ಲೋಕದರ್ಶನ ವರದಿ
ಮುಧೋಳ 13: ಮಧುರವಿ ಮಧುರವಿ ಮಂಜುಳ ನಾದದ ಮೂಲಕ ನಾಡಿನಾದ್ಯಂತ ಮನೆಯ ಮಾತಾಗಿರುವ ಚಂದನದ ಟಿ.ವ್ಹಿ. ಯ ದಕ್ಷಿಣ ವಲಯದ ವಿಶ್ರಾಂತ ಹೆಚ್ಚುವರಿ ಮಹಾನಿದರ್ೇಶಕ ಡಾ. ಮಹೇಶ ಜೋಶಿ ಅವರು ಶನಿವಾರ ನಗರಕ್ಕೆ ಬೇಟ್ಟಿ ನೀಡಿ ,ಸಾಹಿತಿಗಳು, ಬರಹಗಾರರು, ಶಿಕ್ಷಕರು, ಹಾಗೂ ಪತ್ರಕರ್ತರನ್ನು ಬೇಟ್ಟಿಯಾಗಿ, ಮುಂಬರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಾಡಿನ ಜನತೆಯ ಹಾಗೂ ಸಾಹಿತಿಗಳ ಒತ್ತಾಸೆ ಮೆರೆಗೆ ತಾವು ಆಕಾಂಕ್ಷಿಯಾಗಿದ್ದು , ಅವರೆಲ್ಲರ ಶುಭ ಹಾರೈಕೆಯ ಮೆರೆಗೆ ತಮ್ಮ ಸ್ಫದರ್ೆ ಖಚಿತವೆಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದರು.
ನಂತರ ಅವರು ಹೋಟೆಲ ವಿನಾಯಕದದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ , ತಾವು ಈಗಾಗಲೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಕನ್ನಡ ಭಾಷೆ ,ನೆಲ,ಜಲ, ರಕ್ಷಣೆಗಾಗಿ ತಮ್ಮ ಯೋಜನೆ, ಎನು ಎಂಬುದನ್ನು ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದು ಮತ್ತೆನಾದರೋ ಸಲಹೆ ಸಃಚನೆಗಳಿದ್ದರೇ ಅದನ್ನು ಸ್ವಾಗತಿಸುವ ದಾಗಿ ಅವರು ಹೇಳಿದರು. ಒಂದು ವೆಳೆ ತಾವೂ ಅಧ್ಯಕ್ಷರಾಗಿ ಆಯ್ಕೆಯಾದರೆ ಪರಿಷತ್ನಲ್ಲಿ ಉ.ಕ. ಕ್ಕೆ ಹೆಚ್ಚಿನ ಅವಕಾಶ. ಅದರಲ್ಲಿ ರನ್ನನ ಜನ್ಮಸ್ಥಳ ಮುಧೋಳದಲ್ಲಿ ಪ್ರಥಮ ಸಾಹಿತ್ಯ ಸಮಾರಂಭ ನಡೆಸಲಾಗುದೆಂದು ಅವರು ಸ್ಫಷ್ಠ ಪಡಿಸಿದರು. ಸಾಹಿತಿ ಡಾ.ಶಿವಾನಂದ ಕುಬಸದ, ಹಾಗೂ ಸಾಹಿತಿ ಪಿ.ಪಿ.ಹಿ ರೇಸೊಮಣ್ಣವರ ಮಾತನಾಡಿ. ಡಾ.ಜೋಶಿ ಅವರು ಸಜ್ಜನ ಸಾಹಿತಿಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಅವರು ಸೂಕ್ತರಾಗಿದ್ದಾರೆಂದರು. ಸಾಹಿತಿ ಸಿದ್ದಣ್ಣ ಬಾಡಗಿ ಸ್ವಾಗತಿಸಿದರು ಗುರುರಾಜ ಕಟ್ಟಿ ವಂದಿಸಿದರು.