ಸಂಯೋಜನೆಯ ಸಂಚಾರಿ ಪುನರ್ವಸತಿ ತಜ್ಞರ ತಂಡದಿಂದ ಆಯೋಜಿಸಿದ ವಿಕಲಚೇತನರಿಗೆ ಉಚಿತ ತಪಾಸಣಾ ಹಾಗೂ ಅರಿವು ಮೂಡಿಸುವ ಶಿಬಿರ

Free check-up and awareness camp for the differently abled organized by a team of integrated mobili

ಸಂಯೋಜನೆಯ ಸಂಚಾರಿ ಪುನರ್ವಸತಿ ತಜ್ಞರ ತಂಡದಿಂದ ಆಯೋಜಿಸಿದ ವಿಕಲಚೇತನರಿಗೆ ಉಚಿತ ತಪಾಸಣಾ ಹಾಗೂ ಅರಿವು ಮೂಡಿಸುವ ಶಿಬಿರ 

ಸವಣೂರ 16  :ವಿಕಲಚೇತನರ ಬದುಕಿನ ಹಾಗೂ ಅವರ ಆಸಕ್ತಿ ಕ್ಷೇತ್ರಗಳ ಅಭಿವೃದ್ಧಿಗೆ ನಾವೆಲ್ಲರೂ ಸದಾ ಬದ್ಧರಾಗಿ ಕೆಲಸ ಮಾಡೋಣ.ವಿಕಲಚೇತನರು ಸರ್ಕಾರ-ಇಲಾಖೆಯ  ಸೌಲಭ್ಯಗಳನ್ನು ಪಡೆದು ಅರ್ಥಿಕವಾಗಿ ಬಲಿಷ್ಠರಾಗುವುದರ ಜೊತೆಗೆ ಆತ್ಮಸ್ಥೈರ್ಯದಿಂದ ಬದುಕಿನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಸಹಕಾರ್ಯದರ್ಶಿಗಳು ಹಾಗೂ ಹಿರೇಮುಗದೂರ ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಪ್ಪ ಎಂ ಆರೇರ ಹೇಳಿದರು. 

       ತಾಲ್ಲೂಕಿನ ಹಿರೇಮುಗದೂರ  ಗ್ರಾಪಂ ನಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ  ಪುನರ್ವಸತಿ ಕೇಂದ್ರ,ಹಿರೇಮುಗದೂರ ಗ್ರಾಪಂ ಸಂಯೋಜನೆಯ ಸಂಚಾರಿ ಪುನರ್ವಸತಿ ತಜ್ಞರ ತಂಡದಿಂದ ಆಯೋಜಿಸಿದ ವಿಕಲಚೇತನರಿಗೆ ಉಚಿತ ತಪಾಸಣಾ ಹಾಗೂ ಅರಿವು ಮೂಡಿಸುವ ಶಿಬಿರದಲ್ಲಿ ಅವರು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. 

       ಆತ್ಮಬಲದಿಂದ ಹಾಗೂ ಎಲ್ಲರಂತೆ ವಿಕಲಚೇತನರು ಬದುಕು ನಡೆಸಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹಾಗೂ ಇಲಾಖೆಯ ಹಲವಾರು ಮಹತ್ವ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳನ್ನು ಮುಟ್ಟಿಸಲು ಸ್ಥಳೀಯ ಸರ್ಕಾರಗಳು ಮತ್ತು ಇಲಾಖೆಯ ಅಧಿಕಾರ ಪ್ರಾಮಾಣಿಕ ಕೆಲಸ ಮಾಡುವುದು ಅಗತ್ಯವಿದೆ.ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಪುನರ್ವಸತಿ ಕೇಂದ್ರ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಸಂಚಾರ ಮಾಡಿ ತಪಾಸಣೆ ಮತ್ತು ಅರಿವು ಮೂಡಿಸಲು ಮುಂದಾಗಿದೆ.ಎಲ್ಲರೂ ಸೇರಿಕೊಂಡು ಕೆಲಸ ಮಾಡೋಣ ಎಂದು ನಿಂಗಪ್ಪ ಎಂ ಆರೇರ ಅವರು ಸರ್ಕಾರಗಳ ಸೌಲಭ್ಯಗಳನ್ನು ತಿಳಿಸಿದರು.ತಾಪಂ ಎಂಆರ್‌ಡಬ್ಲೂಗಳಾದ ಶಿವಪ್ಪ ಎರೇಶಿಮಿ ಮಾತನಾಡಿ ಸರ್ಕಾರದ ಸೌಲಭ್ಯಗಳಿಂದ ಯಾರು ವಿಕಲಚೇತನರು ವಂಚಿತರಾಬಾರದು.ತಾಲ್ಲೂಕಿನ ಎಲ್ಲಾ ವಿಕಲಚೇತನರ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಪಂ ಗಳ ಸಹಕಾರ ಅವಶ್ಯಕವಾಗಿದೆ ಎಂದರು. 

