ಗದಗ ಜಿಲ್ಲಾ ಚಲವಾದಿ ಸಮುದಾಯದ ಅಭಿವೃದ್ಧಿಗೆ :ಯೋಜನಾವರದಿಯ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಕೆಗೆ ನಿರ್ಧಾರ :ಎಲ್ ನಾರಾಯಣಸ್ವಾಮಿ
ಗದಗ 10 : ಜಿಲ್ಲೆಯಲ್ಲಿ ಚಲವಾದಿ ಸಮುದಾಯ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ದಿಯಾಗದೇ ಹಿಂದೂಳಿದಿದ್ದು ಮತ್ತು ಶೈಕ್ಷಣಿಕವಾಗಿ ಆರ್ಥಿಕವಾಗಿ ಅಭಿವೃದ್ದಿ ಪಡಿಸುವ ಸಲುವಾಗಿ ರಾಜ್ಯದ ಚಲವಾದಿ ಸಮಾಜದ ಸಚಿವರು ಶಾಸಕರು ಮತ್ತು ಶ್ರೀಗಳು ಮುಂದಾಗಿರುವ ಕಾರಣ ಗದಗ ಜಿಲ್ಲೆಯ ಚಲವಾದಿ ಸಮುದಾಯದ ಸಮಗ್ರ ಸಮಸ್ಯೆಗಳನ್ನು ಮತ್ತು ಅಭಿವೃದ್ಧಿಗೆ ಪೂರಕವಾಗುವ ಅಂಶಗಳನ್ನು ಸಮೀಕ್ಷೆಗಳ ಮೂಲಕ ಕಂಡುಕೊಂಡು ಗದಗ ಜಿಲ್ಲೆ ಸಂಪೂರ್ಣ ಯೋಜಾನವರದಿಯನ್ನು ತಯಾರಿಸಲಾಗುವುದು ಆದ್ದರಿಂದ ಗದಗ ಜಿಲ್ಲೆಯ ಪ್ರತಿಯೊಂದು ಗ್ರಾಮದ ಚಲವಾದಿ ಸಮುದಾಯದ ಯುವಕರು ಹಿರಿಯರು ಸಹಕಾರವನ್ನು ನೀಡಬೇಕೆಂದು ಕನಾಟಕ ರಾಜ್ಯ ಛಲವಾದಿ ಮಹಾಸಭಾ ಬೆಂಗಳೂರ ಗದಗ ಜಿಲ್ಲಾ ಅಧ್ಯಕ್ಷರಾದ ಎಲ್ ನಾರಾಯಣಸ್ವಾಮಿ ಹೇಳಿದರು
ಅವರು ರವಿವಾರ ಗದಗ ನೀರೀಕ್ಷಣಾ ಮಂದಿರದಲ್ಲಿ ಗದಗ ಜಿಲ್ಲಾ ಯೋಜನಾ ವರದಿ ತಯಾರಿಸುವ ಚಿಂತನ ಮಂಥನದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಾವು ಕಂಡಂತೆ ಸುಮಾರ 25ವರ್ಷಗಳ ಕಾಲ ಗದಗ ಜಿಲ್ಲೆಯಲ್ಲಿ ಚಲವಾದಿ ಸಮುದಾಯದ ಕುಂದು ಕೊರತೆಗಳನ್ನು ನಿವಾರಿಸುವಂತಹ ಮನಸ್ಸು ಯಾವುದೇ ರಾಜಕೀಯ ನಾಯಕರು ಮಾಡಲಿಲ್ಲ. ಚಲವಾದಿ ಸಮುದಾಯಕ್ಕೆ ಪ್ರತಿಯೊಂದು ತಾಲೂಕಿನಲ್ಲಿ ಸಮುದಾಯ ಭವನಗಳಿಲ್ಲ. ಶೈಕ್ಷಣಿಕವಾಗಿ ಮುಂದುವರೆಯುವ ವಿದ್ಯಾರ್ಥಿಗಳಿಗಳಿಗೆ ಪ್ರೋತ್ಸಾಹ ಇಲ್ಲ. ಆಗಾಗಿ ಗದಗ ಜಿಲ್ಲೆಯಲ್ಲಿ ಐಎಎಸ್/ಐಪಿಎಸ್ ಕೋಚಿಂಗ್ ಸೆಂಟರ ಸ್ಥಾಪನೆ , ಮಹಿಳೆಯರಿಗಾಗಿ ಗಾರಮೆಂಟ್ ಸ್ಥಾಪನೆ ಮತ್ತು ಬಿಗ್ ಭಜಾರ ಹಾಗೂ ಉದ್ದೀಮೆಗಳನ್ನ ಸ್ಥಾಪನೆ, ಗದಗ ಬೆಟಗೇರಿ ಡಾ.ಅಂಬೇಡ್ಕರ್ ನಗರದಲ್ಲಿ ಡಿಜಿಟಲ್ ಗ್ರಂಥಾಲಯ ಇಲ್ಲ. ಇಂತಹ ಅನೇಕ ಸಮಸ್ಯೆಗಳ ನಡುವೇ ಸಮುದಾಯದ ಮಕ್ಕಳು ಪ್ರಗತಿಯನ್ನು ಕಾಣುತ್ತಿದ್ದಾರೆ. ಇನ್ನಷ್ಟು ಪ್ರೋತ್ಸಾಹ ಸಿಕ್ಕರೆದೋರೆತರೆ ಪ್ರತಿಯೊಂದು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಚಿಂತಕರು ಜನ್ಮತಾಳುತ್ತಾರೆ .