ಜಿ. ಎಚ್. ಕಾಲೇಜಿನಲ್ಲಿ ಎನ್‌ಸಿಸಿ ದಿನಾಚರಣೆ
ಹಾವೇರಿ, 29: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಎನ್‌ಸಿಸಿ ವಿಭಾಗದ ಆಶ್ರಯದಲ್ಲಿ ಎನ್‌ಸಿಸಿ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ನಾಯಕ್ ಎಂ. ಡಿ. ಚಿಕ್ಕಣ್ಣವರ ಆಗಮಿಸಿದ್ದರು. ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಆರ್. ಕುಲಕರ್ಣಿ, ಪ್ರೊ. ಡಿ. ಎ. ಕೊಲ್ಲಾಪುರೆ, ಡಾ. ಜೆ. ಎಫ್. ಹೊಸಮನಿ, ಪಪೂ ಪ್ರಾಚಾರ್ಯ ಡಾ. ಜೆ. ಆರ್. ಶಿಂಧೆ ಉಪಸ್ಥಿತರಿದ್ದರು. ಹುಬ್ಬಳ್ಳಿ ಎನ್‌ಸಿಸಿ ವಿಭಾಗದ ಹವಾಲ್ದಾರ್ ಮಲ್ಲಿಕಾರ್ಜುನ ಎನ್‌ಸಿಸಿ ಡಾ. ನಾಗರಾಜ ಎಂ. ಸೇರಿದಂತೆ 105 ಕ್ಕೂ ಹೆಚ್ಚಿನ ಕೆಡೆಟ್‌ಗಳು ಪಾಲ್ಗೊಂಡಿದ್ದರು.