ಸಾರ್ವಜನಿಕರ ಗಮನಕ್ಕೆ

For public attention

ಸಾರ್ವಜನಿಕರ ಗಮನಕ್ಕೆ 

ಗದಗ 18: ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಮೈಕ್ರೋ ಫನಾನ್ಸ್‌ ಕಂಪನಿಗಳು ಸಾಲ ವಸೂಲಾತಿ ನೆಪದಲ್ಲಿ ಸಾಲಗಾರರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಜಾಸ್ತಿ0ಾಗುತ್ತಿರುವುದರಿಂದ ಕರ್ನಾಟಕ ಸರಕಾರವು ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆದ್ಯಾದೇಶ, 2025 ನ್ನು ದಿನಾಂಕ: 12-02-2025 ರಿಂದ ಜಾರಿಗೊಳಿಸಿರುತ್ತದೆ. ಈ ಆದ್ಯಾದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಸಾರ್ವಜನಿಕರಿಗೆ ಮೈಕ್ರೋ ಫೈನಾನ್ಸ್‌ ಸಂಸ್ಥೆ0ುವರು ನೀಡಬಹುದಾದ ಕಿರುಕುಳ ಹಾಗೂ ಬೆದರಿಕೆ0ುನ್ನು ವರದಿ ಮಾಡಿಕೊಳ್ಳಲು ಪ್ರತಿ ಜಿಲ್ಲಾಧಿಕಾರಿ ಕಚೇರಿ0ುಲ್ಲಿ ಸಹಾ0ುವಾಣಿ ಆರಂಭಿಸಲು ಸೂಚನೆ ನೀಡಲಾಗಿರುವುದರಿಂದ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕರ ಅಹವಾಲುಗಳಿಗೆ ತಕ್ಕಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷ0ುವನ್ನು ತಿಳಿಸಲು (08372-239177) ಹೆಲ್ಸ್‌ ಡೆಸ್ಕ- ಅನ್ನು  ತೆರೆ0ುಲಾಗಿದೆ.   ಜಿಲ್ಲೆ0ು ಸಾರ್ವಜನಿಕರು ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ವಿರುದ್ಧ ತಮ್ಮ ಕಿರುಕುಳ ಹಾಗೂ ಬೆದರಿಕೆ ದೂರುಗಳಿದ್ದಲ್ಲಿ ಹೆಲ್ಪ್‌ ಡೆಸ್ಕ್‌ ಅನ್ನು ಸಂಪರ್ಕಿಸಲು ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.