ಇಂದು ಹೋಳ್ಕರ ಅವಾರ್ಡ ಸ್ಪಧಾತ್ಮಕ ಪರೀಕ್ಷೆ: ಮದರಿ
ಮುದ್ದೇಬಿಹಾಳ 09: ಪಟ್ಟಣದ ಪ್ರತಿಷ್ಠಿತ ಅಭ್ಯೂದಯ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರವೇಶ ಪಡೆದುಕೊಳ್ಳಲು ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೋಂದಿದ ಬಡ ಕುಟುಂಬದ ಮಕ್ಕಳಿಗೆ ದಿ. 10 ಗುರುವಾರದಂದು ಬೆಳಿಗ್ಗೆ 11.30ಕ್ಕೆ ಅಭ್ಯೂದಯ ಪಿಯುಸಿ ಕಾಲೇಜಿನಲ್ಲಿ ಹೋಳ್ಕರ ಅವಾರ್ಡ ಸ್ಪಧಾತ್ಮಕ ಪರೀಕ್ಷೆ ಹಮ್ಮಿಕೊಂಡಿದ್ದು ಕಾರಣ ಪಾಲಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಅಹಿಲ್ಯಾದೇವಿ ಗ್ರಾಮಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಹಾಗೂ ಅಭ್ಯೂದಯ ಪಿಯು ಕಾಲೇಜಿನ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ತಿಳಿಸಿದರು.
ಪಟ್ಟಣದ ಅಭ್ಯೂದಯ ಪಿಯು ಸಾಯನ್ಸ್ ಕಾಲೇಜಿನಲ್ಲಿ ಮಂಗಳವಾರ ಸಂಜೆ ನಡದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೇದ ಏಳು ವರ್ಷಗಳಿಂದ ಮುದ್ದೇಬಿಹಾಳ ಪಟ್ಟಣ ತಾಲೂಕಿನ ಅಡವಿ ಹುಲಗಬಾಳ, ಕೋಳೂರು ಸೇರಿದಂತೆ ನಮ್ಮ ಶಿಕ್ಷಣ ಸಂಸ್ಥೆ 400 ಕ್ಕೂ ಹೆಚ್ಚೂ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ನಿಜವಾದ ಸಾಮಾಜಿಕ ಕಳಕಳಿ ಮೆರೆಯುತ್ತಲೇ ಬಂದಿದೆ. ಅದರಂತೆ ಪ್ರಸ್ತುತ 2025-26 ಸಾಲಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ದಾಖಲಾತಿಗಾಗಿ ಪ್ರವೇಶಗಳು ಪ್ರಾರಂಭಗೊಂಡಿರುವ ಕಾರಣ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೋಂದಿದ ಬಡ ಕುಟುಂಭದ ಮಕ್ಕಳಿಗೆ ಹೋಳ್ಕರ ಅವಾರ್ಢ ಪರಿಕ್ಷೇಯಲ್ಲಿ ಪಾಸಾದ ಟಾಪ್ 10 ವಿದ್ಯಾರ್ಥಿಗಳಿಗೆ ಎರಡು ವರ್ಷಗಳವರೆಗೆ ಉಚಿತ ಊಟ ವಸತಿ ಹಾಗೂ ಶಿಕ್ಷಣ ನೀಡಲಾಗುವುದು. ಜತೆಗೆ ಪರಿಕ್ಷೇಯಲ್ಲಿಬಾಗವಹಿಸಿ ಎಲ್ಲ ವಿದ್ಯಾರ್ಥಿಗಳು ಅಂಕ ಪಡೆದ ಆದಾರದ ಮೇಲೆ ರೀಯಾತಿ ರೀಯಾಯಿತಿಯಲ್ಲಿ ಕಾಲೇಜಿನಲ್ಲಿ ದಾಖಲಾತಿ ಮಾಡಿಕೊಳ್ಳಲಾಗುವುದು.
ಮುದ್ದೇಬಿಹಾಳ ಪಟ್ಟಣ, ಕೋಳೂರು, ತಾಲೂಕಿನ ಅಡವಿ ಹುಲಗಬಾಳದಲ್ಲಿರುವ ಅಭ್ಯೂದಯ ಇಂಟರ ನ್ಯಾಶನಲ್ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಸಧ್ಯ ಬೇಸಿಗೆ ರಜೇ ನಿಮಿತ್ಯ 45 ದಿನಗಳ ಕಾಲ ಉಚಿತ ಶಿಕ್ಷಣ ತರಬೇತಿ ಶಿಭಿರ ನಡೆಸಲಾಗುವುದು ವಿದ್ಯಾರ್ಥಿಗಳು ಯಾವೂದೇ ಶಾಲೆಯಲ್ಲಿ ದಾಖಲಾಗಿದ್ದರೂ ಚಿಂತೆಯಿಲ್ಲ ಒಟ್ಟಾರೆ ಎಲ್ಲ ವಿದ್ಯಾರ್ಥಿಗಳಿಗೆ ತರಬೇತಿಯಲ್ಲಿ ಬಾಗವಹಿಸಬಹುದಾಗಿ ತರಬೇತಿಯಲ್ಲಿ ಬಾಗವಹಿಸುವ ಎಲ್ಲ ಮಕ್ಕಳಿಗೆ ಹೋಗಿ ಬರಲು ಉಚಿತ ವಾಹನ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಅದರಂತೆ ಈಗಾಗಲೇ ಮೂರು ಶಾಲೆಗಳ ಪೈಕಿ ಈಗಾಗಲೇ ಸುಮಾರು 4500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಗೆ ದಾಖಲಾತಿ ಪಡೆದುಕೊಂಡಿದ್ದಾರೆ. ಗ್ರಾಮೀಣ ಮಕ್ಕಳು ಸಹಿತ ಶಿಕ್ಷಣದಿಂದ ವಂಚಿತರಾಗಬಾರದು ಅವರೂ ಕೂಡು ಗುಣಮಟ್ಟ ಶಿಕ್ಷಣ ಪಡೆದುಕೊಳ್ಳುವ ಅತ್ಯುನ್ನ ಸ್ಥಾನವನ್ನು ಅಲಂಕರಿಸುವಂತಾಬೇಕು ಎಂಬ ಉದ್ದೇಶ ನಮ್ಮ ಶಿಕ್ಷಣ ಸಂಸ್ಥೆಯದ್ದಾಗಿದೆ.
ಹೋಳ್ಕರ ಅವಾರ್ಡ ಪ್ರವೇಶ ಪರೀಕ್ಷೆಗೆ ಬಾಗವಹಿಸಲಿಚ್ಚಿಸುವ ವಿದ್ಯಾರ್ಥಿಗಳು 9686264710, 9663007614 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಬೇಕು ಎಂದರು.
ಅಭ್ಯೂದಯ ಪಿಯು ಸಾಯನ್ಸ್ ಕಾಲೇಜಿನ ನಿರ್ದೇಶಕ ಕಿರಣ ಮದರಿ, ಬಸವರಾಜ ಬಿಜ್ಜರ, ಬಿ.ಜಿ ಬಿರಾದಾರ,ಎಂ ಎಂ ಧನ್ನೂರ, ಆರ್ ಎಸ್ ಜಡಗಿ, ವಿರೇಶ ಹೂಲಿಕೇರಿ ಸೇರಿದಂತೆ ಹಸಿಬ್ಬಂದಿಗಳು ಇದ್ದರು.