ಎಲ್ಲಾ ದಾನಕ್ಕಿಂತ ಅನ್ನದಾನ ಶ್ರೇಷ್ಠ : ಬಸವರಾಜ ಶಿವಣ್ಣನವರ

Food donation is greater than all donations : Basavaraja Sivannavara

ಎಲ್ಲಾ ದಾನಕ್ಕಿಂತ ಅನ್ನದಾನ ಶ್ರೇಷ್ಠ : ಬಸವರಾಜ ಶಿವಣ್ಣನವರ 

ಬ್ಯಾಡಗಿ  02: ಎಲ್ಲಾ ದಾನಕ್ಕಿಂತ ಅನ್ನದಾನ ಶ್ರೇಷ್ಠ. ಅಡುಗೆ ಸಿಬ್ಬಂದಿ ಪೌಷ್ಟಿಕ ಆಹಾರ ತಯಾರಿಸಿ ನೀಡುವುದರಿಂದ ಮಕ್ಕಳು ಆರೋಗ್ಯವಂತರಾಗಿ ಸಮಾಜದಲ್ಲಿ ಸತ್ಪ್ರಜೆಯಾಗಿ ದೇಶದ ಆಸ್ತಿಯಾಗುತ್ತಾರೆ. ಇದಕ್ಕೆ ಅಡುಗೆ ಸಿಬ್ಬಂದಿ ಕೊಡುಗೆ ಅನನ್ಯ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ಶನಿವಾರ ಅವರು ಪಟ್ಟಣದ ಎನ್ ಬಿಬಿ ಲೈನ್ಸ್‌ ಶಾಲೆಯ ಸಭಾಭವನದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಸಿಬ್ಬಂದಿಗೆ ಏರಿ​‍್ಡಸಿದ್ದ  ಒಂದು ದಿನದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಶಾಲಾ ಮಕ್ಕಳು ಹಸಿವಿನಿಂದ ಪಾಠ ಪ್ರವಚನ ಕಲಿಯಲು ಅಸಾಧ್ಯ ಎಂದು ತಿಳಿದ ಸರ್ಕಾರ 1ರಿಂದ 10 ನೇ ತರಗತಿವರಿಗಿನ ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ.  

ಬಿಸಿಯೂಟದ ಸಂಪೂರ್ಣ ಯಶಸ್ಸು ಅಡುಗೆ ಸಿಬ್ಬಂದಿಯವರ ಮೇಲಿದ್ದು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ಅಡುಗೆ ಸಿಬ್ಬಂದಿ ಅಡುಗೆ ಮನೆ ಮತ್ತು ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡುವ ಜತೆಗೆ ಶಾಲೆಗೆ ಬರುವ ಆಹಾರ ಧಾನ್ಯ ಪರೀಶೀಲಿಸಿ ಗುಣಮಟ್ಟ ಖಾತರಿ ಪಡಿಸಿಕೊಳ್ಳಬೇಕು ಎಂದರು.ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಮಾತನಾಡಿ ಆಹಾರ ಪದಾರ್ಥಕ್ಕೆ ತರಕಾರಿ ಬಳಸಿಕೊಳ್ಳುವ ಮುನ್ನ ಅವುಗಳ ಸ್ವಚ್ಛತೆಗೆ ಮಹತ್ವ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಅಡುಗೆ ಕೆಲಸದಲ್ಲಿ ನಿರತರಾಗಿರುವ ಸಿಬ್ಬಂದಿ ಅದನ್ನು ಸೇವೆ ಎಂದು ಪರಿಗಣಿಸಿ ಅರಾ​‍್ಣಭಾವದಿಂದ ದುಡಿಯಬೇಕು. ಬಿಸಿಯೂಟದ ಹಿಂದೆ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕೆಂಬ ಉದ್ದೇಶವಿದ್ದು ಯಾವುದೇ ಕಾರಣಕ್ಕೂ ಅಡುಗೆ ಸಿಬ್ಬಂದಿ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂದರು.ತಾಲೂಕಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ.ಎನ್‌. ಹುಲ್ಯಾಳ ಮಾತನಾಡಿ ಅಡುಗೆ ಮಾಡುವುದರ ಜತೆಗೆ, ಅದನ್ನು ಸಂರಕ್ಷಿಸುವ ಕೆಲಸವು ನಿಮ್ಮದಾಗಿರುತ್ತದೆ. ಸರಕಾರ ಅಕ್ಷರ ದಾಸೋಹ ಯೋಜನೆಗೆ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ.  

ಇದು ಸದುಪಯೋಗವಾಗಬೇಕಾದರೆ ನೀವು ನಿಮ್ಮ ಜವಾಬ್ದಾರಿ ಅರಿತು ನಡೆಯಬೇಕೆಂದರು.ಅಡುಗೆ ಸಿಬ್ಬಂದಿಗೆ ಗ್ಯಾಸ್ ಬಳಕೆ ಬಗ್ಗೆ ಸುದೀರ ಹವಳದ ಮಾಹಿತಿ ನೀಡಿದರು. ಅಗ್ನಿ ದುರಂತಗಳು ಸಂಭವಿಸದಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಕೂಡಾ  ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಎ ಆಯ್ ಟಿಯುಸಿ ಸಂಘಟನೆ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಪ್ರಧಾನ ಶಿಕ್ಷಕ ಎನ್‌.ತಿಮ್ಮಾರಡ್ಡಿ, ಬಿಇಓ ಎಸ್‌.ಜಿ.ಕೋಟಿ, ಮಾತನಾಡಿದರು. ಸುರೇಶಗೌಡ ಪಾಟೀಲ, ದುರ್ಗೇಶ  ಗೊಣೆಮ್ಮನವರ, ಎಂ.ಎಫ್‌. ಕರಿಯಣ್ಣನವರ, ಸರೋಜಮ್ಮ ಸೇರಿದಂತೆ ಇತರರಿದ್ದರು.