     ಡಿಡಿಆರ್‌ಸಿ ನೋಡಲ್ ಅಧಿಕಾರಿಗಳಾದ ಡಾ.ಅಂಕಿತ ಆನಂದ ಮಾತನಾಡಿ ಗ್ರಾಪಂ ಮಟ್ಟದಲ್ಲಿ ಸಮಸ್ಯೆ ಇರುವ ವಿಕಲಚೇತನರನ್ನು ಗುರುತಿಸಿ,ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು.ಅವರಿಗೆ ಚಿಕಿತ್ಸೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು. 

        ಇದೇ ಅವಧಿಯಲ್ಲಿ ಡಿಡಿಆರ್‌ಸಿ ಕಾರ್ಯವೃಂದದವರಾದ ಡಾ. ಅಂಕಿತ ಆನಂದ,ಶಿವಪ್ಪ ಯರೇಶಿಮಿ, ಇರ್ಶಾದಲಿ ದುಂಡಸಿ,ಫಕ್ಕಿರೇಶ ಬಾರ್ಕಿ ಹಾಗೂ ಜಗದೀಶ ಬೇಟಿಗೇರಿ ಇವುರುಗಳನ್ನು ಅಮ್ಮಾ ಸಂಸ್ಥೆ(ರಿ) ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ತಜ್ಞರಿಂದ ವಿಕಲಚೇತನರನ್ನು ತಪಾಸಣೆಗೆ ಒಳಪಡಿಸಿ,ಇಲಾಖೆಯ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಯಿತು.  

         ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಹನಮಂತಪ್ಪ ಸಂಗೂರ,ಗ್ರಂಥಾಲಯದ ಮೇಲ್ವಿಚಾರಕರಾದ  ಕವಿತಾ ಸೋಮಸಾಗರ,ಮಾಲತೇಶ ಕುಲಕರ್ಣಿ, ಎಂಬಿಕೆ ಗಳಾದ ವೀಣಾ ಕೆಂಬಾವಿಮಠ,ಶ್ರೀಮತಿ ವಿಜಯಲಕ್ಷ್ಮಿ ಆರೇರ,ಬಸವಣ್ಣೆಪ್ಪ ಕುರವತ್ತಿಗೌಡ್ರ,ಶ್ರೀಪಾದಗೌಡ್ರ, ಪಾಟೀಲ,ಗುಡ್ಡಪ್ಪ ಆರೇರ, ಗಂಗಾಧರ ಬಡಿಗೇರ,ಸಣ್ಣಪ್ಪ ಹೊಸಮನಿ,ನಾಗಪ್ಪ ಬಡಿಗೇರ,ಶಿವಪ್ಪ ಅರಳಿ,ಯಲ್ಲಪ್ಪ ಕೆ, ಗುಡ್ಡಪ್ಪ ಎ ಸೇರಿದಂತೆ ಗ್ರಾಪಂ ವ್ಯಾಪ್ತಿಯ ವಿಕಲಚೇತನರು ಹಾಗೂ ಗ್ರಾಪಂ ಕಾರ್ಯವೃಂದದವರು ಪಾಲ್ಗೊಂಡಿದ್ದರು.