ಲೋಕದರ್ಶನವರದಿ
ಹಾವೇರಿ : ಮರಳು ಸಾಗಾಣಿಕೆದಾರರೊಂದಿಗೆ ಲಂಚ ಪಡೆದುಕೊಂಡು ರಾಜ್ಯದ ಖನಿಜ ಸಂಪತ್ತನ್ನು ಲೂಟಿ ಮಾಡುತ್ತಿರುವ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಹಾವೇರಿ ಉಪವಿಭಾಗಾಧಿಕಾರಿಗಳಿಗೆ ಕನರ್ಾಟಕ ರಕ್ಷಣಾ ವೇರಿಕೆಯ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ತಾಲೂಕು ದಂಡಾಧಿಕಾರಿಗಳು ಶಿವುಕುಮಾರ ಹೆಚ್ ಸಿ ಅಕ್ರಮ ಮರಳು ಸಾಗಾಣಿಕೆದಾರರೊಂದಿಗೆ ಅವ್ಯವಹಾರ ಮಾಡಿಕೊಂಡ ವಿಚಾರ ಅಧಿಕಾರಿಗಳ ಹಣದ ವಾಮೋಹ ತಿಳಿಸಿಕೊಡುತ್ತಿದೆ.
ಅಕ್ರಮ ಮರಳು ಸಾಗಾಣಿಕೆ ದಾರರು ಪ್ರತಿದಿನ ತಮ್ಮ ಲಾರಿಗಳಲ್ಲಿ ಮರುಳನ್ನು ತುಂಬಿಕೊಂಡು ಹೋಗಲು ಸದರ ದಂಡಾಧಿಕಾಯು ತಲಾ ಒಂದು ಲಾರಿಗೆ 15000 ರೂ ಗಳಂತೆ ಪ್ರತಿಯೊಂದು ಲಾರಿಗೆ ಬೇಡಿಕೆ ಮಾಡುತ್ತಾರೆ.
ಒಂದೇ ಒಂದು ಲಾರಿಗೆ ಇಷ್ಟು ಲಂಚ ಒಬ್ಬ ಅಧಿಕಾರಿ ತೆಗೆದುಕೊಂಡರೆ ಆ ಮರಳನ್ನು ಕೊಳ್ಳುವವನ ಪರಿಸ್ಥಿತಿಯು ಏನಾಗುತ್ತದೆ ? ಇದೇ ರೀತಿ ಮೇಲಧಿಕಾರಿಗಳೇ ಲಂಚದ ಮುಖಾಂತರ ಇಂತಹ ಅಕ್ರಮಗಳನ್ನು ಮಾಡಲು ಮುಂದಾದರೆ ರಾಜ್ಯದ ಖನಿಜ ಸಂಪತ್ತು ಉಳುಯುವದು ಹೇಗೆ? ಬಡ ಜನರು ಮನೆ ಕಟ್ಟುವದು ಹೇಗೆ ? ಕಾರಣ ಇಂತಹ ಲಂಚಕೋರ ಅಧಿಕಾರಿಗಳು ನಮ್ಮ ರಾಜ್ಯಕ್ಕೆ ಬೇಡ ಸದರ ಅಧಿಕಾರಿಗಳನ್ನು ಸರಿಯಾದ ತನಿಖೆ ನಡೆಸಿ ಅಮಾನತ್ತು ಮಾಡಬೇಕು.ಸದರ ದಂಡಾಧಿಕಾರಿಗಳನ್ನು ಅಮಾನತುಗೊಳಿಸದಿದ್ದಲ್ಲಿ ನಮ್ಮ ಸಂಘಟನೆಯು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಅಧ್ಯಕ್ಷರಾದ ಸತೀಶಗೌಡ ಜೀ ಮುದಿಗೌಡ್ರ. ಮುಖಂಡ ನಂದೀಶ ಗೊಡ್ಡೆಮ್ಮಿ.ಯಶವಂತಗೌಡ ದೊಡ್ಡಗೌಡ್ರ. ಗಿರೀಶ ಬಾಕರ್ಿ.ಕೊಟ್ರೇಶ ಜಿ ಎಸ್.ಕರಿಯಪ್ಪ ಕೊರವರ.ಬಸವರಾಜ ಹೊಂಭರಡಿ,ರಾಮಕೃಷ್ಣ ಅಕುಡಕರ ಹಾಲೇಶ ಹಾಲಣ್ಣನವರ.ದಾದಾಪೀರ ಖಾಲೇ ಖಾನನವರ ಸುನೀಲ ಬೇಂದ್ರೆ, ಚನ್ನಪ್ಪ ಹೊನ್ನಮ್ಮನವರ.ಗೌಸಪಾಕ ಭಾಲೇಬಾಯಿ.ಶಿವಯೋಗೆಪ್ಪ ನಲವತ್ತವಾಡ. ಫಕ್ಕೀರಯ್ಯ ಓದ್ಸುವ್ಮಠ. ಶೇಖಪ್ಪ ನರಸಣ್ಣನವರ. ಪ್ರಸಾದ ಈಳಿಗೇರ ಅನೇಕರಿದ್ದರು.