ಶಿಕ್ಷಣ ಪಡೆಯುವುದು ಅಂಕಕ್ಕಲ್ಲ ಜ್ಞಾನಕ್ಕೆ : ಶಾಸಕ ಲಮಾಣಿ
ಶಿರಹಟ್ಟಿ 08: ಪ್ರತಿಯೊಬ್ಬರ ಬಾಳಿನಲ್ಲಿ ಶಿಕ್ಷಣ ಅತೀಅವಶ್ಯಕವಾಗಿದ್ದು, ಶಿಕ್ಷಣದ ಮೂಲಕ ಜೀವನ ಬೆಳಕು ಕಾಣಬೇಕು. ನಾವು ಇಂದು ಅಂಕಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ ಎನ್ನುವ ವಾತಾವರಣವಿದ್ದು, ಶಿಕ್ಷಣ ಪಡೆಯುವುದು ಅಂಕಕ್ಕಲ್ಲ ಜ್ಞಾನಕ್ಕಾಗಿ ಎಂಬುವುದನ್ನು ಅರಿತುಕೊಳ್ಳವುದು ಅವಶ್ಯವಿದೆ ಎಂದು ಶಾಸಕ ಡಾ. ಚಂದ್ರ ಲಮಾಣಿ ಹೇಳಿದರು.
ಅವರು ಪಟ್ಟಣದ ಶ್ರೀ ಫಕ್ಕಿರ್ಪ ಭರಮಪ್ಪ ಪೂಜಾರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ 2025 ಬೆಳಗು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದು ಇಲ್ಲ. ಶಾಶ್ವತವಾದ ಬದುಕಿನ ರೂಪರೇಷೆಗಳನ್ನು ರೂಪಿಸಿಕೊಳ್ಳುವುದಕ್ಕಾಗಿ ಶಿಕ್ಷಣ ಅವಶ್ಯಕಾರಿಯಾಗಿದೆ ಶಿಕ್ಷಣಕ್ಕೆ ಬಡತನ ಮತ್ತು ಜಾತಿ ವ್ಯೆವಸ್ಥೆ ಅಡ್ಡಿಪಡಿಸಲಾರದು,ಯಾರು ಏಕಾಗ್ರತೆಯಿಂದ ಪರಿಶ್ರಮದಿಂದ ಅಧ್ಯಯನ ಮಾಡುತ್ತಾರೆಯೋ ಅವರು ಯಶಸ್ವಿಯಾಗುತ್ತಾರೆ. ಪ್ರತಿಯೊಬ್ಬರೂ ಹೊಸತನವನ್ನು ರೂಢಿಸಿಕೊಂಡಾಗ ಮಾತ್ರ ಬದಲಾವಣೆಯಾಗಲು ಸಾದ್ಯ ಎಂದು ಹೇಳಿದರು.
ಕಾಲೇಜು ಆವರಣದಲ್ಲಿ ಶೌಚಾಲಯವನ್ನು ರೂಪಿಸಲು 6 ಲಕ್ಷ ಮೊತ್ತದ ಕಾಗಮಾರಿಗೆ ಭೂಮಿಪೂಜೆಯನ್ನು ನೆರವೇರಿಸಿದರು. ಹಾಗೆ ಕಾಲೇಜು ಆವರಣದಲ್ಲಿ ಕಂಪೌಂಡ ನಿರ್ಮಿಸಲು 14 ಲಕ್ಷದ ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಬಿಜಿ.ಗಿರಿತಿಮ್ಮಣ್ಣವರ ಮಾತನಾಡಿದರು ಶಾಸಕರು ನಮ್ಮ ಕಾಲೇಜಿನ ಮೇಲೆ ಪ್ರೀತಿ ಇಟ್ಟು ವಿದಾರ್ಥಿಗಳಿಗೆ ಅನುಕೂಲಕರವಾದ ಮೂಲಭೂತ ಸೌಕರ್ಯ ಒದಗಿಸುತ್ತಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳ ಪ್ರಗತಿ ಮತ್ತು ಕಾರ್ಯಚಟುವಟಿಕೆಗಳನ್ನು ಅವಲೋಕಿಸಿದ್ದಾರೆ. ವಿದ್ಯಾರ್ಥಿಗಳಿಗಾಗಿ ಉಚಿತ ತರಬೇತಿ ನೀಡುವವರಿಗಿದ್ದಾರೆ. ಇಂತಹ ಹತ್ತು ಹಲವು ಕಾರ್ಯಗಳನ್ನು ವೈಯುಕ್ತಿವಾಗಿ ನೆರವೇರಿಸುತ್ತಾ ಬಂದವರಾಗಿದ್ದಾರೆ ಎಂದು ಶಾಸಕರ ಕಾರ್ಯ ವೈಖರಿಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಭೂದಾನಿ ಫರಸಪ್ಪ ಪೂಜಾರ, ಕೆ.ಎ.ಬಳಿಗೇರ, ನಟರಾಜ ರಾನಡೆ, ಶ್ರೀನಿವಾಸ ಕಪಟಕರ, ಉಪನ್ಯಾಸಕರಾದ,ಎಸ್.ವಾಯ್ ಮುಜಾವರ, ನಿಂಗರಾಜ ಯತ್ನಳ್ಳಿ, ರಾಜೇಶ್ವರಿ ಸಂಶಿ, ಸುಜಿತ ಕೋಳಿ, ಕೊಟ್ರಯ್ಯ ಹೊಂಬಾಳಿಮಠ, ಮಲ್ಲಪ್ಪ ಹರ್ತಿ,ಫಕ್ಕಿರಗೌಡ ಪಾಟೀಲ್, ಚಂದನ ಹಿರೇಮಠ, ಪೀರುಬಾಬು ರಮೇಶ ಲಮಾಣಿ, ಮುಂತಾದವರು ಉಪಸ್ಥಿತರಿದ್ದರು.