 16: ಏಪ್ರಿಲ್ ಮತ್ತು ಮೇ ಮೊದಲ ವಾರದಲ್ಲಿ ಉಲ್ಬಣಿಸಿದ ಕುಡಿಯುವ ನೀರಿನ ಸಮಸ್ಯೆ ಇದೀಗ ಅಲ್ಪಸ್ವಲ್ಪ ದೂರಾಗಿದೆ. ನೆರೆಯ ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಿಂದ ದೂಧಗಂಗಾ ನದಿಗೆ ಹರಿದು ಬಿಟ್ಟಿರುವ ನೀರಿನಿಂದ ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲೂಕಿನ ನದಿ ಪಾತ್ರದ ಜನರಿಗೆ ಅನುಕೂಲ ಕಲ್ಪಿಸಿದೆ.
ಹೌದು.. ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ನದಿ ಪಾತ್ರದ ಹಳ್ಳಿಗಳು ಬಹುತೇಕ ವೇಧಗಂಗಾ ಮತ್ತು ದೂಧಗಂಗಾ ನದಿ ನೀರನ್ನೆ ಅವಲಂಭಿಸಿರುವುದರಿಂದ ಈ ಭಾಗದ ಹಳ್ಳಿಗಳಿಗೆ ಕಳೆದ ನಾಲ್ಕು ದಿನಗಳ ಹಿಂದೆಯಷ್ಠೇ ಕಾಳಮ್ಮವಾಡಿ ಜಲಾಶಯದಿಂದ ದೂಧಗಂಗಾ ನದಿಗೆ 700 ಕ್ಯೂಸೆಕ್ ನೀರು ನದಿಗೆ ಹರಿಸಿರುವುದರಿಂದ ಸದ್ಯ ಯಾವುದೇ ನೀರಿನ ಕೊರತೆ ಇಲ್ಲ, ಆದರೆ ಈ ನೀರು ಖಾಲಿಯಾಗುವಷ್ಟರಲ್ಲಿ ದೊಡ್ಡ ಅಡ್ಡ ಮಳೆಯಾದರೇ ಮಾತ್ರ ಈ ಭಾಗದ ಜನರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ಇಲ್ಲವಾದರೇ ಮತ್ತೆ ಮಹಾರಾಷ್ಟ್ರ ಸಕರ್ಾರದತ್ತ ಮುಖ ಮಾಡಬೇಕಾಗುತ್ತದೆ.
ವೇಧಗಂಗಾ ಮತ್ತು ದೂಧಗಂಗಾ ನದಿ ಪಾತ್ರದ ವ್ಯಾಪ್ತಿಯಲ್ಲಿ ಬರುವ ನಿಪ್ಪಾಣಿ ತಾಲೂಕಿನ ಜತ್ರಾಟ,ಭಿವಸಿ, ಬಾರವಾಡ, ಅಕ್ಕೋಳ, ಕಾರದಗಾ, ಭೋಜ, ಕುನ್ನೂರ,ಕೊಗನ್ನೋಳ್ಳಿ, ಮಾಂಗೂರ, ಬೇಡಕಿಹಾಳ ಮತ್ತು ಚಿಕ್ಕೋಡಿ ತಾಲೂಕಿನ ಶಮನೇವಾಡಿ, ಮಲಿಕವಾಡ, ಸದಲಗಾ, ಯಕ್ಸಂಬಾ ಮುಂತಾದ ಹಳ್ಳಿಯ ಜನರು ಈ ದೂಧಗಂಗಾ ನದಿಯು ಜನ-ಜಾನುವಾರಗಳಿಗೆ ಕುಡಿಯುವ ನೀರಿನ ದಾಹ ದೂರು ಮಾಡಿದೆ.
ಅಂತರ್ಜಲಮಟ್ಟ ಹೆಚ್ಚಿಸಿದ ನದಿ ನೀರು: ಗಡಿ ಭಾಗದ ಜನ ಜೀವನಾಡಿಯಾದ ಕೃಷ್ಣಾ ಮತ್ತು ದೂಧಗಂಗಾ ನದಿ ಬತ್ತಿ ಹೋಗಿದ್ದವು. ಕೃಷ್ಣಾ ನದಿಗೆ ಇನ್ನೂ ನೀರು ಬಂದಿಲ್ಲ ಹೀಗಾಗಿ ಕೃಷ್ಣಾ ನದಿ ತೀರದ ಗ್ರಾಮಗಳ ಜನರು ನೀರಿಗಾಗಿ ಪರದಾಟ ಆರಂಭಿಸಿದ್ದಾರೆ. ಇನ್ನೂ ದೂಧಗಂಗಾ ನದಿಗೆ ನೀರು ಹರಿದು ಬಂದಿರುವ ಕಾರಣದಿಂದ ನದಿ ಪಾತ್ರದಲ್ಲಿ ಇರುವ ಗ್ರಾಮಗಳ ಕೊಳವೆಬಾವಿ, ಬಾವಿಗಳಿಗೆ ನೀರಿನ ಅನುಕೂಲ ಕಲ್ಪಿಸಿದೆ. ಕೊಳವೆಬಾವಿಗಳು ಬಂದ ಆಗಿದ್ದವು, ಇದೀಗ ನದಿಗೆ ನೀರು ಬಂದಿರುವ ಹಿನ್ನಲ್ಲೆಯಲ್ಲಿ ಮತ್ತೆ ಕೊಳವೆಬಾವಿ ಮೂಲಕ ಜನರು ನೀರನ್ನು ಪಡೆದುಕೊಳ್ಳುತ್ತಿದ್ದಾರೆ.
