ವಿದ್ಯುತ್ ಶಾರ್ಟ ಸಕರ್ಿಟ್ನಿಂದ ಬೆಂಕಿ: ಕಬ್ಬು ಬೆಳೆ ಕರಕಲು


ಬೈಲಹೊಂಗಲ 22: ತಾಲೂಕಿನ ಬೂದಿಹಾಳ ಗ್ರಾಮದಲ್ಲಿ  ಆಕಸ್ಮಿಕವಾಗಿ ವಿದ್ಯುತ್ ಶಾರ್ಟ ಸಕರ್ಿಟಗೊಂಡು ಕಬ್ಬಿನ ತೋಟಕ್ಕೆ ಬೆಂಕಿ ತಗುಲಿ ಅಂದಾಜು ರೂ. 2.5 ಲಕ್ಷ  ಕಬ್ಬು ಸುಟ್ಟು  ಕರಕಲಾದ ಘಟನೆ ಗುರುವಾರ ಜರುಗಿದೆ.

   ಬೂದಿಹಾಳ ಗ್ರಾಮದ ಬಸಪ್ಪ ಕಲ್ಲಪ್ಪ ಮಡಿವಾಳರ ಅವರಿಗೆ ಸೇರಿದ ಸುಮಾರು 4 ಎಕರೆ ಕಬ್ಬಿನಲ್ಲಿ 3 ಎಕರೆ ಕಬ್ಬು ಸುಟ್ಟಿದೆ. 1 ಏಕರೆ ಕಬ್ಬು ಅರೆಬರೆ ಸುಟ್ಟಿದ್ದು ಬೆಂಕಿ ಜಳಕ್ಕೆ ಅಕ್ಕಪಕ್ಕದ ಜಮೀನಿನ ಅಲ್ಪಸ್ವಲ್ಪ ಹಾನಿಯಾಗಿದೆ. 

ಜಮೀನಿನಲ್ಲಿ ಕಬ್ಬು ಬೆಳೆದು ಕಟಾವಿಗೆ ಬಂದಿತ್ತು. ಗುರುವಾರ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಬ್ಬು ಬೆಳೆ ನಾಶವಾಗಿದೆ. ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ  ಬೈಲಹೊಂಗಲ ಅಗ್ನಿಶಾಮಕ ದಳದ ಠಾಣಾಧಿಕಾರಿ ಮಂಜುನಾಥ ಕಲಾದಗಿ ಹಾಗೂ ಸಿಬ್ಬಂದಿ ವರ್ಗ ಧಾವಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಯಾವುದೇ ಪ್ರಾಣಹಾನಿ ಆಗಿಲ್ಲವೆಂದು ತಿಳಿಸಿದ್ದಾರೆ.

ಪೊಟೊ ಕ್ಯಾಪ್ಸನ:ಎಚ್22-ಬಿಎಲ್ಎಚ್6 ಎ&ಬಿ

ಬೂದಿಹಾಳ ಗ್ರಾಮದಲ್ಲಿ ವಿದ್ಯುತ್ ಶಾರ್ಟ ಸಕರ್ಿಟಗೊಂಡು ಕಬ್ಬಿನ ತೋಟಕ್ಕೆ ಬೆಂಕಿ ತಗುಲಿರುವುದು.