ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರಿಗೆ ಉದ್ಯಮಶೀಲತಾ ತರಬೇತಿ ಮಹಿಳಾ ಉದ್ಯಮಿಯಾಗಿ, ಉದ್ಯೋಗ ನೀಡಿ
ಗದಗ 10 : ಮಹಿಳೆಯರಿಗಾಗಿ ಇರುವ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದು, ಮಹಿಳಾ ಉದ್ಯಮಿಯರಾಗಿ, ಉದ್ಯೋಗ ನೀಡಿ ಎಂದು ಹುಲಕೋಟಿ ಕೆ. ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಅಡ್ವೈಜರ್ ಡಾ.ಎಲ್. ಜಿ. ಹಿರೇಗೌಡರ ಹೇಳಿದರು.ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಬೆಂಗಳೂರು ಇವರ ಪ್ರಾಯೋಜಿಕತ್ವದಲ್ಲಿ ಕರ್ನಾಟಕ ಉದ್ಯಮ ಶೀಲತಾಬಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರ ಸಂಕಲ್ಪ ಯೋಜನೆಯಡಿ ಗದಗ ಜಿಲ್ಲೆಯ ರಾಷ್ಟ್ರೀಯ ಜೀವನೋಪಾಯಡಿ ಆಯ್ಕೆಯಾದ ವಿವಿಧ ನಗರ ಸ್ಥಳಿಯ ಸಂಸ್ಥೆ ವ್ಯಾಪ್ತಿಯ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರಿಗೆ 5 ದಿನದ ವಸತಿಯುತ ಉದ್ಯಮಶೀಲತಾ ತರಬೇತಿಯನ್ನು (10-02-2025) ಸೋಮವಾರ ಕೃಸಿಷಿ ವಿಜ್ಞಾನ ಕೇಂದ್ರ, ಹುಲಕೋಟಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸಹ ಪ್ರಸ್ತುತ ದಿನಮಾನಗಳ್ಲಿ ಯಾವುದೇ ರಂಗದಲ್ಲೂ ಹಿಂದುಳಿದಿಲ್ಲ. ಸ್ವತಃ ಅವರೆ ಹಲವಾರು ಮಹಿಳಾ ಗುಂಪುಗಳನ್ನು ರಚಿಸಿಕೊಂಡು ಉದ್ಯೋಗ ಸೃಷ್ಠಿ ಮಾಡುವ ಮೂಲಕ ದೇಶದ ಆರ್ಥಿಕತೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಿಡಾಕ್ ಧಾರವಾಡದ ಜಂಟಿನಿರ್ದೇಶಕ ಸಿ. ಎಚ್. ಅಂಗಡಿ, ಸಿಡಾಕ್ ತರಬೇತಿಗಳ ಬಗ್ಗೆ ವಿವರಿಸಿ, ತಾವೆಲ್ಲರೂ ತರಬೇತಿ ಪಡೆದು ಉದ್ಯಮ ಆರಂಭಿಸಿ ಸರ್ಕಾರದ ಸಾಲಸೌಲಭ್ಯ ಪಡೆಯಿರಿ ಎಂದು ಹೇಳಿದರು.ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವರಾಜ ಮಲ್ಲೂರ ಭಾಗವಹಿಸಿ ಶೀಭಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ತಾವು ಪ್ರತಿಯೊಬ್ಬರು ಸ್ಥಾಪಿಸಬಹುದಾದ ಉದ್ಯಮಗಳ ಯೋಜನಾ ವರದಿಗಳನ್ನು ತಯಾರಿಸಲು ತಿಳಿಸಿದರು.
ಡೇ-ನಲ್ಮ್ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಅಮರೇಶ. ಆರ್, ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು. ಹಾಗೂ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಹೇಳಿದರು. ಸಿಡಾಕ್ ವತಿಯಿಂದ ಗದಗ ಜಿಲ್ಲೆಯಲ್ಲಿ ತರಬೇತಿ ಪಡೆದು, ಯಶಸ್ವಿ ಉದ್ಯಮಿಯಾದ ಶಕುಂತಲಾ ಮುಳಗುಂದ ಭಾಗವಹಿಸಿ ತಮ್ಮ ಅನುಭವ ಹಂಚಿಕೊಂಡರು.ತರಬೇತಿ ಮೊದಲನೆ ದಿನದ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ ದೇಶಪಾಂಡೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಮಂಜುನಾಥ ಮುಳಗುಂದ ನಿರೂಪಿಸಿ, ವಂಧಿಸಿದರು. ವಿಜಯಲಕ್ಷಿ-್ಮ ನೆಲ್ಲೂರ ಕಾರ್ಯಕ್ರಮದ ವಿವರ ನೀಡಿದರು.