ಇವೇಲ್ಲವುಗಳನ್ನು ಗಮನಿಸಿದ ರಾಜ್ಯಾಧ್ಯಾಕ್ಷರಾದ ಮಾನ್ಯ ಸಿದ್ದಯ್ಯ ನಿವೃತ್ತ ಐಎಎಸ್ ಅಧಿಕಾರಿಗಳು. ಹಾಗೂ ಮೈಸೂರಿನ ಉರಿಲಿಂಗಿಪೆದ್ದಿ ಸಂಸ್ಥಾನ ಮಠದ ಪೂಜ್ಯರಾದ ಶ್ರೀಜ್ಞಾನಪ್ರಕಾಶ ಮಹಾಸ್ವಾಮಿಗಳವರು ಗದಗ ಜಿಲ್ಲೆಯ ಚಲವದಿ ಸಮಾಜದ ಬಗ್ಗೆ ಚಿಂತನೆ ಮಾಡಿ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಹೇಳಿದರು. ಜಿಲ್ಲೆಯಲ್ಲಿ ಚಲವಾದಿ ಸಮಾಜದ 5ಚಿಂತನ ಮಂಥನ ಸಭೆಗಳನ್ನು ನಡೆಸಿ ಸಂಪೂರ್ಣ ವರದಿ ತಯಾರಿಸಿಸಲು ತಿಳಿಸಿದ್ದು ಸಂತೋಷದ ವಿಚಾರವಾಗಿದ್ದು ಸಂಘದ ಪದಾಧಿಕಾರಿಗಳು ಶ್ರಮವಹಿಸಿ ಎಲ್ಲ ಮಾಹಿತಿಯನ್ನು ಗ್ರಾಮದಿಂದ ಪಡೆದು ಜಿಲ್ಲಾ ಸಮೀತಿಗೆ ನೀಡಬೇಕೆಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗಳಾದ ಎಚ್.ಡಿ ದೊಡ್ಡಮನಿಯವರು ಮಾತನಾಡಿ ಸಂಘಟನೆಯ ಮೂಲಕ ಸಮಾಜದ ಅಭಿವೃದ್ಧಿಗೆ ಚಿಂತನೆ ಮಾಡಿ ಚಲವಾದಿ ಸಮುದಾಯವು ಯಾವ ಕೊರತೆಯಲ್ಲಿದೆ ಎಂಬುದನ್ನು ನಾವು ಪ್ರತಿಯೊಂದು ಗ್ರಾಮದ ಮನೆಯನ್ನು ಬೇಟಿ ಮಾಡಿ ಏನು ಸಮಸ್ಯೆ ಇದೆ ಅವುಗಳನ್ನು ಪಟ್ಟಿ ಮಾಡುವ ಮಹತ್ವದ ಕಾರ್ಯಕ್ಕೆ ಪಕ್ಷ ಬೇದ ಮರೆತು ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಿ ಯೋಜನಾ ವರದಿ ತಯಾರಿಸೋಣ ಎಂದು ಹೇಳಿದರು.
ಹೊಂಬಳ ಗ್ರಾಮ ಪಂಚಯಾತ್ ಸದಸ್ಯರಾದ ಬಸವರಾಜ ಹುಣಸಿಮರದ ಚಲವಾದಿ ಸಮುದಾಯದ ಮುಖಂಡರಾದ ಪ್ರಕಾಶ ಕೆಲೂರು. ರಮೇಶ ಬಾಳಮ್ಮನವರ ಸಿದ್ದಪ್ಪ ಲಿಂಗದಾಳ,ರವಿ ಕರಬಸಣ್ಣವರ ಬಸಪ್ಪ ಸಣ್ಣಕ್ಕಿ ಲೋಹಿತ್ ಬಿಳೆಯಲಿ ಯಮನೂರ್ಪ ಹೊಸಳ್ಳಿ ಮಹಾಂತೇಶ ಮದ್ನೂರ ಯಲ್ಲಪ್ಪ ನಡುವಿನಮನಿ ಬಸವರಾಜ ಚಲವಾದಿ .ಪರಶುರಾಮ ದನದಮನಿ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಬಸವರಾಜ ಸತ್ಯಮ್ಮನವರ ನಿರೂಪಿಸಿದರು. ಮಂಜುನಾಥ ದೊಡ್ಡಮನಿ ಸ್ವಾಗತಿಸಿದರು.ಅರುಣ ಅಸೂಟಿ ಕೊನೆಯಲ್ಲಿ ವಂದಿಸಿದರು. ಮಾನ್ಯ ಸಂಪಾದಕರು/ ವರದಿಗಾರರು ಗದಗ ಜಿಲ್ಲೆ ಇವರಿಗೆಈ ಸುದ್ದಿಯನ್ನು ಪ್ರಕಟಿಸಲು ವಿನಂತಿಸಿಕೊಳ್ಳುತ್ತೇನೆ