ಉಲ್ಬಣಿಸಿದ ನೀರಿನ ಸಮಸ್ಯೆ: ಕೃಷ್ಣಾ ನದಿ ಖಾಲಿಯಾಗಿ ಎರಡು ತಿಂಗಳು ಕಳೆದಿದೆ. ನದಿ ಪಾತ್ರದ ಜನರು ನೀರಿಗಾಗಿ ನದಿಯಲ್ಲಿ ಹೊಂಡ ತೋಡಿ ನೀರು ಪಡೆದುಕೊಳ್ಳುತ್ತಿದ್ದರು. ಇದೀಗ ಹೊಂಡ ತೋಡಿದರೂ ನೀರು ಬರುತ್ತಿಲ್ಲ ಹೀಗಾಗಿ ಕೃಷ್ಣಾ ನದಿ ಪಾತ್ರದಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಮಾಂಜರಿ, ಅಂಕಲಿ, ಯಡೂರ, ಇಂಗಳಿ, ಯಡೂರವಾಡಿ, ರಾಯಬಾಗ ತಾಲೂಕಿನ ಬಾವನಸವದತ್ತಿ, ಹೊಸ ದಿಗ್ಗೆವಾಡಿ, ಹಳೆ ದಿಗ್ಗೆವಾಡಿ ಸೇರಿದಂತೆ ಅಥಣಿ ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಉತ್ತರ ಕನರ್ಾಟಕದ ಜನಪ್ರತಿನಿಧಿಗಳು ನಿಯೋಗ ತೆಗೆದುಕೊಂಡು ಮಹಾ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ ಬಂದಿದ್ದಾರೆ. ಅದರಂತೆ ರಾಜ್ಯ ಸಕರ್ಾರದ ನೀರಾವರಿ ಸಚಿವ ಡಿ.ಕೆ.ಶಿವುಕುಮಾರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಕೃಷ್ಣಾ ನದಿಗೆ ನೀರು ಹರಿಸಲು ಮಹಾರಾಷ್ಟ್ರ ಸಕರ್ಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಇನ್ನುವರಿಗೂ ಮಹಾ ಸಕರ್ಾರ ನೀರು ಹರಿಸದೇ ಇರುವುದು ಗಡಿ ಭಾಗದ ಜನರ ಆಕ್ರೋಶಕ್ಕೆ ಗುರಿಯಾಗಿದೆ.
===================================================
ಮಹಾರಾಷ್ಟ್ರ ಸಕರ್ಾರ ಕಾಳಮ್ಮವಾಡಿ ಜಲಾಶಯದ ಮೂಲಕ ದೂಧಗಂಗಾ ನದಿಗೆ ನೀರು ಹರಿಸಿದ್ದರಿಂದ ನಿಪ್ಪಾಣಿ ಮತ್ತು ಚಿಕ್ಕೋಡಿ ಭಾಗದ ಜನರಿಗೆ ಅನುಕೂಲ ಕಲ್ಪಿಸಿದೆ. ಅದರಂತೆ ಕೃಷ್ಣಾ ನದಿಗೆ ಕೊಯ್ನಾದಿಂದ ನೀರು ಹರಿಸಿ ಕೃಷ್ಣಾ ನದಿ ತೀರದ ಜನರಿಗೆ ಅನುಕೂಲ ಕಲ್ಪಿಸಬೇಕು. ಮಹಾ ಸಕರ್ಾರ ವಿಳಂಭ ಧೋರಣೆ ಅನುಸರಿಸದೇ ಶೀಘ್ರವಾಗಿ ನೀರು ಹರಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು.
ರಮೇಶ ಪಾಟೀಲ
ಶೇತಕರಿ ಸಂಘಟನೆ ಮುಖಂಡರು ಭೋಜ.
========================================
ಕೃಷ್ಣಾ ನದಿಗೆ ನೀರು ಹರಿಸಲು ರಾಜ್ಯ ಸಕರ್ಾರ ಸಾಕಷ್ಟು ಪ್ರಯತ್ನ ನಡೆಸಿದೆ. ನದಿ ಪಾತ್ರದಲ್ಲಿ ನೀರಿನ ಸಮಸ್ಯೆ ಉಂಟಾದರೇ ಟ್ಯಾಂಕರ ಮೂಲಕ ಹಾಗೂ ಈಗೀರುವ ಕೊಳವೆಬಾವಿ ಮೂಲಕ ನೀರು ಕೊಡಲು ಸಕರ್ಾರ ಬದ್ಧವಾಗಿದೆ. ಕುಡಿಯುವ ನೀರಿಗಾಗಿ ಸಾಕಷ್ಟು ಅನುದಾನ ಲಭ್ಯ ಇರುವದರಿಂದ ನೀರಿನ ಸಮಸ್ಯೆ ಉಂಟಾಗುವ ಹಳ್ಳಿಗಳಿಗೆ ನೀರು ಕೊಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಡಾ||ಸಂತೋಷ ಬಿರಾದಾರ
ತಹಶೀಲ್ದಾರರು ಚಿಕ್ಕೋಡಿ