ಜಿ.ಪಂ. ಸಿಇಒ ಅಕ್ಷಯ ಶ್ರೀಧರ್‌ಗೆ ಅತ್ಯುತ್ತಮ ಚುನಾವಣೆ ಚಟುವಟಿಕೆ ರಾಜ್ಯ ಮಟ್ಟದ ಪ್ರಶಸ್ತಿ
ಹಾವೇರಿ 25: ಅತ್ಯುತ್ತಮ ಚುನಾವಣೆ ಚಟುವಟಿಕೆಗೆ ಹಾವೇರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೆಂಗಳೂರಿನ ಪುಟ್ಟಪ್ಪ ಚಟ್ಟಿ ಟೌನ್‌ಹಾಲ್‌ನಲ್ಲಿ ಇಂದು ನಡೆದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಮಾನ್ಯ ಕರ್ನಾಟಕ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದರು.